ಹಠಮಾರಿ ಕುಮಾರಣ್ಣ
ಅಲೆಮಾರಿ ರೇವಣ್ಣ
ಹಾಸನ ವಿಧಾನಸಭಾ ಕ್ಷೇತ್ರ ಜೆಡಿಎಸ್ ಭದ್ರಕೋಟೆ ಆಗಿತ್ತು. ಕಳೆದ 2018ರ ಈ ಕ್ಷೇತ್ರವನ್ನು ಬಿಜೆಪಿಯ ಪ್ರೀತಂ ಗೌಡತನ್ನ ತೆಕ್ಕೆಗೆ ಎಳೆದುಕೊಂಡ ಮೇಲೆ ದಳಪತಿಗಳ ವಲಯದಲ್ಲಿ ಜಗಳಗಳ ಪರ್ವವೇ ಆರಂಭ ಆಗಿಬಿಟ್ಟಿದೆ.
ಅಪ್ಪ ಮಗ ಸೇರಿಕೊಂಡು ಈ ಬಾರಿ ಜೆಡಿಎಸ್ ಪಕ್ಷ 123 ಸ್ಥಾನಗಳನ್ನು ಗೆದ್ದುಕೊಂಡು ಸ್ವತಂತ್ರವಾಗಿ ಅಧಿಕಾರಕ್ಕೆಬರುತ್ತದೆ ಎಂಬ ಭ್ರಮಾಲೋಕದಲ್ಲಿ ತೇಲುತ್ತಿದ್ದಾರೆ.
ಈಗ ಪಂಚರತ್ನ ಯಾತ್ರೆ ಮಾಡಿರುವುದರಿಂದ ರಾಜ್ಯದ ಜನ ಜೆಡಿಎಸ್ ಪಕ್ಷಕ್ಕೆ ಪಂಚಾಮೃತ ಕೊಡುತ್ತಾರೆ ಎಂದುಕಾಯುತ್ತಿದ್ದಾರೆ. ಸದ್ಯ ಫಲಿತಾಂಶ ಬಂದ ಮೇಲೆ ಕುಮಾರಣ್ಣ ನ ಪಂಚ ಅಂಗಗಳಿಗೆ ಡ್ಯಾಮೇಜ್ ಆಗದಿದ್ದರೆ ಒಳಿತು.
ಇದಕ್ಕಾಗಿ ಸಾಧ್ಯವಾದ ಮಟ್ಟಿಗೆ ಎಸ್ಟು ವಿಧಾನಸಭಾ ಕ್ಷೇತ್ರಗಳನ್ನು ಸುತ್ತಬೇಕೋ ಅಷ್ಟು ಸುತ್ತಿ ಜೆಡಿಎಸ್ ಈ ಬಾರಿಅಧಿಕಾರ ಹಿಡಿಯುತ್ತೆ ಎಂಬ ಕನಸನ್ನು ಸಹ ಕಾಣುತ್ತಿದ್ದಾರೆ.
ಆದರೆ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಯಾರನ್ನು ಜೆಡಿಎಸ್ ಅಭ್ಯರ್ಥಿಯನ್ನಾಗಿ ನಿಲ್ಲಿಸಬೇಕೆಂದು ವಿಚಾರದಲ್ಲಿಕುಮಾರಣ್ಣ ಮತ್ತು ರೇವಣ್ಣನ ನಡುವೆ ಶರಂಪರ ತಿಕ್ಕಾಟಗಳು ಶುರುವಾಗಿ ತಿಂಗಳು ಕಳೆದಿದೆ. ಅಲ್ಲದೆ ಇನ್ನೊಂದುತಿಂಗಳಲ್ಲಿ ಚುನಾವಣೆ ನಡೆಯಲಿದೆ.
ಹೀಗಿದ್ದರೂ ಸಹ ಹಾಸನ ಕ್ಷೇತ್ರದಿಂದ ಯಾರಿಗೆ ಟಿಕೆಟ್ ಕೊಡಬೇಕೆಂಬ ಬಗ್ಗೆ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಾಗಿಲ್ಲ ಎಂದರೆ..ಇವರದೊಂದು ದುರ್ಬಲ ಪಕ್ಷ ಎಂಬ ಸಂದೇಶ ಸಹಜವಾಗಿ ಹೋಗುತ್ತದೆ.
ಹಾಸನ ಕ್ಷೇತ್ರದಲ್ಲಿ ದೇವೇಗೌಡರ ಕುಟುಂಬದ ಸದಸ್ಯೆ ಅರ್ಥಾತ್ ರೇವಣ್ಣ ರ ಧರ್ಮ ಪತ್ನಿ ಭವಾನಿ ರೇವಣ್ಣಸುಮಾರು ವರ್ಷಗಳಿಂದ ನಾನೂ ಸಹ ಕುಮಾರಣ್ಣನ ಹೆಂಡತಿಯಂತೆ ಎಂ ಎಲ್ ಎ ಆಗಬೇಕೆಂಬ ಆಸೆ ಇಟ್ಟುಕೊಂಡಿದ್ದಾರೆ. ತಪ್ಪಿಲ್ಲ ಬಿಡಿ.
ಇದಕ್ಕಾಗಿ ಕಳೆದು ಹೋದ ಎರಡ್ಮೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಎಂ ಎಲ್ ಎ ಸೀಟು ಸಿಗುತ್ತೆ ಅಂತಕಾದಿದ್ದು ಕಾದಿದ್ದು ಮಾಡಿದರು ಭವಾನಿ ಮೇಡಂ. ಅದಕ್ಕಾಗಿ ಈ ವರ್ಷ ಟಿಕೆಟ್ ಪಡೆಯಲು ಒಂದು ವರ್ಷದಿಂದಹಾಸನ ವಿಧಾನಸಭಾ ಕ್ಷೇತ್ರವನ್ನು ಸುತ್ತಿದ್ದು ಸುತ್ತಿದ್ದು ಮಾಡಿದರು.
ಆದರೆ ಕುಮಾರಣ್ಣ ಮಾತ್ರ ಕಾರ್ಯಕರ್ತ ಆಗಿರುವ ಸ್ವರೂಪ್ ಅವರಿಗೆ ಮಾತ್ರ ಟಿಕೆಟ್ ಕೊಡುತ್ತೇನೆ. ಕುಟುಂಬದ ಸದಸ್ಯೆ ಭವಾನಿ ಮೇಡಂ ಗೆ ಅತ್ತು ಕರೆದು ಔತಣ ಇಟ್ಟರು ಸಹ ಕೊಡಲ್ಲ ಎಂಬ ಹಠಕ್ಕೆ ಬಿದ್ದಿದ್ದಾರೆ.
ಇದರಿಂದ ವಿಚಲಿತ ರಾಗಿರುವ ರೇವಣ್ಣ ಅಲೆಮಾರಿ ಯಂತೆ ಅಪ್ಪ ದೊಡ್ಡ ಗೌಡರ ಮನೆ ತಮ್ಮ ಚಿಕ್ಕಗೌಡರ(ಕುಮಾರಣ್ಣ)ಮನೆಗೆ ಅಲೆದದ್ದೆ ಅಲೆದದ್ದು.
ಆದರೂ ಭವಾನಿ ಮೇಡಂಗೆ ಯಾವುದೇ ಕಾರಣಕ್ಕೂ ಟಿಕೆಟ್ ಕೊಡಲ್ಲ. ಸ್ವರೂಪ್ ಗೆ ಟಿಕೆಟ್ ಕೊಡೋದು ಎಂದುಮುಲಾಜಿಲ್ಲದೆ ಹೇಳಿಬಿಟ್ಟಿದ್ದಾರೆ.
ತಾಯಿಗೆ ತಕ್ಕ ಮಕ್ಕಳಂತೆ ಪ್ರಜ್ವಲ್ ರೇವಣ್ಣ ಮತ್ತು ಸೂರಜ್ ರೇವಣ್ಣ ಮತ್ತು ಗಂಡ ಎಚ್.ಡಿ. ರೇವಣ್ಣ… ಭವಾನಿರೇವಣ್ಣ ಗೆ ಟಿಕೆಟ್ ಕೊಡದಿದ್ದರೆ ನಾವುಗಳು ಸೇರಿಕೊಂಡು ಏನ್ ಮಾಡ್ತಿವಿ ನೋಡ್ತಾ ಇರು ಎಂದು ಟಿಕೆಟ್ ಅನೌನ್ಸ್ಆಗುವುದನ್ನು ಕಾಯುತ್ತಿದ್ದಾರೆ.
ಅಂದರೆ ಬಹುತೇಕ ಭವಾನಿ ಮೇಡಂ ಗೆ ಸಿಗದಿದ್ದರೆ ಬಂಡಾಯ ಏಳುವ ಸಾಧ್ಯತೆಗಳೇ ಹೆಚ್ಚು. ಆಗ ಸ್ವರೂಪ್ ಪರರೇವಣ್ಣ ಕುಟುಂಬ ಪ್ರಚಾರ ಮಾಡಲ್ಲ, ಸ್ವರೂಪ್ ಬೆಂಬಲಿಗರು ಭವಾನಿ ಮೇಡಂ ಪರ ಪ್ರಚಾರ ಮಾಡಲ್ಲ.
ಆಗ ಇವರಿಬ್ಬರ ಜಗಳದಲ್ಲಿ ಮೂರನೇಯವರು ಅದ ಬಿಜೆಪಿ ಪ್ರೀತಂ ಗೌಡ ಗೆದ್ದರೆ ಅಚ್ಚರಿ ಇಲ್ಲ.
ಆದರೂ ಸ್ವರೂಪ್ ಮತ್ತು ಭವಾನಿ ಬಿಟ್ಟು ಮೂರನೇಯವರು ಯಾರು? ಎಂಬುದೇ ಕುತೂಹಲ.
ಒಂದಂತೂ ಸತ್ಯ ಭವಾನಿ ಮೇಡಂ ಗೆ ಟಿಕೆಟ್ ಕೊಟ್ಟರು, ಕೊಡದಿದ್ದರೂ ಸಹ ಜೆಡಿಎಸ್ ಗೆ ಅಪ್ಪ ಮಕ್ಕಳ ಪಕ್ಷ, ಕುಟುಂಬ ಪಕ್ಷ ಎಂಬ ಕಳಂಕ ಮಾತ್ರ ಹೋಗುವುದಿಲ್ಲ.