ಶೆಟ್ಟರ್ ಅವರಂತಹ ಹಿರಿಯ ನಾಯಕರಿಗೆ ಬಿಜೆಪಿ ಯಾಕೆ ಟಿಕೆಟ್ ನೀಡಲಿಲ್ಲ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಶೆಟ್ಟರ್ ಅವರು ರಾಜ್ಯದಲ್ಲಿ ಅವರು ಬಿಜೆಪಿ ಕಟ್ಟಿ ಬೆಳೆಸಿದ್ದಾರೆ. ಅವರು ತಮ್ಮ ಭಾಷಣದಲ್ಲಿ ತಮಗೆ ಯಾಕೆ ಟಿಕೆಟ್ ಸಿಕ್ಕಲ್ಲ ಎಂದು ಕಾರಣವನ್ನು ಹೇಳಿದರು. ಅದೇನೆಂದರೆ ಅವರ ವಿರುದ್ಧ ಯಾವುದೇ ಟೇಪ್ ಆಗಲಿ, ಭ್ರಷ್ಟಾಚಾರ ಪ್ರಕರಣವಾಗಲಿ ಇಲ್ಲ. ಅವರು ಭ್ರಷ್ಟಾಚಾರ ಮಾಡದ ಕಾರಣ ಬಿಜೆಪಿಯಲ್ಲಿ ಟಿಕೆಟ್ ಸಿಕ್ಕಿಲ್ಲ. ಶೆಟ್ಟರ್ ಅವರು 40% ಕಮಿಷನ್ ತಿಂದಿಲ್ಲ ಹೀಗಾಗಿ ಸರ್ಕಾರದಲ್ಲಿ ಮಂತ್ರಿಯೂ ಆಗಲಿಲ್ಲ, ಚುನಾವಣೆಯಲ್ಲಿ ಟಿಕೆಟ್ ಕೂಡ ಸಿಗಲಿಲ್ಲ.
ಮೋದಿ ಅವರು ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡುವಾಗ ಕರ್ನಾಟಕ ರಾಜ್ಯದ 40% ಕಣಿಷನ್ ಭ್ರಷ್ಟಾಚಾರ ಮಾಡುವ ನಾಲ್ಕೈದು ನಾಯಕರು ಅವರ ಸುತ್ತ ಇರುತ್ತಾರೆ. ಮೋದಿ ಅವರು ತಾವು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವುದಾಗಿ ಹೇಳಿದ್ದರು, ಆದರೆ ಅವರು ಯಾರು ಭ್ರಷ್ಟರಲ್ಲವೋ ಅವರನ್ನು ಪಕ್ಷದಿಂದ ಹೊರಹಾಕಿದ್ದಾರೆ. ಆಮೂಲಕ ಅವರು ಭ್ರಷ್ಟಾಚಾರಕ್ಕಾಗಿ ಹೋರಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಗದಗದಲ್ಲಿ ದಿಂಗಾಲೇಶ್ವರ ಸ್ವಾಮೀಜಿಗಳು ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಅವರು ಬಿಜೆಪಿ ಸರ್ಕಾರ ವಿನಾಯತಿ ನೀಡಿ, 40% ಬದಲು 30% ಕಮಿಷನ್ ಅನ್ನು ಮಠದಿಂದ ಪಡೆದಿರುವುದಾಗಿ ಹೇಳಿದ್ದಾರೆ. ಬಿಜೆಪಿ ಅವರು ಧರ್ಮದ ವಿಚಾರವಾಗಿ ಮಾತನಾಡುತ್ತಾರೆ, ಭ್ರಷ್ಟಾಚಾರದಲ್ಲಿ ವಿನಾಯತಿ ನೀಡುತ್ತಾರೆ. ಉಳಿದ ರಾಜ್ಯದ ಜನರಿಂದ 40% ಪಡೆಯುತ್ತಾರೆ. ಅದು ಸಣ್ಣದಾಗಲಿ, ದೊಡ್ಡ ಕೆಲಸವಾಗಲಿ 40% ನೀಡಲೇಬೇಕು.
ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಿಗೆ ಪತ್ರ ಬರೆದು ಕರ್ನಾಟಕದಲ್ಲಿ 40% ಕಮಿಷನ್ ಪಡೆಯುತ್ತಿದ್ದಾರೆ ಎಂದು ದೂರು ನೀಡಿದರು. ಪ್ರಧಾನಮಂತ್ರಿಗಳು ಈ ದೂರಿಗೆ ಉತ್ತರ ನೀಡುವುದಿರಲಿ, ಆ ಪತ್ರವನ್ನು ತೆಗೆದುಕೊಂಡಿಲ್ಲ. ಮೈಸೂರು ಸ್ಯಾಂಡಲ್ ಸೋಪ್ ಮಂಡಳಿಯಲ್ಲಿ ಶಾಸಕರ ಪುತ್ರ 8 ಕೋಟಿ ಹಣ ಪಡೆಯುತ್ತಾ ಸಿಕ್ಕಿ ಬೀಳುತ್ತಾನೆ. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿಯಲ್ಲಿ ಒಬ್ಬರಿಂದ 70 ಲಕ್ಷ ಲಂಚ ಪಡೆಯಲಾಗಿದೆ. ಸಹಾಯಕ ಪ್ರಾಧ್ಯಾಪಕರ ನೇಮಕಾತಿ, ಜೆಇಇ ನೇಮಕಾತಿ ಅಕ್ರಮ ನಡೆದಿದೆ. ಯಾವುದರಲ್ಲೇ ನೋಡಿದರು ಬಿಜೆಪಿ 40% ಸರ್ಕಾರ ತೆಗೆದುಕೊಳ್ಳುತ್ತಾರೆ.
ಈ ಹಿಂದೆ ಇವರು ಮಾಡಿದ್ದ ಸರ್ಕಾರ ಕೂಡ ಅವರ ಸ್ವಂತ ಬಲದಿಂದ ಮಾಡಿದ್ದ ಸರ್ಕಾರವಲ್ಲ. ಅದೂ ಹಾಗೂ ಇದು ಎರಡೂ ಕಳ್ಳತನದಿಂದ ಮಾಡಲಾದ ಸರ್ಕಾರ. ಜನ ಬೇರೆಯವರಿಗೆ ಮತ ನೀಡಿದ್ದರು. ನಂತರ ಅವರನ್ನು ಖರೀದಿ ಮಾಡಿ ಸರ್ಕಾರ ರಚಿಸಿದ್ದಾರೆ. ಇವರ ಶಾಸಕರು ಹೇಳುವಂತೆ 2500 ಕೋಟಿ ಕೊಟ್ಟರೆ ಮುಖ್ಯಮಂತ್ರಿಯಾಗಬಹುದು. ಅಂದರೆ ನಿಮ್ಮ ಭವಿಷ್ಯದ ಬೆಲೆ ಬಿಜೆಪಿ ಬಳಿ 2500 ಕೋಟಿ. ಇವರಿಗೆ 40 ಸಂಖ್ಯೆ ಬಹಳ ಸಂತೋಷಪಡುತ್ತಾರೆ. ಹೀಗಾಗಿ ಅವರಿಗೆ ಕೇವಲ 40 ಸೀಟುಗಳನ್ನು ಮಾತು ನೀಡಿ.
ಇನ್ನು ಬಿಜೆಪಿಯವರು ಬಸವಣ್ಣನವರ ಬಗ್ಗೆ ಮಾತನಾಡುತ್ತಾರೆ, ಬಸವಣ್ಣನ ಪ್ರತಿಮೆ ಮುಂದೆ ಕೈ ಮುಗಿಯುತ್ತಾರೆ. ಆದರೆ ದೇಶದ ತುಂಬಾ ದ್ವೇಷವನ್ನು ಬಿತ್ತುತ್ತಾರೆ. ಜಾತಿ ಧರ್ಮಗಳ ನಡುವೆ ಜಗಳ ತಂದಿಡುತತಾರೆ. ಆದರೆ ಬಸವಣ್ಣನವರು ಇದರ ವಿರುದ್ಧ ಹೋರಾಟ ಮಾಡಲು ಜೀವನವನ್ನೇ ಕಳೆದರು. ಇವರು ಒಂದೆರಡು ಉದ್ಯಮಿಗಳಿಗೆ ಸಂಪೂರ್ಣ ನೆರವು ನೀಡುತ್ತಿದ್ದು, ಸಣ್ಣ ಪುಟ್ಟ ವ್ಯಾಪಾರಸ್ಥರು ಕಣ್ಣೀರಾಕುತ್ತಿದ್ದರೂ ಬಿಜೆಪಿ ಸರ್ಕಾರಕ್ಕೆ ಯಾವುದೇ ವ್ಯತ್ಯಾಸವಾಗುವುದಿಲ್ಲ. ಕಳೆದ ಐದು ವರ್ಷಗಳಿಂದ ಈ ಸರ್ಕಾರ ಪ್ರತಿ ಗುತ್ತಿಗೆಯಲ್ಲೂ 40% ಕಮಿಷನ್ ಪಡೆದಿದ್ದಾರೆ. ಹೀಗಾಗಿ ನಾವು ಕೆಲವು ಕಾರ್ಯಕ್ರಮ ನೀಡಲು ತೀರ್ಮಾನಿಸಿದ್ದೇವೆ. ನಾವು ಆರಂಭದಲ್ಲೇ ಸರ್ಕಾರ ಬಂದ ಸಚಿವ ಸಂಪುಟದಲ್ಲಿ 4 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆ.
ಈ ಗ್ಯಾರಂಟಿ ಯೋಜನೆಗಳು ಅದಾನಿ ಅವರಿಗಾಗಲಿ, ಅಂಬಾನಿ ಅವರಿಗಾಗಲಿ ಪ್ರಯೋಜನ ಆಗುವುದಿಲ್ಲ. ನಾವು ಅದಾನಿ ಅವರಿಗೆ ಉಚಿತವಾಗಿ ವಿಮಾನ ನಿಲ್ದಾಣ, ಬಂದರು, ವಿದ್ಯುತ್ ಉತ್ಪಾದನಾ ಘಟಕ ನೀಡುವುದಿಲ್ಲ. ನಾವು ಕರ್ನಾಟಕದ ಜನಸಾಮಾನ್ಯರಿಗೆ ನಾಲ್ಕು ಯೋಜನೆಗಳನ್ನು ನೀಡುತ್ತಿದ್ದೇವೆ. ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ತಿಂಗಳು ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತ, ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ, ಆಮೂಲಕ ವರ್ಷಕ್ಕೆ 24 ಸಾವಿರ ನೀಡಲಾಗುವುದು. ಅನ್ನಭಾಗ್ಯ ಯೋಜನೆ ಮೂಲಕ ಪ್ರತಿ ಬಡ ಕುಟುಂಬಗಳ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುವುದು. ಯುವನಿಧಿ ಯೋಜನೆ ಮೂಲಕ ಪದವೀಧರ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು 3 ಸಾವಿರ, ಡಿಪ್ಲೋಮಾ ಪದವೀಧರರಿಗೆ 1500 ನಿರುದ್ಯೋಗ ಭತ್ಯೆ ನೀಡಲಾಗುವುದು.
ಬಿಜೆಪಿಯವರು ನಿಮ್ಮಿಂದ 40% ಕಮಿಷನ್ ತಿಂದರು, ನಾವು ನಿಮಗೆ ನಾಲ್ಕು ಯೋಜನೆ ನೀಡುತ್ತಿದ್ದೇವೆ. ಪ್ರಧಾನಮಂತ್ರಿಗಳು ಹಿಂದುಳಿದ ವರ್ಗಗಳ ಬಗ್ಗೆ ಮಾತನಾಡುತ್ತಾರೆ. ನಾವು ದೇಶದಲ್ಲಿ ಎಲ್ಲರನ್ನು ಭಾಗಿದಾರರನ್ನಾಗಿ ಮಾಡಿಕೊಳ್ಳಬೇಕಾದರೆ, ಯಾರಿಗೆ ಎಷ್ಟು ಪಾಲು ಸಿಗಬೇಕು ಎಂದು ತಿಳಿಯಬೇಕು. ಯುಪಿಎ ಅವಧಿಯಲ್ಲಿ ಮಾಡಲಾದ ಜಾತಿ ಗಣತಿ ಅಂಕಿಅಂಶಗಳನ್ನು ಪ್ರಧಾನಿಗಳು ಬಹಿರಂಗಪಡಿಸುತ್ತಿಲ್ಲ ಯಾಕೆ? ನರೇಂದ್ರ ಮೋದಿ ಅವರಿಗೆ ಒಬಿಸಿ ಸಮುದಾಯಗಳ ಬಗ್ಗೆ ಕಾಳಜಿ ಇದ್ದರೆ, ಈ ಸಮುದಾಯಗಳಿಗೆ ರಾಜಕೀಯ, ಆರ್ಥಿಕ ಶಕ್ತಿ ತುಂಬಲಿ. ಒಬಿಸಿ ಸಮುದಾಯಗಳಿಗೆ ಶಕ್ತಿ ತುಂಬಬೇಕಾದರೆ, ಒಬಿಸಿ, ದಲಿತರು, ಆದಿವಾಸಿಗಳು ಎಷ್ಟು ಜನ ಇದ್ದಾರೆ ಎಂದು ತಿಳಿಯಬೇಕು.
ಯುಪಿಎ ಸರ್ಕಾರ 2011ರಲ್ಲಿ ಜಾತಿ ಗಣತಿ ಮಾಡಿಸಿದ್ದು, ಅದರ ಪ್ರಕಾರ ದೇಶದಲ್ಲಿ ಹಿಂದುಳಿದ ವರ್ಗಗಳು ಹಾಗೂ ದಲಿತರ ಜನಸಂಖ್ಯೆ ಎಷ್ಟಿದೆ? ಎಂದು ಬಹಿರಂಗಪಡಿಸಲಿ. ಮೋದಿ ಸರ್ಕಾರ ಈ ಅಂಕಿ ಅಂಶಗಳನ್ನು ಯಾರಿಗೂ ನೀಡುತ್ತಿಲ್ಲ. ಕೇಂದ್ರ ಸರ್ಕಾರದ ಕಾರ್ಯದರ್ಶಿಗಳ ಮಟ್ಟದಲ್ಲಿ ಕೇವಲ ಶೇ.7ರಷ್ಟು ಹಿಂದುಳಿದ ಹಾಗೂ ಪರಿಶಿಷ್ಟ ಸಮುದಾಯದವರಿಗೆ ಹುದ್ದೆ ನೀಡಲಾಗಿದೆ. ಹೀಗಾಗಿ ಸರ್ಕಾರ ಜಾತಿ ಗಣತಿ ಅಂಕಿ ಅಂಶಗಳನ್ನು ಬಹಿರಂಗಪಡಿಸಿ ಅದರ ಅನುಗುಣವಾಗಿ ಸರ್ಕಾರದ ಕಾರ್ಯದರ್ಶಿಗಳ ಮಟ್ಟದಲ್ಲಿ ಆಯಾ ಸಮುದಾಯಗಳಿಗೆ ಅಧಿಕಾರ ನೀಡಲಿ. ಇಲ್ಲದಿದ್ದರೆ ಈ ಸರ್ಕಾರ ಹಿಂದುಳಿದ ಹಾಗೂ ದಲಿತ ಸಮುದಾಯಗಳಿಗೆ ದ್ರೋಹ ಮಾಡಿದಂತೆ. ಇನ್ನು ಶೇ.50ರಷ್ಟು ನಿಗದಿ ಮಾಡಿರುವ ಮೀಸಲಾತಿ ಮಿತಿಯನ್ನು ತೆರವುಗೊಳಿಸಲಿ. ಇವುಗಳನ್ನು ಕಾರ್ಯರೂಪಕ್ಕೆ ತರುವವರೆಗೂ ಒಬಿಸಿ ಬಗ್ಗೆ ಅವರು ಮಾತನಾಡುವ ನೈತಿಕತೆ ಇರುವುದಿಲ್ಲ. ಪರಿಶಿಷ್ಟರಿಗೆ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಸಿಗಬೇಕು. ಬಿಜೆಪಿ ಸರ್ಕಾರ ಈ ಕೆಲಸಗಳನ್ನು ಮಾಡದಿದ್ದರೆ ಕಾಂಗ್ರೆಸ್ ಸರ್ಕಾರ ಈ ಕೆಲಸ ಮಾಡಲಿದೆ. ನಾವು ಒಬಿಸಿ, ದಲಿತರು, ಆದಿವಾಸಿಗಳಿಗೆ ಶಕ್ತಿ ತುಂಬಲಿದೆ.
ಕೊನೆಯದಾಗಿ ರೈತರ ವಿಚಾರ ಮಾತನಾಡಲು ಬಯಸುತ್ತೇನೆ. ಯುಪಿಎ ಸರ್ಕಾರ ನಿಮ್ಮ ಸಾಲ ಮನ್ನಾ ಮಾಡಿತ್ತು. 72 ಸಾವಿರ ಕೋಟಿಯಷ್ಟು ರೈತರ ಸಾಲ ಮನ್ನಾ ಮಾಡಲಾಗಿತ್ತು. ನಮ್ಮ ಅವಧಿಯಲ್ಲಿ ಪೆಟ್ರೋ ಪ್ರತಿ ಲೀಟರ್ ಬೆಲೆ 70 ರೂ. ಇತ್ತು. ಅಗೆ ಅನಿಲ್ ಸಿಲಿಂಡರ್ 400 ಇತ್ತು, ನಿಮಗೆ ಅದರ ಮೇಲೆ ತೆರಿಗೆ ಹಾಕುತ್ತಿರಲಿಲ್ಲ, ರಸಗೊಬ್ಬರಗಳಿಗೆ ಸಬ್ಸಿಡಿ ನೀಡಿದ್ದೆವು. ಆದರೆ ಸರ್ಕಾರ ನಿಮಗೆ ಇವುಗಳ ಮೇಲೆ ಜಿಎಸ್ ಟಿ ವಿಧಿಸುತ್ತಿದೆ. ಪರಿಣಾಮ ಪೆಟ್ರೋಲ್ 100, ಸಿಲಿಂಡರ್ 1100 ರೂ. ಆಗಿದೆ. ಇದೆಲ್ಲದರ ಪ್ರಯೋಜನ, ಲಾಭ ಕೆಲವೇ ಕೆಲವು ವ್ಯಾಪಾರಸ್ಥರಿಗೆ ಹೋಗುತ್ತಿದೆ. ಕಬ್ಬು ಬೆಳೆಗಾರರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಇಂದು ನಾನು ಕಬ್ಬು ಬೆಳೆಗಾರರ ಜತೆ ಸಂವಾದ ಮಾಡಿದ್ದು, ಕಬ್ಬು ಬೆಳೆಗೆ ಸೂಕ್ತ ಬೆಲೆ ನೀಡುವ ಭರವಸೆ ನೀಡಿದ್ದೇನೆ. ಇದರ ಜತೆಗೆ ಕೃಷಿ ಕೈಗಾರಿಕೆಗೆ ಆದ್ಯತೆ ನೀಡುತ್ತೇವೆ.
ಮುಖ್ಯಮಂತ್ರಿಗಳು ಮಾವು ಕಾರ್ಖಾನೆ ಬಗ್ಗೆ ಮಾತನಾಡಿದರೂ ಯಾವುದೇ ಕೆಲಸ ಮಾಡಲಿಲ್ಲ. ಅದನ್ನು ನಾವು ಮಾಡಿ ತೋರಿಸುತ್ತೇವೆ. ಕಳೆದ ಬಾರಿ ಚುನಾವಣೆಯಲ್ಲಿ ಮೋದಿ ಅವರು ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಆದರೆ 40 ವರ್ಷಗಳಲ್ಲಿ ಅತಿ ಹೆಚ್ಚಿನ ನಿರುದ್ಯೋಗ ಈಗ ಸೃಷ್ಟಿಯಾಗಿದೆ. ಸರ್ಕಾರಿ ಉದ್ದಿಮೆಗಳು ಒಂದಾದ ಮೇಲೆ ಒಂದು ಖಾಸಗಿಯವರ ಪಾಲಾಗುತ್ತಿದೆ. ಸರ್ಕಾರದ ಹುದ್ದೆಗಳನ್ನು ಕಡಿತ ಮಾಡುತ್ತಿದ್ದಾರೆ. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸಂಘ ಸಂಸ್ಥೆಗಳನ್ನು ಆರಂಭಿಸಬೇಕಿತ್ತು. ಆದರೆ ಖಾಸಗಿಯವರಿಗೆ ನೀಡುತ್ತಿದ್ದಾರೆ. ಇಂತಹ ಭಾರತ ನಮಗೆ ಬೇಡ. ನಿರುದ್ಯೋಗ ಭಾರತ ಬೇಡ, ಬಡ ಭಾರತ ಬೇಡ, ನಮಗೆ ನ್ಯಾಯ ಬೇಕು. ಇದನ್ನೇ ಕರ್ನಾಟಕ ಸರ್ಕಾರ ನೀಡಲಿದೆ. ಬಡವರು, ರೈತರು, ಕರ್ಮಿಕರಿಗಾಗಿ ಸರ್ಕಾರ ಮಾಡುತ್ತೇವೆ. ಬಿಜೆಪಿ ಸರ್ಕಾರದ 40% ಭ್ರಷ್ಟಾಚಾರ ಮರೆಯುವುದಿಲ್ಲ.
ನೀವು ಕಾಂಗ್ರೆಸ್ ಪಕ್ಷ ಕನಿಷ್ಠ 150 ಕ್ಷೇತ್ರಘಲನ್ನು ನೀಡಬೇಕು. ಇಲ್ಲದಿದ್ದರೆ ಭ್ರಷ್ಟಾಚಾರದ ಹಣದಲ್ಲಿ ಅವರು ಶಾಸಕರನ್ನು ಖರೀದಿ ಮಾಡುತ್ತಾರೆ. ಹೀಗಾಗಿ ನೀವು ಬಿಜೆಪಿಯವರಿಗೆ 40ಕ್ಕಿಂತ ಹೆಚ್ಚಿನ ಸೀಟುಗಳನ್ನು ನೀಡಬೇಡಿ.