ಭವಾನಿ ಮೇಡಂಗೆ ಮೋಸ ಮಾಡುತ್ತಿರುವ ಮೈದುನ ಕುಮಾರಸ್ವಾಮಿ

ಇದೇ ಏಪ್ರಿಲ್ ತಿಂಗಳು 20 ರಂದು ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಂತಿಮ ದಿನವಾಗಿದೆ. ಆದರೆ ಎಲ್ಲರಿಗಿಂತಲೂ ಮೊದಲು ತಮ್ಮ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಣೆ ಮಾಡಿದ್ದ ಜೆಡಿಎಸ್ ಪಕ್ಷ ಇಂದು ಎರಡನೇ ಪಟ್ಟಿ ರಿಲೀಸ್ ಮಾಡಲಿದೆ ಮತ್ತು ನಂತರ ಮತ್ತೊಂದು ನಿಗದಿತ ದಿನ ಮೂರನೆಯ ಪಟ್ಟಿಯನ್ನು ಸಹ ಬಿಡುಗಡೆ ಮಾಡುತ್ತದೆ. ಅಲ್ಲಿಗೆ ಯಾರಾದರೂ ಜೆಡಿಎಸ್ ಪಕ್ಷದ ಎಲ್ಲಾ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮುಗಿಯಿತು ಅಂತ ಅಂದುಕೊಳ್ಳಬಹುದು. ಖಂಡಿತಾ ಅ ರೀತಿ ನಿರ್ಧಾರಕ್ಕೆ ಬರಲು ಸಾಧ್ಯವೇ ಇಲ್ಲ.

ಏಕೆಂದರೆ ಜೆಡಿಎಸ್ ನ ಅಂತಿಮ ಪಟ್ಟಿ ನಾಲ್ಕನೆಯದು ಸಹ ಬಿಡುಗಡೆ ಆಗುತ್ತದೆ. ಈ ನಾಲ್ಕನೆಯ ಪಟ್ಟಿಯಲ್ಲಿ ಒಂದೇ ಒಂದು ಕ್ಷೇತ್ರದ ಹೆಸರನ್ನು ಘೋಷಣೆ ಮಾಡಲಿದ್ದಾರೆ. ಆ ಕ್ಷೇತ್ರವೇ ಹಾಸನ ವಿಧಾನಸಭಾ ಕ್ಷೇತ್ರ. ಇದಕ್ಕೆ ಕಾರಣ ಕುಮಾರಸ್ವಾಮಿ ಮತ್ತು ಭವಾನಿ ರೇವಣ್ಣ ಈ ಇಬ್ಬರು ತಳೆದಿರುವ ಹಠಮಾರಿ ಧೋರಣೆ.

ರಾಜ್ಯದಲ್ಲಿ ಈ ಬಾರಿ ಸ್ವತಂತ್ರವಾಗಿ ಜೆಡಿಎಸ್ ಅಧಿಕಾರ ಹಿಡಿಯಲೇಬೇಕೆಂದು ಪಣತೊಟ್ಟಿರುವ ಕುಮಾರಸ್ವಾಮಿ ಅದು ಸಾಧ್ಯವಾಗಬೇಕಾದರೆ ದೇವೇಗೌಡರ ಕುಟುಂಬದ ಸದಸ್ಯರಿಗೆ ಟಿಕೆಟ್ ಕೊಟ್ಟು ದೇವೇಗೌಡರ ಕುಟುಂಬಕ್ಕೆ ಮಾತ್ರ ಮೀಸಲಾದ ಪಕ್ಷ ಎಂಬ ಕಳಂಕಕ್ ತಪ್ಪಿಸುವುದು. ಈ ಕಾರಣಕ್ಕಾಗಿಯೇ ಜೆಡಿಎಸ್ ಗೆ ರಾಜ್ಯದ ಜನ ಓಟ್ ಹಾಕಿ ಅಧಿಕಾರಕ್ಕೆ ತರುತ್ತಿಲ್ಲ ಎಂದು ಕುಮಾರಣ್ಣ ಅಂದುಕೊಂಡು ಬಿಟ್ಟಿದ್ದಾರೆ.

ಆದ್ದರಿಂದ ಈ ಬಾರಿ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿರುವ ಭವಾನಿ ಮೇಡಂ ಗೆ ಟಿಕೆಟ್ ಕೊಟ್ಟರೆ ಮತ್ತೆ ಜೆಡಿಎಸ್ ಕುಟುಂಬ ರಾಜಕಾರಣಕ್ಕೆ ಒತ್ತು ಕೊಟ್ಟಿದೆ ಎಂದು ರಾಜ್ಯದ ಜನ ಜೆಡಿಎಸ್ಗೆ ಓಟ್ ಹಾಕಲ್ಲ. ಆಗ ನಾನು ದೇವೇಗೌಡರಿಗೆ ಈ ಬಾರಿ 123 ಸ್ಥಾನಗಳನ್ನು ಗೆಲ್ಲಿಸಿಕೊಂಡು ಬಂದು ಕೊಡುಗೆ ಕೊಡುತ್ತೇನೆಂದು ಹೇಳಿದ್ದೇನೆ. ಇದು ಸಾಧ್ಯವಾಗ ಬೇಕಾದರೆ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಕಾರ್ಯ ಕರ್ತ ಆಗಿರುವ ಸ್ವರೂಪ್ ಅವರಿಗೆ ಟಿಕೆಟ್ ಕೊಟ್ಟರೆ ಮಾತ್ರ ಸಾಧ್ಯ. ಆದುದರಿಂದ ನನಗೆ ಕುಟುಂಬದ ಸದಸ್ಯರ ಹಿತಕ್ಕಿಂತ ಪಕ್ಷದ ಕಾರ್ಯಕರ್ತ ರ ಹಿತ ಕಾಯುವುದು ಮುಖ್ಯ. ಆದ್ದರಿಂದ ಯಾವುದೇ ಕಾರಣಕ್ಕೂ ಭವಾನಿ ಮೇಡಂಗೆ ಈ ಬಾರಿ ಹಾಸನದಿಂದ ಖಂಡಿತಾ ಟಿಕೆಟ್ ಕೊಡಲ್ಲ ಎಂದಿದ್ದಾರೆ.

ಆದರೆ ಜೆಡಿಎಸ್ ಪಕ್ಷದಿಂದ ನನಗೆ ಟಿಕೆಟ್ ಸಿಗದಿದ್ದರೆ ಯಾವುದೇ ಕಾರಣಕ್ಕೂ ನಾನು ಹಾಸನ ವಿಧಾನಸಭಾ ಕ್ಷೇತ್ರದಿಂದ ವಾಪಾಸ್ ಹೋಗಲ್ಲ. ಕುಮಾರ ಸ್ವಾಮಿ ಟಿಕೆಟ್ ಕೊಡದಿದ್ದರೆ ಏನಂತೆ ಮಾವ ದೇವೇಗೌಡರು ಈ ಮೊದಲೇ ನನಗೆ ಟಿಕೆಟ್ ಕೊಡುತ್ತೇನೆ ಎಂದು ರೇವಣ್ಣ ಪತಿ ರೇವಣ್ಣ ಅವರ ಹತ್ತಿರ ಹೇಳಿದ್ದರು. ಆದ್ದರಿಂದ ಈ ಬಾರಿ ನನಗೆ ಟಿಕೆಟ್ ಕೊಟ್ಟೆ ಕೊಡುತ್ತಾರೆ ಎಂಬ ನಂಬಿಕೆಯಲ್ಲಿ ಭವಾನಿ ರೇವಣ್ಣ ಇದ್ದಾರೆ.

ಇದೇ ಕಾರಣಕ್ಕಾಗಿಯೇ ನಮ್ಮ ಮಾನವರಿಗೆ ನನಗೆ ಟಿಕೆಟ್ ಕೊಡುವಂತೆ ಬುದ್ಧಿ ಕೊಡಪ್ಪಾ ಎಂದು ಎಸ್ಟು ಸಾಧ್ಯವೋ ಅಷ್ಟು ದೇವಸ್ಥಾನಗಳಿಗೆ ಭೇಟಿಕೊಟ್ಟು ದೇವರು ಮತ್ತು ದೈವಗಳನ್ನು ಬೇಡಿ ಕೊಳ್ಳುತ್ತಿದ್ದಾರೆ.

ಇದಕ್ಕಾಗಿ ಮೊನ್ನೆ ಮೇಲುಕೋಟೆ ಯದುಗಿರಿ ಅಮ್ಮನ ದೇವಸ್ಥಾನಕ್ಕೆ ಹೋದಾಗ ಈ ತಾಯಿಯ ಮುಂದೆ ಇಟ್ಟಿದ್ದ ದುಡ್ಡು ಕೆಳಗೆ ಬಿದ್ದಿದ್ದು ಅಪ ಶಕುನ ನಾ.. ? ,ಅಥವಾ ಶುಭ ಶಕುನನಾ..? ಎಂಬ ಚರ್ಚೆಗಳು ಕುಮಾರ ಸ್ವಾಮಿ ಮತ್ತು ಭವಾನಿ ಬೆಂಬಲಿಗರ ನಡುವೆ ಚರ್ಚೆಗೆ ಗ್ರಾಸವಾಗಿದೆ.

ಕೊನೆಗೆ ದೇವೇಗೌಡರು ಈ ಸಂಬಂಧ ಅಂತಿಮಗಳಿಸಲು ರೇವಣ್ಣ ಮತ್ತು ಭವಾನಿ ರೇವಣ್ಣ ಅವರನ್ನು ಮತ್ತು ಕುಮಾರ ಸ್ವಾಮಿ ಅವರನ್ನು ಬೆಂಗಳೂರಿನ ತಮ್ಮ ಪದ್ಮನಾಭ ನಗರ ಮನೆಗೆ ಕರೆದುಕೊಂಡು ಈ ಬಗ್ಗೆ ಚರ್ಚಿಸಿದ್ದಾರೆ.

ಈ ಸಮಯದಲ್ಲಿ ದೇವೇಗೌಡರು ತಮ್ಮ ಸೊಸೆ ಭವಾನಿ ರೇವಣ್ಣ ಮುಂದೆ ಎಂ ಎಲ್ ಸಿ ಮಾಡುತ್ತೇನೆ. ಹಾಸನ ಕ್ಷೇತ್ರವನ್ನು ಬಾರಿ ಸ್ವರೂಪ್ ಗೆ ಬಿಟ್ಟು ಕೊಡು ಎಂದು ರೇವಣ್ಣ ಮುಂದೆಯೇ ಹೇಳಿದ್ದಾರೆ. ಅದರೆ ನನಗೆ ಎಂ ಎಲ್ ಸಿ ಟಿಕೆಟ್ ಬೇಡ, ಕೊಡುವು ದಿದ್ದರೆ ಹಾಸನ ಕ್ಷೇತ್ರದಿಂದ ಕೊಡಿ, ಇಲ್ಲದಿದ್ದರೆ ನಾನು ಯಾವುದೇ ಕಾರಣದಿಂದ ಹಾಸನ ಕ್ಷೇತ್ರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಖಡಕ್ಕಾಗಿ ಹೇಳಿ ಸಿಟ್ಟು ಮಾಡಿಕೊಂಡು ಹೊರಬಂದಿದ್ದಾರೆ.

ಒಂದು ವೇಳೆ ಹಾಸನದಿಂದ ಸ್ವರೂಪ್ ಗೆ ಕೊಟ್ಟಿದ್ದೆ ಆದಲ್ಲಿ ದೇವೇಗೌಡರು ನನ್ನ ಮೇಲೆ ಸಿಟ್ಟು ಮಾಡಿಕೊಂಡರು ಪರವಾಗಿಲ್ಲ ನಾನು ಪಕ್ಷೇತರ ಅಭ್ಯರ್ಥಿಯಾಗಿ ನಿಂತಾದರು ಸೇರಿ ಬಿಜೆಪಿಯ ಪ್ರೀತಂ ಗೌಡ ನನ್ನ ಕುಟುಂಬಕ್ಕೆ ಹಾಕಿರುವ ಸವಾಲಿಗೆ ಉತ್ತರ ಕೊಡುತ್ತೇನೆ ಎಂದು ನಿರ್ಧರಿಸಿ ಬಿಟ್ಟಿದ್ದಾರೆ. ಕುಮಾರಸ್ವಾಮಿಗೆ ನಮ್ಮ ಕುಟುಂಬದ ಮರ್ಯಾದೆ ಗಿಂತ ಪಕ್ಷವೇ ಮುಖ್ಯವೋ…ನನಗೂ ಸಹ ನಮ್ಮ ಕುಟುಂಬದ ಮರ್ಯಾದೆ ಮುಖ್ಯ ಎಂದು ಕುಮಾರಸ್ವಾಮಿಗೆ ಸೆಡ್ಡು ಹೊಡೆದು ಬಿಟ್ಟಿದ್ದಾರೆ.

ಆದರೆ ಕುಮಾರ ಸ್ವಾಮಿಗೂ ಗೊತ್ತು. ಸ್ವರೂಪ್ ಟಿಕೆಟ್ ಕೊಟ್ಟರು ಕೊಡದಿದ್ದರೂ ಜೆಡಿಎಸ್ ಗೆ 123 ಸ್ಥಾನ ಬರಲ್ಲ ಎಂಬ ಸತ್ಯ. ಆದರೂ ಸಹ ಯಾಕೆ ಭವಾನಿ ಮೇಡಂಗೆ ಟಿಕೆಟ್ ಕೂಡಲೇ ಬಾರದು ಎಂದು ಪಟ್ಟು ಹಿಡಿದಿದ್ದಾರೆ ಎಂದು ಜನರಿಗೆ ಗೊತ್ತಾದರೆ ಆಶ್ಚರ್ಯ ಆಗುತ್ತೆ.

ಅದೇನೆಂದರೆ ಒಮ್ಮೆ ಭವಾನಿ ಎಂ ಎಲ್ ಎ ಆಗಿ ವಿಧಾನ ಸೌಧ ದ ಮೆಟ್ಟಿಲು ಹತ್ತಿದರೆ ಇಡೀ ಜೆಡಿಎಸ್ ಪಕ್ಷವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಕುಮಾರಸ್ವಾಮಿ ಹಿಡಿತ ತಪ್ಪಿಸುತ್ತಾರೆ. ಸಾಮರ್ಥ್ಯ ಭವಾನಿ ಮೇಡಂ ಅವರಲ್ಲಿ ಇರುವುದರಿಂದಲೇ ಟಿಕೆಟ್ ಕೊಡಲು ಹೆದರುತ್ತಿದ್ದಾರೆ ಎಂಬುದೆ ಕು ಸ್ವಾಮಿಯ * ದೂರ* ಮತ್ತು *ದೂರ* ದೃಷ್ಠಿ ಅಷ್ಟೇ.

ಆದ್ದರಿಂದ ಮೂರನೇ ಪಟ್ಟಿಯಲ್ಲೂ ಸಹ ಭವಾನಿ ಹೆಸರು ಘೋಷಿಸುವುದು ಬೇಡ. ಆದ್ದರಿಂದ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಏಪ್ರಿಲ್ 20ರಂದು ಸ್ವರೂಪ್ ಗೆ ಟಿಕೆಟ್ ಎಂದು ನಾಲ್ಕನೆಯ ಪಟ್ಟಿಯಲ್ಲಿ ಬಿಡುಗಡೆ ಮಾಡೋಣ ಎಂದು ದೇವೇಗೌಡರಿಗೆ ಹೇಳಿದ್ದಾರೆ.
ಇಲ್ಲದಿದ್ದರೆ ಜೆಡಿಎಸ್ ಪಕ್ಷಕ್ಕೆ ಸೆಡ್ಡು ಹೊಡೆದು ಪಕ್ಷೇತರ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಲು ಭವಾನಿ ಹಿಂದುಮುಂದು ನೋಡಲ್ಲ. ಆದ್ದರಿಂದ ಭವಾನಿ ಪಕ್ಷೇತರ ಅಭ್ಯರ್ಥಿಯಾಗಿ ನಾಮ್ ಪತ್ರ ಸಲ್ಲಿಸಲು ಅವಕಾಶ ಕೊಡದಂತೆ ನಾಮಪತ್ರ ಸಲ್ಲಿಸುವ ಕೊನೆಯ ದಿನ ಕಾಲು ಗಂಟೆಗೆ ಇನ್ನೇನು ಸಮಯ ಕೊನೆಗೊಳ್ಳು ತ್ತದೋ ಆ ಸಮಯದಲ್ಲಿ ಸ್ವರೂಪ್ ಗೆ ಟಿಕೆಟ್ ಘೋಷಣೆ ಮಾಡಿ ನಾಮಪತ್ರ ಸಲ್ಲಿಸಲು ತಂತ್ರ ಹೆಣೆದಿದ್ದಾರೆ ಎಂಬುದು ಮಾತ್ರ ಲೇಟೆಸ್ಟ್ ದೇವೇಗೌಡರ ಕುಟುಂಬದ ಗುಪ್ತವಾಗಿ ಹರಿದಾಡುತ್ತಿರುವ ಸುದ್ದಿ.

ಒಟ್ಟಿನಲ್ಲಿ ಭವಾನಿ ಮೇಡಂ ಗೆ ಈ ಬಾರಿ ಕುಮಾರಿ ಸ್ವಾಮಿ ಜೆಡಿಎಸ್ ಟಿಕೆಟ್ ತಪ್ಪಿಸಿ ಮೋಸ ಮಾಡುವುದಂತೂ ಪಕ್ಕಾ ಎನ್ನಲಾಗುತ್ತಿದೆ.

kanews

kanews

Leave a Reply

Your email address will not be published. Required fields are marked *