
ಬೆಂಗಳೂರಿನ ಜಯನಗರದ ಬಿಇಎಸ್ ಕಾಲೇಜಿನಲ್ಲಿ IQAC ಮತ್ತು IIC ಸಹಯೋಗದಲ್ಲಿ “ಆಂಟಿ ರ್ಯಾಗಿಂಗ್ ಅವೇರ್ನೆಸ್ ಸೆಲ್” ವತಿಯಿಂದ Anti-Ragging Awareness ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತೆ, ಲೇಖಕಿ ಮತ್ತು ಸಮಾಜಮುಖಿ ಚಿಂತಕಿ *ಕೆ. ಶಾಂತಕುಮಾರಿ*, ಅಧ್ಯಕ್ಷತೆಯನ್ನು*ಡಾ. ಬೈರಮಂಗಲ ರಾಮೇಗೌಡ ಅವರು ವಹಿಸಿದ್ದರು, ಯೋಗ ಮತ್ತು ಗಾಂಧಾರಿ ವಿದ್ಯೆ ಶಿಕ್ಷಕಿ *ಅಂಬಿಕಾ ಸಿ*, ಭಾರತ್ ವಿದ್ಯಾಸಂಸ್ಥೆಯ ಸಂಸ್ಥೆಯ ಕಾರ್ಯದರ್ಶಿ *ಪೊ. ಎನ್. ಎಸ್. ವಿಜಯ್*, ಬಿಇಎಸ್ ಕಾಲೇಜಿನ ಪ್ರಾಂಶುಪಾಲರಾದ *ಡಾ. ಎಸ್. ಅಶೋಕ್ ಕುಮಾರ್*, Anti Ragging Cell ಸಂಯೋಜಕಿ *ಡಾ. ನಂದಿನಿ ಎನ್*, IIC ಸಂಯೋಜಕಿ *ಪ್ರೊ. ಅಕ್ಷತಾ ಪಿ. ಪೈ ಉಪಸ್ಥಿತರಿದ್ದರು.

ಕನ್ನಡ ವಿಭಾಗ ಮುಖ್ಯಸ್ಥರಾದ ಡಾ. ನಂದಿನಿ ಎನ್ ಅವರು ಗಣ್ಯರನ್ನು ಸ್ವಾಗತಿಸಿದರು.
ಪ್ರಾಂಶುಪಾಲ ಡಾ. ಎಸ್. ಅಶೋಕ್ ಕುಮಾರ್ ಅವರು ಕಾರ್ಯಕ್ರಮದ ಮುಖ್ಯ ಉದ್ದೇಶ, ರ್ಯಾಗಿಂಗ್ ಎಂದರೇನು, ಅದರ ರೂಪಗಳು ಮತ್ತು ವಿದ್ಯಾರ್ಥಿಗಳ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಹಿರಿಯ ಪತ್ರಕರ್ತೆ *ಕೆ. ಶಾಂತಕುಮಾರಿ* ಅವರು ಮಾತನಾಡಿ, ರ್ಯಾಗಿಂಗ್ನಿಂದ ವಿದ್ಯಾರ್ಥಿಗಳ ಭವಿಷ್ಯ ಹೇಗೆ ಹಾಳಾಗುತ್ತದೆ ಮತ್ತು ರ್ಯಾಗಿಂಗ್ ತಡೆಗಟ್ಟಲು ಕಾಲೇಜು ಹಾಗೂ ಸರ್ಕಾರ ಕೈಗೊಂಡಿರುವ ಶಿಸ್ತು ಕ್ರಮಗಳ ಬಗ್ಗೆ ವಿವರಿಸಿದರು.
*ಪ್ರೊ. ಎಸ್.ಎಸ್. ವಿಜಯ್* ಅವರು ತಮ್ಮ ಬಾಲ್ಯದ ಘಟನೆಯನ್ನು ಉದಾಹರಿಸಿ, ಮಾನಸಿಕ ರ್ಯಾಗಿಂಗ್ನಿಂದ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಬೀರುವ ಪರಿಣಾಮದ ಬಗ್ಗೆ ತಿಳಿಸಿದರು.

*ಅಂಬಿಕಾ ಸಿ* ಅವರು ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಶರೀರ ಮತ್ತು ಮನಸ್ಸನ್ನು ರೂಪಿಸಿಕೊಳ್ಳಲು ಯೋಗಾಭ್ಯಾಸ ಸಹಕಾರಿ ಎಂದು, ಆತ್ಮವಿಶ್ವಾಸ ಮತ್ತು ಧೈರ್ಯದ ಮನೋಭಾವನೆ ಬೆಳೆಸಿಕೊಳ್ಳುವ ಬಗ್ಗೆ ಯೋಗದ ಮಹತ್ವವನ್ನು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ *ಡಾ. ಬೈರಮಂಗಲ ರಾಮೇಗೌಡ* ಅವರು ರ್ಯಾಗಿಂಗ್ ವಿಷಯದಲ್ಲಿ ಗಂಡು-ಹೆಣ್ಣು ಎಂಬ ಭೇದಭಾವ ಇರುವುದಿಲ್ಲ ಎಂದು ತಿಳಿಸಿ, ಜೀವನದಲ್ಲಿ ಎದುರಾಗುವ ಅಡೆತಡೆಗಳನ್ನು ಮೆಟ್ಟಿ ನಿಲ್ಲುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ವಿದ್ಯಾರ್ಥಿಗಳಲ್ಲಿ ಜಾಗೃತಿ ಆಂದೋಲನಕ್ಕಾಗಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿ ಸುಮಾರು 40 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳು ಬಹುಮಾನವನ್ನು ಪಡೆದರು.

ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿಗಳಾದ ತೇಜಸ್ವಿನಿ ಯವರು ಮಾಡಿದರು ಎಲ್ಲರನ್ನು ವಂದಿಸಿದವರು ಸುರೇಶ್ ರವರು. ಕೊನೆಯಲ್ಲಿ ವಿದ್ಯಾರ್ಥಿಗಳು *”Say No to Ragging”* ಎಂಬ ಸಂದೇಶವನ್ನು ಅಳವಡಿಸಿಕೊಂಡರು.
*ರ್ಯಾಗಿಂಗ್ No ಎಂದು ಹೇಳೋಣ, ಸ್ನೇಹಕ್ಕೆ Yes ಎಂದು ಕರೆಯೋಣ* ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.