Find Articles

Loading...
My bookmarks 0

SHRI KRISHNA JANMASHTAMI CULTURAL FEST


ಆರ್ಟ್ ಕಲ್ಚರಲ್ ಎಜುಕೇಷನಲ್ ಎನ್‌ಲೈಟ್ ಫೌಂಡೇಶನ್ (ರಿ) ರವರು ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವರ ಸಹಯೋಗದೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬೆಂಗಳೂರಿನ ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದ ರಂಗಸ್ಥಳ ಸಭಾಂಗಣದಲ್ಲಿ ದಿನಾಂಕ 6 ಸೆಪ್ಟೆಂಬರ್ 2026 ರಂದು ಆಯೋಜಿಸಿದ್ದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕಿ ಅಂಬಿಕಾ ಸಿ ಮತ್ತು ಸಂಸ್ಥೆಯವರು ಉಪಸ್ಥಿತರಿದ್ದು, ಕಾರ್ಯಕ್ರಮ ಯಶಸ್ವಿಯಾಗಲಿ ಪ್ರಮುಖ ಪಾತ್ರ ವಹಿಸಿದರು.

ಕಾರ್ಯಕ್ರಮವು ಪ್ರಮುಖವಾಗಿ ಯಕ್ಷಗಾನ ಮತ್ತು ಸಾಂಸ್ಕೃತಿಕ ನೃತ್ಯಗಳನ್ನು ಒಳಗೊಂಡಿತ್ತು.

ವಿಶೇಷವಾಗಿ ಯಕ್ಷ ಸಂಜೀವಿನಿ ತಂಡದವರ ಕಂಸ ವಧೆ ಪೌರಾಣಿಕ ಯಕ್ಷಗಾನ ನಾಟಕ ಅದ್ಭುತವಾಗಿ ಮೂಡಿಬಂತು. ಶ್ರೀ ಕೃಷ್ಣನ ಲೀಲಾ ವಿನೋದ, ಚಾಣೂರ, ಮುಷ್ಠಿಕ, ಕಂಸ ವಧೆ ಯ ಸಾಹಸ ಕಥೆಯನ್ನು ಸಾರಿ ಸಾರಿ ಹೇಳುತ್ತಿತ್ತು.

ಪುಟಾಣಿ ವೈಷ್ಣವಿಯ – ಸ್ವಾಗತಂ ಕೃಷ್ಣ – ಭರತನಾಟ್ಯ ಬಹಳ ಸುಂದರವಾಗಿತ್ತು .

ಶ್ರೀಮತಿ ಲಕ್ಷ್ಮಿ ದೇವಿಯವರ ನೃತ್ಯ ಬಹಳ ಮನೋಹರವಾಗಿತ್ತು.

ಕಿಶೋರ್ ಹಾಗೂ ತಂಡದವರ ಶ್ರೀ ಕೃಷ್ಣ ಬಾಲ ಲೀಲೆಯ ನೃತ್ಯ ರೂಪಕ ನೋಡುಗರ ಕಣ್ಮನ ಸೆಳೆಯಿತು . ಪುಟ್ಟ ಮಕ್ಕಳ ಶ್ರೀ ಕೃಷ್ಣನ ವೇಷ ಭೂಷಣಗಳು ಸಾಕ್ಷಾತ್ ಶ್ರೀ ಕೃಷ್ಣನೇ ಕಣ್ಣು ಮುಂದೆ ಬಂದಂತೆ ತೋರುತ್ತಿತ್ತು , ಪುಟ್ಟ ಮಕ್ಕಳು ಶ್ರೀಕೃಷ್ಣನ ವೇಷದಲ್ಲಿ ಕಂಗೊಳಿಸುವುದನ್ನು ಪೋಷಕರು ನೋಡಿ ಆನಂದಿಸಿದರು.

ಹೀಗೆ ಕಲಾವಿದರ ಯಕ್ಷಗಾನ ಮತ್ತು ನೃತ್ಯ ರೂಪಕಗಳು, ಶ್ರೀ ಕೃಷ್ಣನ ಅವತಾರದ ಕಥೆಗಳನ್ನು ಅದ್ಭುತವಾಗಿ ಕಣ್ಮುಂದೆ ತಂದಿತ್ತು . ಪ್ರೇಕ್ಷಕರು ಇವರುಗಳ ಪ್ರದರ್ಶನವನ್ನು ಕಂಡು ಮೂಕ ವಿಸ್ಮಿತರಾಗಿ, ಮನಸಾರೆ ಆನಂದಿಸಿದರು.

KNN News

Leave a Reply

Your email address will not be published. Required fields are marked *