“ಅಂತರಾಷ್ಟ್ರೀಯ ಹುಲಿ ದಿನಾಚರಣೆ – ಹುಲಿ ವೇಷ ಭೂಷಣ ಸಾಂಸ್ಕೃತಿಕ ನಡಿಗೆ ಮತ್ತು ಛಾಯಾಚಿತ್ರ ಪ್ರದರ್ಶನ”

*ಬೆಂಗಳೂರು:*
ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್(ರಿ) ಸಂಸ್ಥಾಪಕಿ ಶ್ರೀಮತಿ ಅಂಬಿಕಾ ಸಿ ಮತ್ತು ಸಂಸ್ಥೆಯವರು ಕಳೆದ ಸುಮಾರು ಏಳು ವರ್ಷಗಳಿಂದ ನಿರಂತರವಾಗಿ ಹುಲಿ ಸಂರಕ್ಷಣಾ ಅಭಿಯಾನ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಬಂದಿದ್ದಾರೆ .
*ಜುಲೈ 29, 2026 ರ ಬುಧವಾರದಂದು “ಅಂತರಾಷ್ಟ್ರೀಯ ಹುಲಿ ದಿನಾಚರಣೆ”* ಯ ಅಂಗವಾಗಿ ತಮ್ಮ ಸಂಸ್ಥೆಯ ವತಿಯಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದ್ದರು .

ಈ ಕಾರ್ಯಕ್ರಮದಲ್ಲಿ *ಸುಮಾರು ನೂರಕ್ಕೂ ಹೆಚ್ಚು ಹುಲಿ ವೇಷ ಭೂಷಣ ಧಾರಿಗಳಿಂದ ಸಾಂಸ್ಕೃತಿಕ ನಡಿಗೆ* ಮತ್ತು *ಹುಲಿ ಛಾಯಾಚಿತ್ರ ಪ್ರದರ್ಶನ* ವನ್ನು ಹಮ್ಮಿಕೊಂಡಿದರು . ಹುಲಿಗಳ ಸಂರಕ್ಷಣೆಯ ಮಹತ್ವದ ಬಗ್ಗೆ ಶಾಲಾ ಕಾಲೇಜು ಮಕ್ಕಳಲ್ಲಿ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು .

ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ
ಕಬ್ಬನ್ ಪಾರ್ಕ್ ನ ಉಪನಿರ್ದೇಶಕರು ಶ್ರೀಮತಿ ಜಿ ಕುಸುಮ, ರವೀಂದ್ರ ಕಲಾಕ್ಷೇತ್ರದ ವ್ಯವಸ್ಥಾಪಕರು ಎನ್ ನರೇಂದ್ರಬಾಬು, ಹಿರಿಯ ಪತ್ರಕರ್ತರುಗಳಾದ ನಟರಾಜ, ಕೆ ಶಾಂತಕುಮಾರಿ,ಶ್ರೀ ಗಂಗಾಧರೇಶ್ವರ ಇಂಗ್ಲಿಷ್ ಹೈಸ್ಕೂಲ್ ನ ಕಾರ್ಯದರ್ಶಿ ಸೋಮಶೇಖರ್ ಬಿ ಎ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಉಮಾ ಜಿ ಆರ್,
ಹಿರಿಯ ವನ್ಯ ಜೀವಿ ಛಾಯಾಗ್ರಹಕರು ಶಿವಕುಮಾರ್ ನಟರಾಜನ್, ಅನಂತ್ ವಕೀಲರು ಮತ್ತು ಶ್ರೀ ಗಂಗಾಧರೇಶ್ವರ ಶಾಲಾ
ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ಮಕ್ಕಳಿಗೆ ಹುಲಿ ಸಂರಕ್ಷಣೆ ಮತ್ತು ಹುಲಿ ದಿನಾಚರಣೆಯ ಮಹತ್ವವನ್ನು ತಿಳಿಸಿದರು,ಹಾಗೂ ಹುಲಿ ದಿನಾಚರಣೆ ಯಶಸ್ವಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.


