ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್(ರಿ) ವತಿಯಿಂದ ಸಂಸ್ಥಾಪಕಿ ಅಂಬಿಕಾ ಸಿ ಮತ್ತು ಸಂಸ್ಥೆಯವರು ಬೆಂಗಳೂರಿನ ಜಯನಗರದ ಆರ್ ಕೆ ಎಸ್ ಎಜುಕೇಶನಲ್ ಸೊಸೈಟಿ (ರಿ) ಶಾಲೆಯಲ್ಲಿ

” ಯುದ್ಧ ಬೇಡ, ಶಾಂತಿ ಬೇಕು” ಎಂಬ ಶಾಂತಿ ಅಭಿಯಾನ ಕಾರ್ಯಕ್ರಮವನ್ನು ಶಾಲಾ ಮಕ್ಕಳಲ್ಲಿ ಶಾಂತಿ ಮತ್ತು ಪ್ರಕೃತಿ ಸಂರಕ್ಷಣೆಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಆಗಸ್ಟ್ 6 ರಂದು ಆಯೋಜಿಸಿದ್ದರು, ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಶ್ರೀ ನ್ ಲಕ್ಷ್ಮಿಕಾಂತ್,
ನ್ಯೂಕ್ಲಿಯರ್ ಫಿಸಿಕ್ಸ್ ಮತ್ತು ತಂತ್ರಜ್ಞಾನ ತಜ್ಞ ಅದಿತ್ಯ. ಎಸ್ ಮತ್ತು ಶಾಲೆಯ ಪ್ರಾಂಶುಪಾಲರಾದ ವೆಂಕಟೇಶ್ ಮೂರ್ತಿ ಮತ್ತು ಶಿಕ್ಷಕರು ವೃಂದದವರು ಉಪಸ್ಥಿತರಿದ್ದು, ಹಿರೋಷಿಮಾ ಬಾಂಬ್ ದಾಳಿಯ ಭೀಕರತೆಯನ್ನು ನೆನೆದು, ವಿಶ್ವಕ್ಕೆ ಶಾಂತಿಯ ಅಗತ್ಯತೆ, ಪ್ರಕೃತಿಯ ಸಂರಕ್ಷಣೆ ಮತ್ತು ಇನ್ನೆಂದು ಈ ದಿನ ಮರುಕಳಿಸಬಾರದು ಎಂಬ ಶಾಂತಿ ಸಂದೇಶದೊಂದಿಗೆ ಕಾರ್ಯಕ್ರಮ ಜರುಗಿತು.
