ವಿಜಯೇಂದ್ರನನ್ನು ಯಡಿಯೂರಪ್ಪರಂತೆ ಮುಗಿಸುವ ಹುನ್ನಾರವಾ…?

ಬಿಜೆಪಿ ಪಕ್ಷದಲ್ಲಿ ಯಡಿಯೂರಪ್ಪ ವಿರೋಧಿಗಳು ಅವರನ್ನು ಇದುವರೆಗೆ 5 ವರ್ಷ ಸಂಪೂರ್ಣವಾಗಿ ಮುಖ್ಯಮಂತ್ರಿ ಆಗಿ ಕೆಲಸ ಮಾಡಲು ಬಿಡಲೇ ಇಲ್ಲ. ಕಾರಣ ಯಡಿಯೂರಪ್ಪ ರಾಜಕೀಯವಾಗಿ ಬೆಳೆದರೆ ಬಿ.ಎಸ್.ವೈ. ವಿರೋಧಿಗಳಾದ ಅದರಲ್ಲೂ ಮುಖ್ಯಮಂತ್ರಿ ಪಟ್ಟದ ಮೇಲೆ ಕಣ್ಣಿಟ್ಟಿರುವ ಬಿ.ಎಲ್. ಸಂತೋಷ್ ಜಿ, ಪ್ರಹ್ಲಾದ ಜೋಶಿ, ಸಿ ಟಿ. ರವಿ, ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್ ಮಾಧುಸ್ವಾಮಿ ಇವರ ಜೊತೆ ಇನ್ನೊಂದಿಬ್ಬರು ಈ ಕಾರಣ ದಿಂದಲೇ ಮುಂಚೂಣಿಯಲ್ಲಿ ನಿಂತು , ಯಡಿಯೂರಪ್ಪ ಅವರಿಗೆ ಗುಪ್ತವಾಗಿ ಹೇಡಿಗಳಂತೆ ಕೊಡಬಾರದು ಕಿರುಕುಳ ಕೊಟ್ಟರು.

ಇಷ್ಟೇ ಅಲ್ಲ ,7 ದಿನ ಮತ್ತು 3 ದಿನ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತ್ತದ್ದನ್ನೆ ದೊಡ್ಡದಾಗಿ ಸಿ. ಟಿ. ರವಿ ಸೇರಿದಂತೆ ಬಿ ಎಸ್ ವೈ ವಿರೋಧಿಗಳು ಮಾಡಿ, ಈ ಹತ್ತು ದಿನಗಳನ್ನು ಸೇರಿಸಿ, ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಮೂರು ಚಿಲ್ಲರೆ ವರ್ಷಗಳನ್ನು ಸೇರಿಸಿ ಒಟ್ಟು 4 ಬಾರಿ ಮುಖ್ಯಮಂತ್ರಿ ಮಾಡಿದೆ ಬಿಜೆಪಿ ಪಕ್ಷ ಎಂದು ಡಂಗೂರ ಸಾರಿದ್ದೆ ಸಾರಿದ್ದು ಮಾಡಿದರು. ಇವತ್ತು ಸಹ ಸಮಯ ಸಿಕ್ಕಾಗ ಇದನ್ನೇ ದೊಡ್ಡ ಸಾಧನೆ ಎಂದು ಹೇಳಿಕೊಂಡು ತಿರುಗಾಡುತ್ತಿರುತ್ತಾರೆ.

ಈ ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ದನ್ನೆ 20 ವರ್ಷ ಮುಖ್ಯ ಮಂತ್ರಿ ಮಾಡಿದ್ದೇವೆ ಎಂದು 4 ನೇ ಬಾರಿ ಮುಖ್ಯ ಮಂತ್ರಿ ಆಗಲು ಅವಕಾಶ ಕೊಟ್ಟಿದ್ದೇವೆ . ಇನ್ನು ಈ ಸ್ಯಾನದಲ್ಲಿ ಮುಂದುವರಿಯ. ಬಾರದು ಎಂದು ವಯಸ್ಸಿನ ನೆಪೆ ಹೇಳಿ ಬಲವಂತವಾಗಿ ಕಣ್ಣೀರು ಹಾಕಿಸಿ ಇಳಿಸಿದರು.

ಇದೇ ವೇಳೆಯಲ್ಲಿ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಅವರನ್ನು ಮುಂದೆ ಮುಖ್ಯಮಂತ್ರಿ ಮಾಡಿ ನಿಮಗಾದ ಅನ್ಯಾಯ ಸರಿಪಡಿಸುತ್ತದೆ ಪಕ್ಷ ಎಂದು ಸಮಾಧಾನ ಪಡಿಸಿ, ಬಲವಂತದಿಂದ ಕಣ್ಣೀರು ಹಾಕಿ ಮುಖ್ಯಮಂತ್ರಿ ಪಟ್ಟದಿಂದ ಅವಧಿ ಪೂರ್ಣಗೊಳಿಸಲು ಬಿಡದೆ ಇಳಿಸಿಬಿಟ್ಟತು. ಅಂದೆ ಬಿ.ಎಸ್.ವೈ. ವಿರೋಧಿಗಳಲ್ಲಿ ಕೆಲವರು ಹೊಟ್ಟೆ ತುಂಬ ಹಾಲು ಕುಡಿದು ಸಂತೋಷ ಸಾಗರದಲ್ಲಿ ತೇಲಿದರೆ, ಹಲವರು ಹಾಲ್ಕೋಹಾಲ್ ಕುಡಿದು ಸಂಭ್ರಮ ಪಟ್ಟಿದ್ದೆ ಪಟ್ಟಿದ್ದು ಮಾಡಿದರು.

ತಮ್ಮ ಇಷ್ಟಾರ್ಥ ಸಿದ್ಧಿಸಿದ್ದೇ ತಡ ಯಡಿಯೂರಪ್ಪ ಅವರನ್ನು ದೂರವಿಟ್ಟು ನಾವು ಮುಂದಿನ ಚುನಾವಣೆಗೆ ಹೋದರೆ ನಮ್ಮ ಸುಂದರವಾದ ಮುಖಗಳನ್ನು ನೋಡಿ ,, ಅರಳು ಹುರಿದಂತೆ ಮಾತನಾಡಿದರೆ 150 ಸ್ಥಾನಗಳನ್ನು ರಾಜ್ಯದ ಜನತೆ ಬಿಜೆಪಿಗೆ ಕೊಡುತ್ತಾರೆ ಎಂದು ಬೀ ಎಸ್ ವೈ ರನ್ನು ಸಿ.ಎಂ.ಸ್ಥಾನದಿಂದ ಇಳಿಸಿದ್ದು.

ಆದರೆ ಯಾವಾಗ ಯಡಿಯೂರಪ್ಪ ಅವರನ್ನು ಪ್ರಮುಖ ಸಮಾರಂಭಗಳಿಗೆ ಕರೆಯದೆ ಬಿ ಎಸ್ ವೈ ವಿರೋಧಿಗಳು ದೂರ ಇಟ್ಟರೋ..ಯಡಿಯೂರಪ್ಪ ಇಂಥ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆ..ಎಷ್ಟು ಜನ ಸೇರಬೇಕೋ.. ಅಷ್ಟು ಜನ ಸೇರುತ್ತಿರಲಿಲ್ಲ .

ಅದರಲ್ಲೂ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಕರ್ನಾಟಕಕ್ಕೆ ಬಂದು ಸಮಾರಂಭ ವೊಂದರಲ್ಲಿ ಭಾಗವಹಿಸಿದ್ದ ಸಮಯದಲ್ಲಿ ಯಡಿಯೂರಪ್ಪ ಅವರನ್ನು ಆಹ್ವಾನಿಸಲಾಗಿತ್ತು. ಆಗ ಯಡಿಯೂರಪ್ಪ ತುರ್ತಾಗಿ ಹೋಗಬೇಕಿತ್ತು. ಆಗ ಅವರಿಗೆ ಮೊದಲು ವೇದಿಕೆಯಲ್ಲಿ ಮಾತನಾಡಲು ಅವಕಾಶ ಮಾಡಿಕೊಡಲಾಯಿತು. ನಂತರ ಭಾಷಣ ಮುಗಿಸಿ ಹೊರಡುತ್ತಿದ್ದಂತೆ ವೇದಿಕೆಯ ಮುಂಭಾಗ ದಲ್ಲಿ ನೆರೆದಿದ್ದ ಜನರು ಸಹ ಯಡಿಯೂರಪ್ಪ ಅವರ ಹಿಂದೆಯೇ ಹೋಗಿ ಬಿಟ್ಟರು. ನಂತರ ನಡ್ಡಾ ಮಾಡುವ ಭಾಷಣ ವನ್ನು ಖಾಲಿ ಕುರ್ಚಿಗಳು ಕೇಳಬೇಕಾದ ಪರಿಸ್ಥಿತಿ ಉಂಟಾಗಿತ್ತು. ಆಗಲೇ ಬಿಜಿಪಿ ಹೈ ಕಮಾಂಡ್ ಗೆ ಮನವರಿಕೆ ಆಗಿತ್ತು. ಯಡಿಯೂರಪ್ಪ ಅವರನ್ನು ಮುಂದಿಟ್ಟು ಕೊಂಡು ಹೋಗದಿದ್ದರೆ ರಾಜ್ಯದ ಜನ ಬಿಜೆಪಿಯನ್ನು ಮೂಸಿಯು ಸಹ ನೋಡಲ್ಲ ಎಂಬ ವಾಸ್ತವದ ರಾಜ್ಯ ರಾಜಕಾರಣ ಎಂಬುದು.

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ ಮೇಲೆ ಅವರ ಬೆಂಬಲಿಗರನ್ನು ಸಮಾಧಾನ ಪಡಿಸಲೇದು ಕೇಂದ್ರ ಸಂಸದೀಯ ಮಂಡಳಿ ಯಲ್ಲಿ ಸದಸ್ಯ ಸ್ಥಾನ ಕೊಟ್ಟರು ಸಹ ಬಿ ಎಸ್ ವೈ ಬೆಂಬಲಿಗರಿಗೆ ಸಮಾಧಾನ ತಂದಿಲ್ಲ. ಏಕೆಂದರೆ ಯಡಿಯೂರಪ್ಪ ಅವರನ್ನು ರಾಜ್ಯ ಮಟ್ಟದ ಹುದ್ದೆಯಲ್ಲಿ ಇರುವುದನ್ನು ನೊಡಬಯಸಿದ್ದು.

ಯಾವಾಗ ಬಿಜೆಪಿ ಹೈ ಕಮಾಂಡ್ ಗೆ ಸಂಸದೀಯ ಮಂಡಳಿಯಲ್ಲಿ ಯಡಿಯೂರಪ್ಪ ಇದ್ದರೂ ಸಹ ರಾಜ್ಯದಲ್ಲಿ ಜನ ಬಿಜೆಪಿ ಬಗ್ಗೆ ಇನ್ನೂ ಸಮಾಧಾನ ಹೊಂದಿಲ್ಲ ಎಂದು ಗೊತ್ತಾಯಿತೋ… ಆಗ ಜನಸಂಕಲ್ಪ ಸಮಾವೇಶಗಳಲ್ಲಿ ಯಡಿಯೂರಪ್ಪ ಅವರನ್ನು ಬಿಜೆಪಿ ಹೈ ಕಮಾಂಡ್ ಪಕ್ಕದಲ್ಲಿ ಕೂರಿಸಿಕೊಂಡು ಮನ್ನಣೆ ನೀಡ ತೊಡಗಿತೋ… ಆಗ ಜನರ ದಂಡು ಬರತೊಡಗಿತು. ಅಲ್ಲದೆ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಗೆ 224 ವಿಧಾನಸಭಾ ಕ್ಷೇತ್ರದ ಹಿಂದುಳಿದ ಮೋರ್ಚಾಗಳ ಸಮಾವೇಶ ಸಂಘಟಿಸುವ ಅಧಿಕಾರ ಕೊಟ್ಟಿತೋ… ಅದನ್ನು ಯಶಸ್ವಿಯಾಗಿ ನಡೆಸಿದರು. ಅದರ ಫಲ ಅಮಿತ್ ಷಾ ಇತ್ತೀಚೆಗೆ ರಾಜ್ಯಕ್ಕೆ ಬಂದಾಗ ಯಡಿಯೂರಪ್ಪ ಅವರ ಕಾವೇರಿ ನಿವಾಸಕ್ಕೆ ಹೋಗಿ ವಿಜಯೇಂದ್ರ ಅವರಿಂದ ಹೂಗುಚ್ಛ ಸ್ವೀಕರಿಸಿ ಭಲೇ ಭಲೇ ಎಂದು ಬೆನ್ನು ತಟ್ಟಿದ್ದು ಮಾತ್ರವಲ್ಲದೆ ವಿಜಯೇಂದ್ರ ಕೈಯಲ್ಲಿ ತಿಂಡಿ ಬಡಿಸಿಕೊಂಡು ತಿಂದರು.

ಇಲ್ಲೇ ನೋಡಿ ವಿಜಯೇಂದ್ರ ವಿರೋಧಿಗಳಿಗೆ ಹೊಟ್ಟೆಯಲ್ಲಿ ತೌಡು ಕುಟ್ಟಿದ ಅನುಭವ ಆಗಿದ್ದು. ಇನ್ನು ವಿಜಯೇಂದ್ರ ನನ್ನು ಹೀಗೆ ಬಿಟ್ಟರೆ ಶಿಕಾರಿಪುರದಲ್ಲಿ ನಿಂತು ಗೆದ್ದು ಮುದೊಂದು ದಿನ ಮುಖ್ಯಮಂತ್ರಿ ಆಗುತ್ತಾರೆ. ನಾವು ಈತನನ್ನು ಮುಖ್ಯಮಂತ್ರಿ ಆಗಬಾರದೆಂದು ಎಸ್ತೆ ತಂತ್ರ ಕುತಂತ್ರ ಪರತಂತ್ರ ಮಾಡಿದರು ಹೈ ಕಮಾಂಡ್ ಬಿಎಸ್ ವೈ ಮತ್ತು ಬಿವೈವಿಗೆ ಮಣೆ ಹಾಕುತ್ತಿದೆ. ಆದ್ದರಿಂದ ಶಿಕಾರಿಪುರ ಕ್ಷೇತ್ರದಿಂದ ಟಿಕೆಟ್ ತಪ್ಪಿಸಿ, ವರುಣಾ ದಲ್ಲಿ ಸಿದ್ದು ವಿರುದ್ಧ ನಿಲ್ಲಿಸಿ ಸೋಲಿ ಸುವ ಮೂಲಕ ಮಾತ್ರ ವಿಜಯೇಂದ್ರ ಅವರನ್ನು ರಾಜಕೀಯವಾಗಿ ಮುಗಿಸಬಹುದು ಎಂದು ಹುನ್ನಾರ ಮಾಡಿದರು. ಇದನ್ನು ಹೈ ಕಮಾಂಡ್ ಕಿವಿಗೂ ಮುಟ್ಟಿಸಿ ದರು.

ವರುಣಾ ಕ್ಷೇತ್ರದಲ್ಲಿ ಕಳೆದ ವಿಧಾನಸಭೆ ಚುನಾವಣೆ ಯಲ್ಲಿ ಇದೆ ಬಿವಿವೈ ವಿರುದ್ಧ ಕತ್ತಿ ಮಸೆ ದಿದ್ದ ರಾವು ಕೇತುಗಳು ವಿಜಯೇಂದ್ರ ಗೆ ಟಿಕೆಟ್ ತಪ್ಪಿಸಿ ಆ ಭಾಗದಲ್ಲಿ ವಿಜಯೇಂದ್ರ ಪ್ರಭಾವ ದಿಂದ ಹತ್ತು ಸ್ಥಾನಗಳು ಬಿಜೆಪಿ ಬದಲು ಕಾಂಗ್ರೆಸ್ ಗೆ ಶಿಫ್ಟ್ ಆದವು.

ಆದ್ರೆ ಈ ಬಾರಿ ಇದೇ ರಾವು ಕೇತುಗಳು ವಿಜಯೇಂದ್ರ ಅವರನ್ನು ಸಿದ್ದು ವಿರುದ್ಧ ನಿಲ್ಲಿಸಿ, ಶಿಕಾರಿಪುರದಲ್ಲಿ ಆರ್ ಎಸ್ ಎಸ್ ಪ್ರೇರಿತ ಅಭ್ಯರ್ಥಿ ಒಬ್ಬರಿಗೆ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡು ಬಂದು ವಿಜಯೇಂದ್ರ ನನ್ನು ವರುಣಾ ಫಲ್ಲಿ ಸೋಲಿಸಿ ಒಂದೇ ಏಟಿಗೆ ಬಿ ಎಸ್ ವೈ ಮತ್ಯು ಬೀವೈವಿ ಅವರನ್ನು ರಾಜಕೀಯವಾಗಿ ಹೊಡೆದು ಉರುಳಿಸುವ ಕುತಂತ್ರ ಗಾರಿಕೆ ಮಾಡಿದ್ದರು.

ಆದರೆ ಬಿಎಸ್ ವೈ ವಿರೋಧಿಗಳು ಚಾಪೆ ಕೆಳಗೆ ನುಸುಳಿದರೆ ಯಡಿಯೂರಪ್ಪ ರಂಗೋಲೆ ಕೆಳಗಿ ನುಸುಳಿದರು ಎಂಬಂತೆ ಯಾವುದೇ ಕಾರಣಕ್ಕೂ ವಿಜಯೇಂದ್ರ ವರುಣಾ ಕ್ಷೇತ್ರದಲ್ಲಿ ನಿಲ್ಲಲ್ಲ. ನಾನು ಬಿಟ್ಟು ಕೊಟ್ಟಿರುವ ಶಿಕಾರಿಪುರ ಕ್ಷೇತ್ರದಲ್ಲಿ ನಿಲ್ಲುತ್ತಾನೆ ಎಂದು ಖಡಕ್ಕಾಗಿ ಮಾಧ್ಯಮದ ಮುಂದೆ ಹೇಳಿದರೋ.. ಬಿ ಎಸ್ ವೈ ವಿರೋಧಿ ಬಣ ಪತರುಹೊಟ್ಟು ಹೋಗಿದೆ.

ವಿಜಯೇಂದ್ರ ವರುಣಾ ದಲ್ಲಿ ನಿಲ್ಲಿಸಿ ಸೋಲಿಸಿ ರಾಜಕೀಯವಾಗಿ ಮುಗಿಸುವ ಹುನ್ನಾರಗಳು ಉಲ್ಟಾ ಆಗಿದೆ. ಹಾಗಂತ ಬಿ ಎಸ್ ವೈ ಮತ್ತು ಬಿ ವೈವಿ ವಿರೋಧಿಗಳು ಮತ್ತೆ ಬೇರೊಂದು ತಂತ್ರಗಾರಿಕೆ ಮಾಡುವುದು ಏನೆಂದು ತಲೆಕೆಡಿಸಿ ಕೊಂಡು ಬಿಟ್ಟಿವೆ. ಅದಕ್ಕೆ ಹೇಳೋದು ಮಾನವ ತಾನೊಂದು ಬಗೆದರೆ ದೈವ ಮತ್ತೊಂದು ಬಗೆವುದು ಎಂದು.

kanews

kanews

Leave a Reply

Your email address will not be published. Required fields are marked *