ನಾಲ್ಕು ಕೇಂದ್ರಗಳಲ್ಲಿ ಮತ ಎಣಿಕೆ ಮಾಧ್ಯಮ ಕೇಂದ್ರಗಳ ಸ್ಥಾಪನೆ

ನಾಳೆ ಬೆಂಗಳೂರಿನ ನಾಲ್ಕು ಕೇಂದ್ರಗಳಲ್ಲಿ ಮತ ಎಣಿಕೆ ಮಾಧ್ಯಮ ಕೇಂದ್ರಗಳ ಸ್ಥಾಪನೆ

ಬೆಂಗಳೂರು ನಗರ ಜಿಲ್ಲೆ, ಮೇ 12 (ಕರ್ನಾಟಕ ವಾರ್ತೆ): ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ರ ಹಿನ್ನೆಲೆಯಲ್ಲಿ ನಾಳೆ ಅಂದರೆ 13.05.2023 ರಂದು ನಡೆಯಲಿರುವ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗಾಗಿ ನಾಲ್ಕು ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಮತ ಎಣಿಕಾ ಕಾರ್ಯವು ಬೆಳಿಗ್ಗೆ 8.00 ಗಂಟೆಗೆ ಪ್ರಾರಂಭಗೊಳ್ಳಲಿದೆ. ಪ್ರತಿ ಮತ ಎಣಿಕಾ ಕೇಂದ್ರದಲ್ಲೂ ಮಾಧ್ಯಮ ಪ್ರತಿನಿಧಿಗಳು ವರದಿ ಮಾಡಲು ಸುಸಜ್ಜಿತ ಮಾಧ್ಯಮ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಬೆಂಗಳೂರು ಕೇಂದ್ರ ವಿಭಾಗದ 162- ಶಿವಾಜಿನಗರ, 154- ಆರ್.ಆರ್ ನಗರ, 163- ಶಾಂತಿನಗರ, 164-ಗಾಂಧಿನಗರ, 165-ರಾಜಾಜಿನಗರ, 168-ಚಾಮರಾಜಪೇಟೆ, 169- ಚಿಕ್ಕಪೇಟೆ ಕ್ಷೇತ್ರಗಳ ಮತ ಎಣಿಕಾ ಕಾರ್ಯವು ನಗರದ ಬಿ.ಎಂ.ಎಸ್ ಮಹಿಳೆಯರ ಕಾಲೇಜಿನಲ್ಲಿ , ನಂ.30, ಬ್ಯೂಗಲ್ ರಾಕ್ ರಸ್ತೆ, ಗಾಂಧಿ ಬಜಾರ್, ಬಸವನಗುಡಿ, ಬೆಂಗಳೂರು -04, ಇಲ್ಲಿ ನಡೆಯಲಿದೆ. ಸಮನ್ವಯಕ್ಕಾಗಿ ಡಾ. ಕೆ ಎನ್ ಕವನ, ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸರ್ವಜನಿಕ ಸಂಪರ್ಕ ಇಲಾಖೆ, ಇವರನ್ನು ದೂ: 9844855371 ಮೂಲಕ ಸಂಪರ್ಕಿಸಬಹುದಾಗಿದೆ.

ಬೆಂಗಳೂರು ಉತ್ತರ ವಿಭಾಗದ 151-ಕೆ.ಆರ್.ಪರಂ, 157- ಮಲ್ಲೇಶ್ವರಂ, 156- ಮಹಾಲಕ್ಷ್ಮೀ ಲೇ ಔಟ್, 158- ಹೆಬ್ಬಾಳ, 159- ಪುಲಕೇಶಿನಗರ,160-ಸರ್ವಜ್ಞನಗರ, 161-ಸಿ.ವಿ.ರಾಮನ್ ನಗರ ಕ್ಷೇತ್ರಗಳ ಮತ ಎಣಿಕೆಯು ಮೌಂಟ್ ಕಾರ್ಮೆಲ್ ಕಾಲೇಜು, 58, ಪ್ಯಾಲೇಸ್ ರಸ್ತೆ, ವಸಂತನಗರ, ಬೆಂಗಳೂರು-52 ಇಲ್ಲಿ ನಡೆಯಲಿದೆ. ಸಮನ್ವಯಕ್ಕಾಗಿ ಬಿ. ಜಿ ಪೂರ್ಣಿಮಾ, ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸರ್ವಜನಿಕ ಸಂಪರ್ಕ ಇಲಾಖೆ, ಇವರನ್ನು ದೂ: 9448682771 ಮೂಲಕ ಸಂಪರ್ಕಿಸಬಹುದಾಗಿದೆ.

ಬೆಂಗಳೂರು ದಕ್ಷಿಣ ವಿಭಾಗದ 166- ಗೋವಿಂದರಾಜನಗರ, 167-ವಿಜಯನಗರ, 170-ಬಸವನಗುಡಿ, 171- ಪದ್ಮನಾಭನಗರ, 172-ಬಿ.ಟಿ.ಎಂ ಲೇ ಔಟ್, 173-ಜಯನಗರ, 175- ಬೊಮ್ಮನಹಳ್ಳಿ, ಕ್ಷೇತ್ರಗಳ ಮತ ಎಣಿಕೆಯು ಎಸ್.ಎಸ್.ಎಂ.ಆರ್.ವಿ ಪಿ.ಯು ಕಾಲೇಜು, ನಂ.17, 36ನೇ ಕ್ರಾಸ್, 28ನೇ ಮೈನ್ ರೋಡ್ , 4ಏ ಬ್ಲಾಕ್ , ಜಯನಗರ, ಬೆಂಗಳೂರು ಇಲ್ಲಿ ನಡೆಯಲಿದೆ. ಸಮನ್ವಯಕ್ಕಾಗಿ ವೈ. ಸಿ ಸಂಪತ್ ಕುಮಾರ್ ಮುಖ್ಯ ವರದಿಗಾರರು, ವಾರ್ತಾ ಮತ್ತು ಸರ್ವಜನಿಕ ಸಂಪರ್ಕ ಇಲಾಖೆ, ಇವರನ್ನು ದೂ: 9448536962 ಮೂಲಕ ಸಂಪರ್ಕಿಸಬಹುದಾಗಿದೆ.

ಬೆಂಗಳೂರು ನಗರ ಜಿಲ್ಲಾ ವಿಭಾಗದ 150-ಯಲಹಂಕ, 152- ಬ್ಯಾಟರಾಯನಪುರ, 153-ಯಶವಂತಪುರ, 155-ದಾಸರಹಳ್ಳಿ, 174- ಮಹದೇವಪುರ, 176-ಬೆಂಗಳೂರು ದಕ್ಷಿಣ ಹಾಗೂ 177-ಆನೇಕಲ್ ಕ್ಷೇತ್ರಗಳ ಮತ ಎಣಿಕೆಯು ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ನಂ. 23, ವಿಠ್ಠಲ್ ಮಲ್ಯ ರಸ್ತೆ, ಬೆಂಗಳೂರು-01ಇಲ್ಲಿ ನಡೆಯಲಿದೆ. ಸಮನ್ವಯಕ್ಕಾಗಿ ಪಲ್ಲವಿ ಹೊನ್ನಾಪುರ, ಉಪನಿರ್ದೇಶಕರು, ವಾರ್ತಾ ಮತ್ತು ಸರ್ವಜನಿಕ ಸಂಪರ್ಕ ಇಲಾಖೆ, ಇವರನ್ನು ದೂ: 9480841219 ಮೂಲಕ ಸಂಪರ್ಕಿಸಬಹುದಾಗಿದೆ.

ಮಾಧ್ಯಮ ಮಿತ್ರರಿಗಾಗಿ ಬೆಳಗಿನ ಉಪಹಾರ, ಕಾಫಿ/ಟೀ, ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಗಿದ್ದು, ಅದರ ಕೂಪನ್ ನ್ನು ಸಂಬಂಧಿಸಿದ ಅಧಿಕಾರಿಗಳಿಂದ ಪಡೆಯಬಹುದಾಗಿದೆ.

ಮತ ಎಣಿಕಾ ಕೇಂದ್ರದ ಮಾಧ್ಯಮ ಕೇಂದ್ರ ಪ್ರವೇಶಿಸಲು ಭಾರತೀಯ ಚುನಾವಣಾ ಆಯೋಗ ನೀಡಿರುವ ಅಧಿಕೃತ ಪ್ರವೇಶ ಪತ್ರ ಕಡ್ಡಾಯವಾಗಿ ತರತಕ್ಕದ್ದು.

ಮಾಧ್ಯಮ ಕೇಂದ್ರ ಹೊರತುಪಡಿಸಿ ಮತ ಎಣಿಕಾ ಕೇಂದ್ರದ ಇತರೆ ಯಾವುದೇ ಸ್ಥಳಗಳಲ್ಲಿಯೂ ಓಡಾಟ ಹಾಗೂ ಮೊಬೈಲ್ ಫೋನ್ ಇಟ್ಟುಕೊಳ್ಳುವುದು ಅಥವಾ ಬಳಸುವುದು ಕಡ್ಡಾಯವಾಗಿ ನಿಷೇಧಿಸಿದೆ.

***********************

kanews

kanews

Leave a Reply

Your email address will not be published. Required fields are marked *