ಬಿಜೆಪಿ ಗೆದ್ದರೆ ಮಾತ್ರ
ಮುಂದಿನ ಮುಖ್ಯಮಂತ್ರಿ ಯಾರು?
ಇನ್ನೇನು 43 ದಿನಗಳಲ್ಲಿ ರಾಜ್ಯದಲ್ಲಿ ಯಾವ ಸರ್ಕಾರ ಅಸ್ತಿತ್ವಕ್ಕೆ ಬರುತ್ತೆ ಎಂಬುದು ಗೊತ್ತಾಗಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕೆಲವು ಸಮೀಕ್ಷೆಗಳು ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷವೇ ಅಧಿಕಾರ ಚುಕ್ಕಾಣಿ ಹಿಡಿಯುವ ಸಂಭವಗಳೆ ಹೆಚ್ಚು ಎಂದು ಹೇಳಿವೆ. ಇದನ್ನು ಗಮನಿಸಿರುವ ಬಿಜೆಪಿ ಹೈ ಕಮಾಂಡ್, ಆರ್ ಎಸ್ ಎಸ್ ಮತ್ತು ಬಿ ಎಸ್ ವೈ ವಿರೋಧಿಗಳಿಗೆ ನಡುಕ ಶುರುವಾಗಿದೆ ಎಂದರೂ ತಪ್ಪಾಗಲಾರದು.
ಏಕೆಂದರೆ ಬಿ ಎಸ್ ವೈ ವಿರೋಧಿಗಳು ಸೇರಿಕೊಂಡು ವಯಸ್ಸಿನ ನೆಪದಲ್ಲಿ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಅವಧಿಗೂ ಮೊದಲು ಇಳಿಸಿದ್ದರಿಂದ, ಬಿಜೆಪಿ 70 ಸ್ಥಾನಗಳನ್ನು ಪಡೆದರೆ ಅದೇ ಹೆಚ್ಚು ಎಂಬ ಸಮೀಕ್ಷೆಗಳು ಮತ್ತು ಸ್ವತಃ ಬಿ ಎಸ್ ವೈ ವಿರೋಧಿಗಳೇ ಹೈ ಕಮಾಂಡ್ ಮೂಲಕ ಮಾಡಿಸಿದ್ದ ಸಮೀಕ್ಷೆ ಗಳಿಂದಲೇ ತಿಳಿದು ಬಂದಿದೆ.
ಯಡಿಯೂರಪ್ಪರನ್ನು ಬಿಜೆಪಿ ಪಕ್ಷದಿಂದ ಹೊರಗಿಟ್ಟು ಬಿ ಎಸ್ ವೈ ವಿರೋಧಿಗಳಾದ ಸಿ. ಟಿ. ರವಿ , ಸಂತೋಷ್ ಜಿ , ಪ್ರಹ್ಲಾದ್ ಜೋಷಿ , ಯತ್ನಾಳ್ , ವಿ. ಸೋಮಣ್ಣ, ಮಾಧುಸ್ವಾಮಿ ಅಂಥವರ ಮುಖಗಳನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋದರೆ ಇವರ ಮುಖಗಳನ್ನು ನೋಡಿ ಯಾರೂ ಸಹ ಬಿಜೆಪಿಗೆ ವೋಟ್ ಹಾಕಿಸಿ 50 ಸ್ಥಾನಗಳನ್ನು ಗೆಲ್ಲಿಸಿಕೊಂಡು ಬರುವ ತಾಕತ್ತು ಇಲ್ಲ ಎಂಬುದು ಸ್ಪಷ್ಟವಾಗಿದೆ.
ಈ ಕಾರಣದಿಂದ ಯಡಿಯೂರಪ್ಪ ಅವರನ್ನು ಬಿಜೆಪಿಯ ಮುಖ್ಯ ಕಾರ್ಯಕ್ರಮಗಳಿಗೆ ಕರೆಯದಂತೆ ದೂರವಿಟ್ಟಿದ್ದ ಹೈ ಕಮಾಂಡ್…ಈಗ ಹಳೇ ಗಂಡನ ಪಾದವೇ ಗತಿ ಎಂದು ನಿರ್ಧರಿಸಿ, ಬಿ ಎಸ್ ವೈ ವಿರೋಧಿಗಳ ಮಾತಿಗೆ ತಮ್ಮ ಹಿತ್ತಾಳೆ ಕಿವಿ ಕೊಟ್ಟು ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ ಅವರನ್ನು ದೂರವಿಟ್ಟರೆ ಕರ್ಣಾಟಕದಲ್ಲಿ ಬಿಜೆಪಿಗೆ ದುರ್ಗತಿ ಗ್ಯಾರಂಟಿ ಎಂದು ಮತ್ತೆ ಬಿಎಸ್ವೈ ಮತ್ತು ಬಿ ವೈವಿ ಅವರನ್ನು ಮುನ್ನೆಲೆಗೆ ತರುವುದಕ್ಕೆ ಪ್ರಾರಂಭಿಸಿದ್ದು.
ಇದು ಯಡಿಯೂರಪ್ಪ ಅವರಿಗೂ ಗೊತ್ತು. ತಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ಅವಧಿಗೆ ಮುಂಚೆ ಇಳಿಸಿದ್ದರಿಂದ ತಮ್ಮ ಬೆಂಬಲಿಗರಲ್ಲಿ ಸಾಕಷ್ಟು ಮಂದಿ ಬೇಸರಿಸಿಕೊಂದು ಬಿಜೆಪಿಗೆ ಬೆಂಬಲಿಸುವ ಬದಲು ಕಾಂಗ್ರೆಸ್ ಗೆ ಬೆಂಬಲಿಸಲೂ ನಿರ್ಧರಿಸಿದ್ದಾರೆ ಅದರಲ್ಲೂ, ಈಗಾಗಲೇ ಯಡಿಯೂರಪ್ಪ ಆಪ್ತ ಜನಪ್ರತಿನಿಧಿಗಳು ಸಹ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿ ಬಿಟ್ಟಿದ್ದಾರೆ ಎಂಬುದು.
ಆದರೂ ಸಹ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಹೋರಾಡಿ ಅಧಿಕಾರಕ್ಕೆ ತಂದ ನನಗೆ ಬಿಜೆಪಿ ಸಾಕಷ್ಟು ಅವಕಾಶ ಕೊಟ್ಟಿದೆ, ನನ್ನಿಂದಲೆ ರಾಜ್ಯದಲ್ಲಿ ಅರಳಿದ ಕಮಲ ನಾನು ಬಿಜೆಪಿಯಿಂದ ದೂರವಾದರೆ ನನ್ನಿಂದಲೇ ಕಮರಿ ಹೋಗಬಾರದು ಮತ್ತು ತಮ್ಮ ಮಕ್ಕಳ ರಾಜಕೀಯ ಭವಿಷ್ಯದ ಕಾರಣದಿಂದರೂ ಬಿಜೆಪಿಯನ್ನು ಮತ್ತೆ ಸಂಘಟಿಸಿ ತಮ್ಮ ಬೆಂಬಲಿಗರನ್ನು ಸಮಾಧಾನ ಪಡಿಸಿ ಮತ್ತೆ ಅಧಿಕಾರಕ್ಕೆ ತರಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನನ್ನನ್ನು ಕಡೆಗಣಿಸಿಲ್ಲ… ಬಿಜೆಪಿ ಬೆಂಬಲಿಸಿ ಎಂದು ಸಂದೇಶ ನೀಡಿದ್ದು. ಒಂದು ವೇಳೆ ಬಿಜೆಪಿ ಸೋತರು ಸಹ ಯಡಿಯೂರಪ್ಪ ಅವರಿಗೆ ಖಂಡಿತಾ ಅಸಮಾಧಾನ ಆಗಲ್ಲ.
ಕಾರಣ ಯಡಿಯೂರಪ್ಪರನ್ನು ಅವಧಿಗೆ ಮೊದಲು ಬಿಎಸ್ವೈ ವಿರೋಧಿಗಳು ಕಣ್ಣೀರು ಹಾಕಿ ಇಳಿಸಿದ್ದರಿಂದಲೆ ಬಿಎಸ್ವೈ ಬೆಂಬಲಿಗರಲ್ಲಿ ಅನೇಕರು ಬಿಜೆಪಿ ಯಿಂದ ದೂರವಾಗಲು ಕಾರಣವಾಗಿ ಸೋತಿತು ಮತ್ತು ಸಿ.ಟಿ . ರವಿ ವೀರಶೈವ ಲಿಂಗಾಯತರ ವೋಟು ಬಿಜೆಪಿ ಗೆ ಬೇಕಿಲ್ಲ ,ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದ ಯಡಿಯೂರಪ್ಪರ ಅಡುಗೆ ಮನೆಯಲ್ಲಿ ಯಡಿಯೂರಪ್ಪನ ಮಗ ವಿಜಯೇಂದ್ರ ಟಿಕೆಟ್ ನಿರ್ಧಾರ ಆಗಲ್ಲ ಎಂದಿದ್ದು ಸಹ, ನಾಲ್ಕು ಸೀಟು ಗೆಲ್ಲಿಸಿಕೊಂಡು ಬರಲು ತಾಕತ್ತಿಲ್ಲದ ಸಿ. ಟಿ. ರವಿ ಲಿಂಗಾಯತರ ಬೆಂಬಲ ಇಲ್ಲದೆ ಅವನಾಗಲೀ, ಬಿಜೆಪಿ ಪಕ್ಷವನ್ನಾಗಲಿ ತಾಕತ್ತಿದ್ದರೆ ಗೆಲ್ಲಿಸಿಕೊಂಡು ಬರಲಿ ಎಂದು ದೂರವಾಗಿದ್ದು. ಇದು ಸಹ ಬಿಜೆಪಿ ಸೋತರೆ ಕಾರಣ ಎಂಬ ಸಂದೇಶ ಹೋಗುತ್ತೆ.
ಆದ್ದರಿಂದ ಬಿ ಎಸ್ ವೈ ವಿರೋಧಿಗಳು ಮಾಡಿದ ಯಡ ವಟ್ಟಿನಿಂದ ಅಸಮಾಧಾನ ಹೊಂದಿರುವ ಯಡಿಯೂರಪ್ಪ ಬೆಂಬಲಿಗರನ್ನು ವಾಪಾಸ್ ಬಿಜೆಪಿಗೆ ಬೆಂಬಲಿಸುವಂತೆ ಮಾಡಬೇಕೆಂದರೆ.. ಅದು ಈ ಇಬ್ಬರಿಂದ ಮಾತ್ರ ಸಾಧ್ಯ ಎಂಬ ಮಹಾ ತಂತ್ರಗಾರಿಕೆ ಅನ್ನು ಬಿಜೆಪಿ ಹೈ ಕಮಾಂಡ್ ಮಾಡಿದ್ದು.
ಅವರುಗಳೇ ಕೇಂದ್ರ ಮಂತ್ರಿ ಮತ್ತು ಯಡಿಯೂರಪ್ಪ ಅವರ ಪರಮಾಭಿಮಾನಿ ಶೋಭಾ ಕರಂದ್ಲಾಜೆ ಮತ್ತು ಯಡಿಯೂರಪ್ಪ ಮಗ ವಿಜಯೇಂದ್ರ.
ಇಷ್ಟು ದಿನ ಯಡಿಯೂರಪ್ಪ ಅವರಿಂದ ದೂರವಿರುವಂತೆ ನೋಡಿ ಕೊಂಡಿದ್ದ ಶೋಭಾ ಮೇಡಂ ಅವರನ್ನು ದಿಢೀರ್ ಅಂತ ಯಡಿಯೂರಪ್ಪರ ಪಕ್ಕದಲ್ಲೇ ಕೂರಿಸಿದೆ. ಅಂದರೆ ಮೊನ್ನೆ ನಡೆದ ಯಡಿಯೂರಪ್ಪರ ಪತ್ರಿಕಾ ಗೋಷ್ಠಿಯಲ್ಲಿ ಕೆಲವೊಂದು ಸಲಹೆಗಳನ್ನು ಶೋಭಾ ಮೇಡಂಗೆ ಕೊಡುತ್ತಿದ್ದದ್ದು ಕಂಡು ಬಂದಿತು.
ಬಹುಶಃ ಕರ್ನಾಟಕದಲ್ಲಿ ಇದುವರೆಗೆ ಯಾವ ಪಕ್ಷದಿಂದಲೂ ಮಹಿಳಾ ಮುಖ್ಯಮಂತ್ರಿ ಆಗಿಲ್ಲ. ಅ ಒಂದು ಅವಕಾಶವನ್ನು ಬಿಜೆಪಿ ಹೈ ಕಮಾಂಡ್ ಉಪಯೋಗಿಸಿಕೊಳ್ಳುವ ತಂತ್ರಗಾರಿಕೆ ಗೆ ಮುಂದಾಗಿರುವಂತೆ ಕಾಣುತ್ತೆ.
ಅಂದರೆ ಒಂದು ವೇಳೆ ವಿಜಯೇಂದ್ರ ಅವರನ್ನು ಈ ಚುನಾವಣೆಯ ನಂತರ ಬಿಜೆಪಿ ಬಹುಮತ ಪಡೆದರೆ ಮಾತ್ರ ಮುಖ್ಯಮಂತ್ರಿ ಮಾಡಿದರೆ ಬಿಎಸ್ವೈ ಮತ್ತು ವಿಜಯೇಂದ್ರ ವಿರೋಧಿಗಳು ಅಸಮಾಧಾನಗೊಂಡು ಬಂಡಾಯ ಏಳುವ ಸಂಭವ ಇದೆ.ಆದ್ದರಿಂದ ವಿಜಯೇಂದ್ರ ಅವರನ್ನು ಇನ್ನು ಐದು ವರ್ಷಗಳ ನಂತರ ಅಂದರೆ 2029ರ ಚುನಾವಣೆ ನಂತರ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಮಾಡಿದರಾಯಿತು.
ಆದ್ದರಿಂದ ಈಗ ಬಿಜೆಪಿಯ ಬೆನ್ನೆಲುಬು ಆಗಿರುವ ವೀರಶೈವ ಲಿಂಗಾಯತರೂ ಸಹ ಯಡಿಯೂರಪ್ಪ ಅಪ್ತೆ ಶೋಭಾ ಮೇಡಂ ಅವರನ್ನು ಮುಖ್ಯಮಂತ್ರಿ ಮಾಡಿದರೆ ಸಮಾಧಾನ ಗೊಳ್ಳುತ್ತಾರೆ, ಒಕ್ಕಲಿಗರು ಸಹ ಒಕ್ಕಲಿಗ ಮಹಿಳೆಯನ್ನು ಮುಖ್ಯಮಂತ್ರಿ ಮಾಡುತ್ತಾರೆ ಎಂದುಕೊಂಡು ಹೆಚ್ಚಿನ ಸಂಖ್ಯೆಯ ಒಕ್ಕಲಿಗರು ಬಿಜೆಪಿ ಅತ್ತ ವಾಲುತ್ತಾರೆ ಎಂಬ ದೂರದೃಷ್ಟಿಯಿಂದಲೋ…ಅಥವಾ ಯಡಿಯೂರಪ್ಪ ಕುಟುಂಬಕ್ಕೆ ಶೋಭಾ ಮೇಡಂ ಮೂಲಕವೇ ಬಿಜೆಪಿಯಲ್ಲಿ ರಾಜಕೀಯವಾಗಿ ಚೆಕ್ ಮೇಟ್ ಇಡಬೇಕೆಂದು ಯೋಚಿಸಿದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಆದ್ದರಿಂದಲೇ ಈಗಾಗಲೇ ಬಿಜೆಪಿ ಯಿಂದ ದೂರ ಸರಿಯುತ್ತಿರುವ ಲಿಂಗಾಯತರು ಮತ್ತು ಒಕ್ಕಲಿಗರನ್ನು ಬಿಜೆಪಿಯಲ್ಲೇ ಇಟ್ಟುಕೊಳ್ಳಬೇಕು ಈ ರೀತಿ ಈ ಎರಡು ಪ್ರಬಲ ಸಮುದಾಯಗಳು ಒಪ್ಪುವ ಶೋಭಾ ಅವರನ್ನೇ ಮುಖ್ಯಮಂತ್ರಿ ಮಾಡಬೇಕೆಂದು ಬಿಜೆಪಿ ಹೈ ಕಮಾಂಡ್ ಮಹಾ ತಂತ್ರಗಾರಿಕೆ ಹೆಣೆದಿರುವಂತೆ ಮೇಲ್ನೋಟಕ್ಕೆ ಕಾಣುತ್ತೆ.
ಅಲ್ಲಿಗೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯ ಬಹುದೆಂಬ ಈ ಲೆಕ್ಕಾಚಾರ ಬಿಜೆಪಿ ಪಕ್ಷಕ್ಕೆ ಎಷ್ಟರ ಮಟ್ಟಿಗೆ ವರ್ಕ್ ಔಟ್ ಆಗುತ್ತದೆ ಎಂಬುದನ್ನೂ ಸಹ ಕಾದುನೋಡಬೇಕಿದೆ.