Find Articles

Loading...
My bookmarks 0

CHILDRENS ATTEMPTS INDIA RECORDS

ಆರ್ಟ್ ಕಲ್ಚರಲ್ ಎಜುಕೇಷನಲ್ ಎನ್‌ಲೈಟ್ ಫೌಂಡೇಶನ್ (ರಿ) ಸಂಸ್ಥಾಪಕಿ, ಯೋಗ ಮತ್ತು ಗಾಂಧಾರಿ ವಿದ್ಯಾ ಶಿಕ್ಷಕಿ ಹಾಗೂ ಇಂಡಿಯಾ ರೆಕಾರ್ಡ್ಸ್ ವಿಶ್ವ ದಾಖಲೆ ಸಂಯೋಜಕಿ ಶ್ರೀಮತಿ ಅಂಬಿಕಾ ಸಿ ರವರು, ಆಗಸ್ಟ್ 2026 ರಲ್ಲಿ “ಒಂದು ನಿಮಿಷದ ಯೋಗ ಮತ್ತು ಗಾಂಧಾರಿ ವಿದ್ಯಾ ಪ್ರದರ್ಶನ” ವಿಶ್ವ ದಾಖಲೆ ಸವಾಲನ್ನು ಆಯೋಜಿಸಿದ್ದರು.

ಈ ದಾಖಲೆಯಲ್ಲಿ ದೇಶ-ವಿದೇಶಗಳಿಂದ, ವಿಶೇಷವಾಗಿ ಲಂಡನ್‌ನಿಂದಲೂ ಯೋಗ ವಿದ್ಯಾರ್ಥಿಗಳು ಭಾಗವಹಿಸಿ ಯಶಸ್ವಿಯಾಗಿದ್ದು, ತಮ್ಮ ಹೆಸರನ್ನು ಇಂಡಿಯಾ ರೆಕಾರ್ಡ್ಸ್ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಈ ವಿಶ್ವ ದಾಖಲೆ ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆಪ್ಟೆಂಬರ್ 6, 2026 ರಂದು ಬೆಂಗಳೂರಿನ ಎಂ.ಜಿ. ರಸ್ತೆಯ ರಂಗಸ್ಥಳ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀಮತಿ ಜಿ. ಕುಸುಮಾ (ಉಪ ನಿರ್ದೇಶಕರು, ಕಬ್ಬನ್ ಪಾರ್ಕ್), ಶ್ರೀ ಪ್ರಸನ್ನ (ಹಿರಿಯ ಪತ್ರಕರ್ತರು) ಹಾಗೂ ಶ್ರೀಮತಿ ರೋಶನಿ ಗೌಡ (ರಾಜ್ಯಾಧ್ಯಕ್ಷರು, ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ) ಅವರು ಆಗಮಿಸಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಿದರು.

ಈ ಕಾರ್ಯಕ್ರಮದಲ್ಲಿ ವಿಶ್ವ ದಾಖಲೆಯಲ್ಲಿ ಯಶಸ್ವಿಯಾಗಿ ಪಾಲ್ಗೊಂಡ ಬೆಂಗಳೂರಿನ ವಿದ್ಯಾರ್ಥಿಗಳು ಮತ್ತು ಮೈಸೂರಿನ ಧಾತ್ರಿ ಅಕಾಡೆಮಿಯ ಶ್ರೀಮತಿ ರೂಪಶ್ರೀ ಎನ್.ಆರ್ ಅವರ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.

KNN News

Leave a Reply

Your email address will not be published. Required fields are marked *