ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ವತಿಯಿಂದ ಓಬವ್ವ 247ನೆಯ ವಿಜೃಂಭಣೆಯಿಂದ ನವಂಬರ್ 11ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪತ್ರಕರ್ತೆ ಕೆ. ಶಾಂತಕುಮಾರಿ ಮತ್ತು ಹಾವೇರಿಯ ಅಥ್ಲೆಟಿಕ್ಸ್ ಆಟಗಾರ್ತಿ ಗಂಗಮ್ಮ ರವರನ್ನು ಒನಕೆ ಓಬವ್ವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಡಾ : ಪಸಂಧರ, ಸಹ ನಿರ್ದೇಶಕರಾದ ಅಶೋಕ್ ಎನ್ ಚೆಲುವಾದಿ, ಶ್ರೀ ಜ್ಞಾನಪ್ರಕಾಶ ಸ್ವಾಮಿಗಳು, ಶ್ರೀ ಮ. ನಿ. ಪ್ರ. ಬಸವಲಿಂಗ ಸ್ವಾಮಿಗಳು, ಶ್ರೀ ಬಸವನಾಗೀದೇವಾ ಸ್ವಾಮಿಗಳು ಪ್ರೊ, ಎನ್. ಚಿನ್ನಸ್ವಾಮಿ ಸೋಸಲೆ ಮುಂತಾದವರು ಭಾಗವಹಿಸಿದ್ದರು.
ನಾಡಿನಾದ್ಯಂತ ಕಲಾತಂಡಗಳು ಮೆರವಣಿಗೆ ಮೂಲಕ ಕಲಾ ಪ್ರದರ್ಶನವನ್ನು ನೀಡುತ್ತಾ ರವೀಂದ್ರ ಕಲಾಕ್ಷೇತ್ರದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
