ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ದಿವಂಗತ ಬಿಜೆಪಿ ನಾಯಕರಾಗಿದ್ದ ಸಿ.ಎಂ. ಉದಾಸಿ ಅವರನ್ನೇ ಸೋಲಿಸಿ ಗೆದ್ದವರು ಮಾಜಿ ಸಚಿವ ಕಾಂಗ್ರೆಸ್ ಪಕ್ಷದ ಮನೋಹರ್ ತಹಸೀಲ್ದಾರ್. ಸಿದ್ದರಾಮಯ್ಯ ಮುಖ್ಯಮಂತ್ರಿ. ಆಗಿದ್ದಾಗ ಇವರು ಮಂತ್ರಿ ಆಗಿದ್ದರು. ಹಾಗೆಯೇ ಎಸ್.ಎಂ. ಕೃಷ ಮುಖ್ಯಮಂತ್ರಿ ಆಗಿದ್ದಾಗ ವಿಧಾನ ಸಭೆಯ ಉಪಾಧ್ಯಕ್ಷರಾಗಿದ್ದರು. ನಾಲ್ಕು ಬಾರಿ ಹಾನಗಲ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಗೆದ್ದವರು. ಕಳೆದ 2018 ರ ವಿಧಾನಸಭೆಯಲ್ಲಿ ಇವರಿಗೆ ಟಿಕೆಟ್ ತಪ್ಪಿ ಶ್ರೀನಿವಾಸ್ ಮಾನೆಗೆ ಸಿಕ್ಕಿತ್ತು.
ಶ್ರೀನಿವಾಸ ಮಾನೆ ಹೆಸರು ಕೇಳಿದರೆ ಸಾಕು ನಖಶಿಖಾಂತ ಉರಿದು ಬೀಳುತ್ತಾರೆ ತಹಶೀಲ್ದಾರ್. ಕಾರಣ ಸ್ಥಳೀಯ ಹಾನಗಲ್ ನವರಲ್ಲದ ಇವರು ಬೇರೆ ಕಡೆಯಿಂದ ಹಾನಗಲ್ ಕ್ಷೇತ್ರಕ್ಕೆ ಬಂದು 50 ವರ್ಷದಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಆಗಿರುವ ಮನೋಹರ್ ತಹಶೀಲ್ದಾರ್ ಗೆ ಚೆಕ್ ಮೇಟ್ ಇಟ್ಟಿದ್ದಕ್ಕೆ.
ತಹಶಿಲ್ದಾರ್ ಅಂಥವರನ್ನೆ ಹಿಂದೆ ಹಾಕಿ ಕಳೆದ ಬಾರಿ ಕಾಂಗ್ರೆಸ್ ಪಕ್ಷದಿಂದ ಮಾನೆ ಟಿಕೆಟ್ ಪಡೆದ ಬಗ್ಗೆ ತುಂಬಾ ತುಂಬಾ ಕೋಪವಿದೆ.
ಆದ್ದರಿಂದ ಈ ಬಾರಿ ನನಗೆ ಟಿಕೆಟ್ ಕೊಡಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ದುಂಬಾಲು ಬಿದ್ದಿದ್ದರು.
ಆದರೂ ಇವರಿಬ್ಬರು ಮನೋಹರ್ ತಹಶೀಲ್ದಾರ್ ಗೆ ಟಿಕೆಟ್ ನೀಡುವ ಬಗ್ಗೆ ಯಾವುದೇ ಭರವಸೆ ಕೊಡದ ಹಿನ್ನೆಲೆಯಲ್ಲಿ ದೆಹಲಿ ಪ್ರಯಾಣ ಬೆಳೆಸಿದ್ದರು.
ಅಲ್ಲಿ ಎ ಐ ಸಿ ಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿ ತಮಗೆ ಟಿಕೆಟ್ ಕೊಡಬೇಕೆಂದು ಲಾಬಿ ಮಾಡಿದ್ದರು.
ಇವರು ಯಾರು ಸಹ ಐದು ದಶಕದಿಂದ ಕಾಂಗ್ರೆಸ್ ನಲ್ಲಿದ್ದ ಮನೋಹರ್ ತಹಶೀಲ್ದಾರ್ ಗೆ ಟಿಕೆಟ್ ಕೊಡದೆ ಪುನಃ ಈ ಬಾರಿಯೂ ಶ್ರೀನಿವಾಸ ಮಾನೆಗೆ ಮಣಿದು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೊಟ್ಟಿದ್ದಾರೆ.
ಇದರಿಂದ ಕೆರಳಿ ಕೆಂಡವಾಗಿರುವ ಮಾಜಿ ಮಂತ್ರಿ ತಹಶೀಲ್ದಾರ್ ಜೆಡಿಎಸ್ ಪಕ್ಷದ ದಳಪತಿಗಳನ್ನು ಭೇಟಿ ಮಾಡಿ ಜೆಡಿಎಸ್ ಪಕ್ಷಕ್ಕೆ ಸೇರಿಕೊಂಡು ಬಿಟ್ಟಿದ್ದಾರೆ.
ಇದೇ ಏಪ್ರಿಲ್
7 ನೇ ತಾರಿಕ್ ಹಾನಗಲ್ ಗೆ ಜೆಡಿಎಸ್ ಪಂಚರತ್ನ ರಥಯಾತ್ರೆ ಹೋಗಲಿದೆ. ಅಂದು ಸಾವಿರಾರು ಬೆಂಬಲಿಗರೊಂದಿಗೆ ಅಧಿಕೃತವಾಗಿ ಜೆಡಿಎಸ್ ಪಕ್ಷ ಸೇರಲಿದ್ದಾರೆ.
ಸ್ಥಳೀಯ ಅಭ್ಯರ್ಥಿ ಅಲ್ಲದ ಶ್ರೀನಿ ವಾಸ ಮಾನೆ ಗೆ ಕಾಂಗ್ರೆಸ್ ಬೇಡ ಬೇಡ ಎಂದರು ಟಿಕೆಟ್ ಕೊಟ್ಟಿದೆ. ಆದ್ದರಿಂದ ಕಾಂಗ್ರೆಸ್ ನಲ್ಲಿ ನಿಷ್ಠಾವಂತ ಜನಪ್ರತಿ ನಿಧಿಗಳಿಗೆ ಬೆಲೆಯೇ ಇಲ್ಲ ಎನ್ನುತ್ತಿದ್ದಾರೆ.
ಆದ್ದರಿಂದ ಈ ಬಾರಿ ಶ್ರೀನಿವಾಸ್ ಮಾನೆ ಸೋಲಿಸಿ ಅವರ ಮಾನ ಹರಾಜು ಹಾಕಬೇಕು ಎಂದು ಪ್ರತಿಜ್ಞೆ ಮಾಡಿಬಿಟ್ಟಿದ್ದಾರೆ.
ಒಟ್ಟಿನಲ್ಲಿ ಜೆಡಿಎಸ್ ನಿಂದ ವೈ ಎಸ್ ವಿ ದತ್ತಾ, ಶಿವಲಿಂಗೇಗೌಡ ರು, ಶ್ರೀನಿವಾಸ್ ಕಾಂಗ್ರೆಸ್ ಗೆ ಪಕ್ಷಾಂತರ ಮಾಡುತ್ತಿದ್ದರೆ, ಬಿಜೆಪಿಯಿಂದ ವೈ ಎನ್ ಗೋಪಾಲಕೃಷ್ಣ, ಬೇವಿನಮರದ ಮುಂತಾದವರು ಕಾಂಗ್ರೆಸ್ ಗೆ ಹೋಗಿದ್ದಾರೆ. ಕಾಂಗ್ರೆಸ್ ನಿಂದ ಮನೋಹರ್ ತಹಶಿಲ್ದಾರ್ ರಂತ ವರು, ಭಗವಂತ ಕುಬಾ ಅಂಥವರು ಜೆಡಿಎಸ್ ಗೆ ಹೋಗಿದ್ದಾರೆ.
ಇದೇ ತಿಂಗಳು 24 ನಾಲ್ಕು ನಾಮಪತ್ರ ವಾಪಾಸ್ ತೆಗೆದುಕೊಳ್ಳುವ ದಿನವಾದ್ದರಿಂದ ಅಷ್ಟರೊಳಗೆ ಯಾರು ಯಾರು ಮರಕೊತಿಯಂತೆ ಒಂದು ಪಕ್ಷದಿಂದ ಜಿಗಿಯುತ್ತಾರೆ ಎಂದು ಊಹಿಸಲು ಸಾಧ್ಯವಿಲ್ಲ.