Find Articles

Loading...
My bookmarks 0

Open National Level Yoga Competition in Bangalore


ಸಾಧನ ಯೋಗ ಮತ್ತು ಕ್ರೀಡಾ ಸಂಸ್ಥೆ (ರಿ)ಯ ಸಂಸ್ಥಾಪಕರಾದ ಯೋಗಾಚಾರ್ಯ ಶ್ರೀ ಕಲಂದರ್ ಬಾಷಾ ಮತ್ತು ಸಂಸ್ಥೆಯವರು ಆಯೋಜಿಸಿದ್ದ “ಮುಕ್ತ ರಾಷ್ಟ್ರಮಟ್ಟದ ಯೋಗಾಸನ ಚಾಂಪಿಯನ್‌ಶಿಪ್-2026” ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯು ದಿನಾಂಕ 19-09-2026 ರ ಶನಿವಾರ ಬೆಂಗಳೂರಿನ ಅತ್ತಿಬೆಲೆಯ ಸೇಂಟ್ ಫಿಲೋಮಿನಾ ಹೈಸ್ಕೂಲ್‌ನಲ್ಲಿ ಯಶಸ್ವಿಯಾಗಿ ನಡೆಯಿತು.


ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸೇಂಟ್ ಫಿಲೋಮಿನಾ ಹೈಸ್ಕೂಲ್‌ನ ಸಂಸ್ಥಾಪಕರಾದ ಶ್ರೀ ಜಿ.ಎನ್. ಸುರೇಶ್, ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರಾಧಿಕಾ ಎಸ್, ಯೋಗ ಮತ್ತು ಗಾಂಧಾರಿ ವಿದ್ಯೆ ಶಿಕ್ಷಕಿ ಶ್ರೀಮತಿ ಅಂಬಿಕಾ ಸಿ, ಬ್ಲೂಮರ್ಸ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಗೀತಾ ವಿ, ಕಾರ್ಯದರ್ಶಿ ಶ್ರೀ ಜೈ ದೀಪ್, ಆರ್ ಜಿ ಎಸ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿಗಳಾದ ಶ್ರೀ ಗಿರಿಧರ್, ಗ್ರಾಮ ಪಂಚಾಯಿತಿ ಸದಸ್ಯರಾದ ರವಿಕುಮಾರ್ ರವರು ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಯೋಗ ತೀರ್ಪುಗಾರರು ಹಾಗೂ ಸೇಂಟ್ ಫಿಲೋಮಿನಾ ಶಾಲೆಯ ಶಿಕ್ಷಕ ಮತ್ತು ಆಡಳಿತ ವರ್ಗದವರು ಸ್ಪರ್ಧಿಗಳೊಂದಿಗೆ ಉಪಸ್ಥಿತರಿದ್ದರು. 20ಕ್ಕೂ ಹೆಚ್ಚು ವಿವಿಧ ಶಾಲೆಗಳಿಂದ ಯೋಗ ಪಟುಗಳು ಆಗಮಿಸಿ ಸಕ್ರಿಯವಾಗಿ ಭಾಗವಹಿಸಿದರು.


KNN News

Leave a Reply

Your email address will not be published. Required fields are marked *