ಗಾಲಿ ಜನಾರ್ಧನ ರೆಡ್ಡಿಯ ಕಲ್ಯಾಣ ಕರ್ನಾಟಕ ಪಾರ್ಟಿಗೆ ಯಾವುದೇ ಕಾರಣಕ್ಕೂ ಅಧಿಕಾರದ ಚುಕ್ಕಾಣಿ ಹಿಡಿಯು ವಸ್ಟು ಸ್ಥಾನ ಬರೋಲ್ಲ ಅಂತ ಗೊತ್ತಿತ್ತು. ಅದ್ದರಿಂದಲೆ ತಮ್ಮದೇ ಪ್ರಭಾವವಿರುವ ಕಲ್ಯಾಣ ಕರ್ನಾಟಕ ಭಾಗದ 34 ಸ್ಥಾನಗಳಲ್ಲಿ ಮಾತ್ರ ತನ್ನ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸಿರುವುದು.
ಜನಾರ್ಧನ ರೆಡ್ಡಿ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಪ್ರಥಮ ಬಾರಿಗೆ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲು ಕಾರಣರಾಗಿದ್ದರು. ಅಂದು ಬಿಜೆಪಿಗೆ ಬಹುಮತಕ್ಕೆ ಬೇಕಾದ 113 ಸ್ಥಾನಗಳಿಗೆ 3 ಸ್ಥಾನಗಳ ಕೊರತೆಯಿತ್ತು.
ಆದರೆ ಬೇರೆ ದಾರಿಯಿಲ್ಲದೆ 6 ಮಂದಿ ಪಕ್ಷೇತರ ಶಾಸಕರ ಬೆಂಬಲವನ್ನು ಪಡೆಯಲೆಬೇಕಾದ ಅನಿವಾರ್ಯತೆ ಬಿಜೆಪಿ ಪಕ್ಷಕ್ಕೆ ಇತ್ತು. ಆಗ ಜನಾರ್ಧನ ರೆಡ್ಡಿಯವರು ತೀರಾ ಆಪ್ತರಾಗಿದ್ದ ಪಕ್ಷೇತರ ಶಾಸಕರಿಗೆ ಯಡಿಯೂರಪ್ಪ ಅವರಿಗೆ ಹೇಳಿ ಮಂತ್ರಿ ಸ್ಥಾನ ಮತ್ತೊಂದು ಸಹಾಯ ಮಾಡುವ ಭರವಸೆ ಕೊಟ್ಟು ಬಿಜೆಪಿ ಸರ್ಕಾರಕ್ಕೆ ಬೆಂಬಲಿಸುವಂತೆ ಮಾಡಿದರು. ಆಗ ಮುಖ್ಯಮಂತ್ರಿಯಾದ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂತು.
ಆದ್ದರಿಂದಲೇ ಇಂದು ಸಹ ಯಡಿಯೂರಪ್ಪ ಮುಖ್ಯಮಂತ್ರಿ ಆದದ್ದೇ ನನ್ನಿಂದ ಎಂದು ಮೀಸೆ ತಿರುವುತ್ತಲೇ ಇರುತ್ತಾರೆ. ಇದೇ ಜನಾರ್ಧನ ರೆಡ್ಡಿ ತಮಗೆ ಬೇಕಾದವರಿಗೆ ಮಂತ್ರಿ ಸ್ಥಾನ ಕೊಡುತ್ತಿಲ್ಲ. ಇದಕ್ಕೆಲ್ಲ ಶೋಭಾ ಕರಂದ್ಲಾಜೆ ಕಾರಣ. ಅವರನ್ನು ಮಂತ್ರಿ ಸ್ಥಾನದಿಂದ ಇಳಿಸಲೇಬೇಕೆಂದು ಕೆಲವು ಶಾಸಕರನ್ನು ವಿಮಾನದಲ್ಲಿ ಕರೆದುಕೊಂಡು ಆಕಾಶಕ್ಕೆ ಹಾರಿ ಕಣ್ಮರೆಯಾಗಿದ್ದರು.
ಇದರಿಂದಾಗಿ ವಿರೋಧ ಪಕ್ಷಗಳು ಬಿಜೆಪಿ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ಬಹುಮತ ಸಾಬೀತುಪಡಿಸಲು ಹಠ ಹಿಡಿದೀದ್ದದ್ದವು. ಇದರಿಂದ ಯಾವುದೇ ಕಾರಣಕ್ಕೂ ಬಂಡಾಯ ಎದ್ದಿರುವ ಗಾಲಿ ರೆಡ್ಡಿ ತಂಡಕ್ಕೆ ಬಗ್ಗೆ ಬಾರದು ಎಂದುಕೊಂಡಿದ್ದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬೀಳುವ ಹಂತಕ್ಕೆ ತಲುಪಿತ್ತು. ಕೊನೆಗೆ ಈ ಗಾಲಿಗಾರು ಬೇಡಿಕೆಗಳಿಗೆ ಮಣಿದಿದ್ದರಿಂದ ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಮುಂದುವರೆದರು.
ನಂತರ ಅಕ್ರಮ ಗಣಿಗಾರಿಕೆ ಮಾಡಿ ಕೋಟಿ ಕೋಟಿ ಲೂಟಿ ಮಾಡಿದ್ದ ಗಾಲಿ ಜನಾರ್ದನ ರೆಡ್ಡಿ ಜೈಲು ಸೇರಬೇಕಾಯಿತು. ಇದರಿಂದಾಗಿ ಬಿಜೆಪಿ ಪಕ್ಷದ ಕೇಂದ್ರ ಸಚಿವೆಯಾಗಿದ್ದ. ಸುಷ್ಮಾ ಸ್ವರಾಜ್ ಅವರನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ತಂದು ನಿಲ್ಲಿಸಿ ಗಾಲಿ ಜನಾರ್ದನ ರೆಡ್ಡಿ, ಶ್ರೀರಾಮುಲು ಜೊತೆ ಸೇರಿ ಜೋಡೆತ್ತು ಗಳಂತೆ ಗೆಲ್ಲಿಸಲು ಕಸರತ್ತು ಮಾಡಿದ್ದರು.
ಜನಾರ್ಧನ ರೆಡ್ಡಿ ಜೈಲಿಗೆ ಹೋದ ಮೇಲೆ ಇವರ ಬೆಂಬಲಕ್ಕೆ ಸುಷ್ಮಾ ಸ್ವರಾಜ್ ನಿಲ್ಲಲಿಲ್ಲ. ಆಗ ಯಡಿಯೂರಪ್ಪ ನಾನು ರೆಡ್ಡಿ ಬೆಂಬಲಕ್ಕೆ ನಿಲ್ಲುತ್ತೇನೆ ಎಂದು ನಿಂತಿದ್ದರು. ಅಂದಿನಿಂದ ಯಡಿಯೂರಪ್ಪರಿಗೆ ನಿಯತ್ತಾಗಿದ್ದಾರೆ.
ಆಗ ಜನಾರ್ಧನ ರೆಡ್ಡಿಯನ್ನು ಜೈ ಲಿಗೆ ಕಳುಹಿಸಿದ್ದವರಲ್ಲಿ ಪ್ರಮುಖ ಪಾತ್ರ ವಹಿಸಿದೆ ಸಿದ್ದರಾಮಯ್ಯ. ವಿರೋಧ ಪಕ್ಷದ ಪ್ರಮುಖ ನಾಯಕರಾಗಿದ್ದ ಸಿದ್ದರಾಮಯ್ಯ ಕೊನೆಗೂ ಅಕ್ರಮ ಗಣಿಗಾರಿಕೆಯಲ್ಲಿ ಗಾಲಿ ಯನ್ನು ಜೈಲಿಗೆ ಕಳುಹಿಸಿ ಬಿಜೆಪಿ ಪಕ್ಷ ಸೋಲುವುದಕ್ಕೆ ಕಾರಣರಾಗಿದ್ದರು.
ಈ ಬಾರಿಯ 2023ರ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಜನಾರ್ಧನ ರೆಡ್ಡಿಗೆ ಬಿಜೆಪಿ ಟಿಕೆಟ್ ಕೊಡುವುದಿಲ್ಲ ಎಂದು ಖಡಕ್ಕಾಗಿ ಹೇಳಿತ್ತು. ಆಗಲೇ ಜನಾರ್ಧನ ರೆಡ್ಡಿ ಕಲ್ಯಾಣ ಕರ್ನಾಟಕ ಪಾರ್ಟಿ ಕಟ್ಟಿದ್ದು.
ಜನಾರ್ಧನ ರೆಡ್ಡಿಯ ಅವರ ಹೊಸ ಪಕ್ಷ 34 ಸ್ಥಾನಗಳಲ್ಲಿ ಕೇವಲ 10 ಸ್ಥಾನ ಗೆದ್ದರು ಸಹ ಯಾವುದೇ ಪಕ್ಷ ಸರ್ಕಾರ ರಚಿಸಲು ಬಹುಮತ ಪಡೆಯದಿದ್ದಲ್ಲಿ ಅವರ ಆಶ್ರಯಕ್ಕೆ ಬಂದು ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.
ಅದು ಕಲ್ಯಾಣ ಕರ್ನಾಟಕ ಪಕ್ಷದ ನಿಲುವುಗಳಿಗೆ ಸ್ಪಂದಿಸುವ ಪಕ್ಷಕ್ಕೆ ಮಾತ್ರ ನಮ್ಮ ಪಕ್ಷದ ಬೆಂಬಲ ಎಂದಿದ್ದಾರೆ. ಗಾಲಿ ಪಕ್ಷ ಗೆಲ್ಲುವುದಕ್ಕೆ ಮೊದಲು ಈ ರೀತಿ ಹೇಳಿರುವುದು ಕೂಸು ಹುಟ್ಟುವ ಮುಂಚೆ ಕುಲಾವಿ ಎಂಬಂತಿದೆ.
ಅದೇನೇ ಇರಲಿ ಒಂದು ವೇಳೆ ಯಾವುದೇ ಪಕ್ಷಕ್ಕೂ ಬಹುಮತ ಬರದೆ ಅತಂತ್ರ ಸ್ಥಿತಿ ನಿರ್ಮಾಣವಾದರೆ ಮಾತ್ರ ಗಾಲಿ ರೆಡ್ಡಿ ಪಕ್ಷ 10 ಸ್ಥಾನ ಗೆದ್ದರು ಸಹ ಜೆಡಿಎಸ್ ನ ಕುಮಾರಸ್ವಾಮಿ ಯಂತೆ ಕಿಂಗ್ ಮೇಕರ್ ಆದರೂ ಅಚ್ಚರಿ ಇಲ್ಲ.
ಇದರಿಂದ ಬಿಜೆಪಿಯ ಬಿ ಎಸ್ ವೈ ವಿರೋಧಿಗಳಿಗೆ ಮತ್ತು ಜನಾರ್ಧನ ರೆಡ್ಡಿ ವಿರೋಧಿಗಳಿಗೆ ಆತಂಕ ತರುವುದರಲ್ಲಿ ಅನುಮಾನವಿಲ್ಲ.