KITTUR RANICHANAMMA AWARD TO Dr. AMBIKA .C

ಶ್ರೀಮತಿ ಅಂಬಿಕಾ ಸಿ ಅವರು ಇವರು ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯೋಗ ಶಿಕ್ಷಕಿ, ಚಿನ್ನದ ಪದಕ ವಿಜೇತರು, ಗಾಂಧಾರಿ ವಿದ್ಯಾ ಶಿಕ್ಷಕಿ, ಗರ್ಭಾವಸ್ಥೆಯಲ್ಲಿ ಪ್ರಸವದ 2 ದಿನಗಳ ಹಿಂದೆ ಯೋಗ ಮಾಡುವುದರ ಮೂಲಕ ಹೈರೆಂಜ್ ಬುಕ್ ಆಫ್ ವರ್ಡ್ ರೆಕಾರ್ಡ್ಸ್ ಮತ್ತು ಯೋಗ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಇಡೀ ವಿಶ್ವದಲ್ಲೇ ಪ್ರಪ್ರಥಮ ಬಾರಿಗೆ ವಿಶ್ವ ದಾಖಲೆ ಮಾಡಿದ್ದಾರೆ, ಯೋಗ ಕ್ಷೇತ್ರದಲ್ಲಿ 26 ವರ್ಷಗಳಿಂದ ಗಣನೀಯವಾದ ಸೇವೆ ಸಲ್ಲಿಸುತ್ತಾ, ಅಲ್ಪಸಂಖ್ಯಾತರಿಗೆ, ಮಂಗಳಮುಖಿಯರಿಗೆ, ಅಂದ ಮಕ್ಕಳಿಗೆ, ಬೀದಿ ಮಕ್ಕಳಿಗೆ, ವಿಕಲಾಂಗ ಚೇತನರಿಗೆ, ಹಿರಿಯ ನಾಗರಿಕರಿಗೆ, ಪೌರಕಾರ್ಮಿಕರಿಗೆ, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ಯೋಗ, ಪ್ರಾಣಾಯಾಮ, ಮುದ್ರಾ ಯೋಗ, ಲಾಫಿಂಗ್ ತೆರಪಿ ಧ್ಯಾನಾದಿಗಳನ್ನು ಉಚಿತವಾಗಿ ಹೇಳಿಕೊಡುವುದರ ಮೂಲಕ ಸೇವೆಯನ್ನು ಸಲ್ಲಿಸುತ್ತಿದ್ದಾರೆ, ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿಗೆ ಯೋಗ ಶಿಕ್ಷಣವನ್ನು ನೀಡಿದ್ದಾರೆ ಹಾಗೂ ಅನೇಕ ಜನಜಾಗೃತಿ ಮತ್ತು ಅಭಿಯಾನ ಕಾರ್ಯಕ್ರಮ ಹಾಗೂ ಬಡ ಮತ್ತು ಅಂದ ಮಕ್ಕಳಿಗೆ ಉಚಿತವಾಗಿ ಪುಸ್ತಕ, ಬ್ಯಾಗು ಇತ್ಯಾದಿ …. ನೀಡುವುದರ ಮೂಲಕ ತಮ್ಮನ್ನು ತಾವು ತೊಡಗಿಸಿಕೊಂಡು ಕಾರ್ಯನಿರ್ವಹಿಸುತ್ತಾ ವಿಶ್ವ ದಾಖಲೆಗಳು, ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿ, ಕಾರ್ಯನಿರ್ವಹಿಸುತ್ತಿರುವ ಮಹಿಳೆಯರ ಸಾಧನೆ ಕುರಿತಾದಂತಹ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಮತ್ತು
ಅನೇಕ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಾ ಬಂದಿದ್ದಾರೆ.. ಇವರ ಇ ಸಾಧನೆಯನ್ನ ಗುರುತಿಸಿ, ಮಾರ್ಚ್ 25 ರಂದು ರವೀಂದ್ರ ಕಲಾಕ್ಷೇತ್ರ ಬೆಂಗಳೂರಿನಲ್ಲಿ ಆಯೋಜಿಸಿದ್ದ, 2026 ಸಾಲಿನ
ಕರ್ನಾಟಕ ಸರ್ಕಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ “ವ್ಯಕ್ತಿ ವಿಭಾಗ”ದಲ್ಲಿ ಗೌರವ “ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ”ಯನ್ನು ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶ್ರೀಮತಿ ಲಕ್ಷ್ಮಿ ಆರ್ ಹೆಬ್ಬಾಳ್ಕರ್ ಮತ್ತು ಮಾನ್ಯ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದಂತಹ ಶ್ರೀಮತಿ ಜಿ ಪದ್ಮಾವತಿ ರವರುಗಳು ಶ್ರೀಮತಿ ಅಂಬಿಕಾ. ಸಿ ರವರ ಯೋಗ ಕ್ಷೇತ್ರದಲ್ಲಿನ ಗಣನೀಯ ಸಾಧನೆಯನ್ನು ಗುರುತಿಸಿ ಗೌರವ “ಕಿತ್ತೂರು ರಾಣಿ ಚೆನ್ನಮ್ಮ” ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

