ಆರ್ಟ್ ಕಲ್ಚರಲ್ ಎಜುಕೇಷನಲ್ ಎನ್‌ಲೈಟ್ ಫೌಂಡೇಶನ್ (ರಿ) ಸಂಸ್ಥಾಪಕಿ ಅಂಬಿಕಾ ಸಿ ಮತ್ತು ಸಂಸ್ಥೆಯವರು
ಶಿಕ್ಷಕರ ದಿನಾಚರಣೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು
ಬೆಂಗಳೂರಿನ ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದ ರಂಗಸ್ಥಳ ಸಭಾಂಗಣದಲ್ಲಿ ದಿನಾಂಕ 6 ಸೆಪ್ಟೆಂಬರ್ 2026 ರಂದು ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ
ಶ್ರೀಮತಿ ಜಿ. ಕುಸುಮಾ – ಉಪ ನಿರ್ದೇಶಕರು, ಕಬ್ಬನ್ ಪಾರ್ಕ್ ಬೆಂಗಳೂರು, ಶ್ರೀ ಪ್ರಸನ್ನ – ಹಿರಿಯ ಪತ್ರಕರ್ತರು, ರೋಶನಿ ಗೌಡ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷರು, ಉಪಸ್ಥಿತರಿದ್ದು, ಯೋಗ, ಕಲೆ, ಸಂಸ್ಕೃತಿ, ಶಿಕ್ಷಣ, ದೈಹಿಕ ಮತ್ತು ಮಾನಸಿಕ ಆರೋಗ್ಯ ಶಿಕ್ಷಣ ಇತ್ಯಾದಿ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಶಿಕ್ಷಕರುಗಳಾದ ಗೋಪಾಲ್ ಆಚಾರ್, ಸರೋಜಾ ಗೋಪಾಲ್, ರೂಪಶ್ರೀ ಎನ್.ಆರ್, ಸುರೇಖಾ ರವಿಕುಮಾರ್, ಕಿಶೋರ್ ಕುಮಾರ್, ಗೋಪಿ ಡಿ, ಪುಷ್ಪಾ ಸಿ ಮತ್ತು ಅನ್ನಪೂರ್ಣಮ್ಮ ರವರುಗಳಿಗೆ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಯಿತು.