ಕಡೂರು ಕ್ಷೇತ್ರದಲ್ಲಿ ಈ ಬಾರಿಯೂ ಕಮಲ ಕಿಲಕಿಲ

ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಕೊಡಿಸುತ್ತೇನೆಂದು ಸಿದ್ದರಾಮಯ್ಯ ಜೆಡಿಎಸ್ ನಿಂದ ಕರೆಸಿಕೊಂಡರು.

ಆದರೆ ಯಾವುದೇ ಕಾರಣಕ್ಕೂ ದತ್ತಾಗೆ ಟಿಕೆಟ್ ಕೊಡದಂತೆ ನೋಡಿಕೋ ಎಂದು ಕುಮಾರಸ್ವಾಮಿ ಗುಪ್ತವಾಗಿ ಡಿ.ಕೆ.ಶಿವಕುಮಾರ್ ಗೆ ಹೇಳಿದ್ದರಿಂದ ದತ್ತಾಗೆ ಟಿಕೆಟ್ ತಪ್ಪಿದೆಯಂತೆ.

ಹಾಲಿ ಶಾಸಕ ಬೆಳ್ಳಿ ಪ್ರಕಾಶ್ ಕಡೂರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ.

ಆದರೂ ಸಹ ಅದ್ಯಾಕೋ.. ಕ್ಷೇತ್ರದ ಮತದಾರರು *ಬೆಳ್ಳಿ*, ಎಂದರೆ ಸಾಕು *ಗರಂ* ಎನ್ನುತ್ತಿದ್ದಾರೆ.ಆದ್ದರಿಂದ ನಾವು ಈ ಬಾರಿ ದತ್ತಾಗೆ ವೋಟ್ ಕೊಡುತ್ತೇವೆ ಎನ್ನುತ್ತಿದ್ದರು.

ಆದರೆ ಈಗ ದತ್ತಾಗೆ ಟಿಕೆಟ್ *ಕೈ* ಕೊಟ್ಟಿದ್ದರಿಂದ ಬೆಳ್ಳಿ ಗೆಲುವು ಸಲೀಸಾಗಿದೆ.

ಕಾರಣ ಹಾಲಿ ಮತ್ತು ನಿಕಟಪೂರ್ವ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಯಡಿಯೂರಪ್ಪ ಬೆಳ್ಳಿಪರ ಪ್ರಚಾರಕ್ಕೆ ಇಳಿಯುತ್ತಾರೆ.

ಮೋದಿ ಮತ್ತು ಪಕ್ಷದ ವರ್ಚಸ್ಸು ಸಹ ಶಾಸಕ ಬೆಳ್ಳಿ ಪ್ರಕಾಶ್ ಗೆಲುವಿಗೆ ಸಹಕಾರವಾಗಲಿದೆ.

ಕಡೂರು ಕ್ಷೇತ್ರದಲ್ಲಿ ಈ ಬಾರಿಯೂ ಕಮಲ ಕಿಲ ಕಿಲ ಅನ್ನುವ ಸಾಧ್ಯತೆಗಳೆ ಹೆಚ್ಚು.

ಇದು ಅಡ್ವಾನ್ಸ್ ಸಮೀಕ್ಷೆ.

ಪಂಚನಹಳ್ಳಿ ಜಿ. ದಯಾನಂದಸಾಗರ ಮೂರ್ತಿ
ಕಾನೂನು ಮತ್ತು ಪತ್ರಿಕಾ ಕ್ಷೇತ್ರ

ಸಂಪಾದಕ
ವಿಜಯಸೂರ್ಯ ವಾರಪತ್ರಿಕೆ

ದಿನಾಂಕ 5-4-2023

Leave a Reply

Your email address will not be published. Required fields are marked *