*ಟಿ.ನರಸಿಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಿಯಾಂಕಾ ಗಾಂಧಿ ಅವರ ಮಾತುಗಳು*

ನಾನು ಇಲ್ಲಿಗೆ ಬಂದಾಗ ಪ್ರದೇಶ ಎಷ್ಟು ಸುಂದರವಾಗಿದೆ ಎಂದು ಅನಿಸಿತು. ಇದು ಸಂಗಮ ಸ್ಥಳ ಕಾವೇರಿ ಹಾಗೂಕಬಿನಿ ಸಂಗಮವಾಗಿದೆ. ಇದು ದೇವಾಲಯಗಳ ಸ್ಥಳವಾಗಿದೆ. ಇದೊಂದು ಪವಿತ್ರ ಭೂಮಿಯಾಗಿದ್ದು, ಇಲ್ಲಿಗೆಬಂದಿರುವುದಕ್ಕೆ ಸಂತೋಷವಿದೆ. ನಾನಿಂದು ಚುನಾವಣೆಯ ಸಮಯದಲ್ಲಿ ಇಲ್ಲಿಗೆ ಬಂದಿದ್ದು, ಚುನಾವಣೆಸಮಯದಲ್ಲಿ ಬೇರೆ ಬೇರೆ ಪಕ್ಷದ ನಾಯಕರು ಬೇರೆ ಬೇರೆ ಮಾತನಾಡುತ್ತಾರೆ.

ಪ್ರತಿಯೊಬ್ಬರು ನಾವು ಒಳ್ಳೆಯವರು, ಬೇರೆಯವರು ಕೆಟ್ಟವರು, ಅವರು ತಪ್ಪು ಮಾಡಿದ್ದು, ನಾವು ಸರಿಪಡಿಸುತ್ತೇವೆಎಂದು ಹೇಳುತ್ತಾರೆ. ನೀವು ಎಲ್ಲರ ಮಾತುಗಳನ್ನು ಆಳಿಸಿ, ಯಾರು  ಸತ್ಯ ಹೇಳುತ್ತಿದ್ದಾರೆ, ಯಾರು ಸುಳ್ಳುಹೇಳುತ್ತಿದ್ದಾರೆ ಎಂದು ತೀರ್ಮಾನಿಸಿ ಯಾರಿಗೆ ಮತ ಹಾಕಬೇಕು ಎಂದು ಹೇಗೆ ತೀರ್ಮಾನಿಸುತ್ತೀರಿ? ಇದಕ್ಕೆ ನಾವುಕೆಲವು ಮೂಲಭೂತ ವಿಚಾರಗಳನ್ನು ಅರ್ಥಮಾಡಿಕೊಳ್ಳಬೇಕು. ಆಗ ಮಾತ್ರ ಸರಿಯಾದ ನಿರ್ಣಯ ಕೈಗೊಳ್ಳಲುಸಾಧ್ಯ.

ನಮ್ಮ ದೇಶ ಹಾಗೂ ರಾಜ್ಯ ಹೇಗೆ ನಿರ್ಮಾಣವಾಗಿದೆ ಎಂದು ಆಲೋಚಿಸಿ. ಪ್ರತಿ ರಾಜ್ಯ ಅದರದೇ ಆದ ಸಂಸ್ಕೃತಿ, ಆಲೋಚನೆಗಳು, ಚಿಂತನೆ ಮೂಲಕ ನಿರ್ಮಾಣವಾಗುತ್ತದೆ. ಜಮೀನಿನಲ್ಲಿ ಕೆಲಸ ಮಾಡುವ ರೈತರು, ಮನೆಯಲ್ಲಿಕೆಲಸ ಮಾಡುವವರು ರಾಜ್ಯವನ್ನು ನೀರ್ಮಾಣ ಮಾಡಲಾಗಿದೆ. ನಾವು ನಮ್ಮ ರಾಜ್ಯ ಹಾಗೂ ದೇಶದ ಮೇಲೆಅಭಿಮಾನ ಯಾಕೆ ಬರುತ್ತದೆ. ಕಾರಣ, ರಾಜ್ಯ ಹಾಗೂ ದೇಶವನ್ನು ನಾವು ನಿರ್ಮಾಣ ಮಾಡಿರುತ್ತೇವೆ. ನೀವುಯಾವಾಗ ನಿಮ್ಮ ಭೂಮಿಯಲ್ಲಿ ಶ್ರಮವಹಿಸಿ ದುಡಿದಾಗ, ಫಲ ಚೆನ್ನಾಗಿ ಬಂದರೆ, ನಿಮಗೆ ಹೆಮ್ಮೆಯ ಭಾವನೆಮೂಡುತ್ತದೆ. ನಿಮ್ಮ ಪರಿಶ್ರಮ, ಬೆವರು ನಿಮ್ಮ ಭೂಮಿ ಸೇರಿರುತ್ತದೆ. ಇದೇ ಪ್ರಕಾರ ಅಂದರೆ ಏನು? ತನ್ನ ರಾಜ್ಯಹಾಗೂ ದೇಶವನ್ನು ಕಟ್ಟುವ ಸಹಕಾರ ನೀಡುವ ಭರವಸೆಯ, ಜನರಿಗಾಗಿ ಸಮರ್ಪಿತರಾಗಿರುತ್ತಾರೆ, ಜನರ ಧ್ವನಿಆಲಿಸುತ್ತಾರೆ, ನಿಮ್ಮ ಸಮಸ್ಯೆ ಆಲಿಸುತ್ತಾರೋ ಅದು ನಿಜವಾದ ಸರ್ಕಾರವಾಗುತ್ತದೆ. ದೇಶದ ಬಲ ಹೆಚ್ಚಿಸಿ ವಿಕಾಸಮಾಡುವುದು, ವಿವಿಧ ಸಂಸ್ಕೃತಿಗಳ ರಕ್ಷಣೆ ಸರ್ಕಾರದ ಜವಾಬ್ದಾರಿಯಾಗಿದೆ. ಸೇವೆ ಕೂಡ ಸರ್ಕಾರಧ ಧರ್ಮವಾಗಿದೆ. ಪ್ರಾಮಾಣಿಕತೆ ಕೂಡ ಸರ್ಕಾರದ ತತ್ವವಾಗಿರಬೇಕು. ಆದರೆ ಇಂದು ಕರ್ನಾಟಕದಲ್ಲಿ ಯಾವ ಸ್ಥಿತಿ ಇದೆ.

ನಾಲ್ಕು ವರ್ಷಗಳ ಹಿಂದೆ ರಚನೆಯಾದ ಸರ್ಕಾರ ಜನರ ಬೆಂಬಲದಿಂದ ರೂಪಿತವಾದ ಸರ್ಕಾರವಲ್ಲ. ಕಳೆದಚುನಾವಣೆಯಲ್ಲಿ ನೀವು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಆಯ್ಕೆ ಮಾಡಿದ್ದಿರಿ. ಆದರೆ ಬಿಜೆಪಿಯು ಬೇರೆಪಕ್ಷಗಳ ಶಾಸಕರನ್ನು ಹಣ ಕೊಟ್ಟು ಖರೀದಿ ಮಾಡಿ ಸರ್ಕಾರವನ್ನು ರಚಿಸಿದೆ. ಆರಂಭದಿಂದಲೇ ನಿಮ್ಮ ಭರವಸೆಮುರಿದಿದ್ದಾರೆ. ಆರಂಭದಿಂದಲೇ ಇವರು ದ್ರೋಹ, ದುರಾಸೆಯ ಆಧಾರದ ಮೇಲೆ ಸರ್ಕಾರ ರಚನೆಯಾಗಿದ್ದು, ಇವುಗಳಿಂದಲೇ ಸರ್ಕಾರ ಬೀಳಲಿದೆ. ಇದರ ಪರಿಣಆಮವಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಯಾವುದೇ ಕೆಲಸಮಾಡಲಿಲ್ಲ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ಬರಬೇಕಾದ ಅನುದಾನಗಳುಕಡಿಮೆಯಾಗುತ್ತಾ ಬಂದಿವೆ.

ಕರ್ನಾಟಕದ ಧ್ವಜ ನಮ್ಮ ಹೆಮ್ಮೆಯ ಪ್ರತೀಕವಾಗಿದ್ದು, ಸರ್ಕಾರ ಇದನ್ನು ಅಧಿಕೃತಗೊಳಿಸಲಿಲ್ಲ. ಪದೇ ಪದೆ ನಾಯಕರಬದಲಾವಣೆ, ಮಂತ್ರಿ ಮಂಡಲ ವಿಸ್ತರಣೆ ಮಾಡಲಿಲ್ಲ. ಸರ್ಕಾರ ಯಂತ್ರಗಳು ದುರ್ಬಲವಾಯಿತು. ಬಹಳ ಬೇಸರದಸಂಗತಿ ಎಂದರೆ 40% ಸರ್ಕಾರ ರಾಜ್ಯದ ಜನರನ್ನು ಲೂಟಿ ಮಾಡಿದೆ. ನಾಚಿಕೆ ಬಿಟ್ಟು ಲಿರ್ಲಜ್ಜತೆಯಿಂದ ರಾಜ್ಯ ಲೂಟಿಮಾಡಿದೆ. ಗುತ್ತಿಗೆದಾರರು ಕಮಿಷನ್ ನೀಡಲಾಗದೇ ಆತ್ಮಹತ್ಯೆ ಮಾಡಿಕೊಂಡರು. ಗುತ್ತಿಗೆದಾರರ ಸಂಘ, ಶಿಕ್ಷಣಸಂಸ್ಥೆಗಳ ಸಂಘಗಳು ಭ್ರಷ್ಟಾಚಾರದ ವಿರುದ್ಧ ಪ್ರಧಾನಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನ, ಪರಿಹಾರ ಸಿಗಲೇಇಲ್ಲ.

ಪೊಲೀಸ್, ಇಂಜಿನಿಯರ್ ಸೇರಿದಂತೆ ನೇಮಕಾತಿ ಅಕ್ರಮಗಳು ನಡೆದರೂ ಯಾವುದೇ ತಪ್ಪಿತಸ್ಥರ ವಿರುದ್ಧ ಕ್ರಮಜರುಗಲಿಲ್ಲ. ಕಾರಣ ಇವರೆಲ್ಲರೂ ಬಿಜೆಪಿ ಜತೆ ಕೈ ಜೋಡಿಸಿದ್ದರು. ಬಿಜೆಪಿ ಶಾಸಕರ ಪುತ್ರನ ಬಳಿ 8 ಕೋಟಿ ಲಂಚದಹಣ ಸಿಕ್ಕಿ ಬಿದ್ದ ವಿಚಾರ ನಿಮಗೆಲ್ಲ ಗೊತ್ತಿದೆ. ಆತನ ವಿಚಾರಣೆ ನಡೆಸುವ ಬದಲು, ಶಾಸಕರು ತಲೆ ಮರೆಸಿಕೊಂಡರು. ಸರ್ಕಾರ ಕೋವಿಡ್ ಪರಿಸ್ಥಿತಿಯನ್ನೂ ಬಿಡಲಿಲ್ಲ, ಮಕ್ಕಳು ತಿನ್ನುವ ಮೊಟ್ಟೆಯನ್ನು ಬಿಡಲಿಲ್ಲ, ಎಲ್ಲದರಲ್ಲೂ ಲೂಟಿಮಾಡಿದರು. ಸರ್ಕಾರ 40% ಕಮಿಷನ್ ಮೂಲಕ 1.50 ಲಕ್ಷ ಕೋಟಿ ಹಣವನ್ನು ಲೂಟಿ ಮಾಡಿದ್ದಾರೆ. ಹಣದಲ್ಲಿಜನರಿಗೆ ಎಷ್ಟು ಅನುಕೂಲ ಮಾಡಿಕೊಬಹುದಾಗಿತ್ತು ಎಂಬ ಅಂದಾಜು ಇದೆಯಾ? 2025 ಕಿ.ಮೀ ಹೆದ್ದಾರಿ, 30 ಸಾವಿರ ಸ್ಮಾರ್ಟ್ ತರಗತಿಗಳ ನಿರ್ಮಾಣ ಮಾಡಬಹುದಾಗಿತ್ತು. 750 ಕಿ.ಮೀ ಮೆಟ್ರೋ ಲೈನ್ ನಿರ್ಮಾಣಮಾಡಬಹುದಿತ್ತು. ಇದರಿಂದ 30 ಲಕ್ಷ ಮನೆಗಳನ್ನು ಬಡವರಿಗಾಗಿ ಕಟ್ಟಬಹುದಾಗಿತ್ತು. ನಿಮ್ಮಲ್ಲಿ ಎಷ್ಟು ಜನರಿಗೆಸರ್ಕಾರಿ ನೌಕರಿ ಸಿಕ್ಕಿದೆ.

ರಾಜ್ಯ ಸರ್ಕಾರದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇವೆ. ಹುದ್ದೆಗಳ ಖಾಲಿ ಇದ್ದರೂ ನೀವು ನಿರುದ್ಯೋಗಿಗಳಿದ್ದು, ಇದರ ಅರ್ಥವೇನು? ನಿಮ್ಮ ಉದ್ಯೋಗಗಳನ್ನು ನೀಡುತ್ತಿಲ್ಲ. ಸರ್ಕಾರ ಎಷ್ಟು ಬರವಸೆಗಳನ್ನು ನೀಡಿದ್ದರೋ ಅಷ್ಟನ್ನುಮುರಿದಿದ್ದಾರೆ. ಬಿಜೆಪಿ ನಮ್ಮ ಕರ್ನಾಟಕಕ್ಕೆ ನಮ್ಮ ವಚನ ಎಂಬ ಪ್ರಣಾಳಿಕೆ ಕೊಟ್ಟಿದ್ದಾರೆ. ಕಾರಣಕ್ಕೆ ಕಾಂಗ್ರೆಸ್ ಪಕ್ಷಬಿಜೆಪಿ ನಿಮ್ಮ ಹತ್ತಿರ ಇದೆಯಾ ಉತ್ತರ ಎಂದು ಕೇಳುತ್ತಿದೆ. ನಾವು ಎಷ್ಟೇ ಪ್ರಶ್ನೆ ಕೇಳಿದರೂ ಬಿಜೆಪಿ ಸರ್ಕಾರಯಾವುದಕ್ಕೂ ಉತ್ತರ ನೀಡುತ್ತಿಲ್ಲ. ಬಿಜೆಪಿಯವರು ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದರೂ ಅದರಲ್ಲೂ ಮೋಸಮಾಡಿದೆ. ಕೇಂದ್ರದಲ್ಲಿ ಇವರದೇ ಸರ್ಕಾರವಿದೆ. ಮೀಸಲಾತಿ ಹೆಚ್ಚಳಕ್ಕೆ ಸಂವಿಧಾನದ 9ನೇ ಶೆಡ್ಯುಲ್ ನಲ್ಲಿಸೇರಿಸಬೇಕು, ಆದರೆ ಅದನ್ನೂ ಸರ್ಕಾರ ಮಾಡುತ್ತಿಲ್ಲ. ನಿಮ್ಮ ಮುಂದೆ ಬಂದು ಅವರು ಮೀಸಲಾತಿ ಹೆಚ್ಚಳದ ಬಗ್ಗೆಭಾಷಣ ಮಾಡುತ್ತಾರೆ. ಆದರೆ ಮೀಸಲಾತಿ ಹೆಚ್ಚಳಕ್ಕೆ ಅಗತ್ಯ ಕೆಲಸ ಮಾಡಿಯೇ ಇಲ್ಲ.

ನಂದಿನಿ ವಿಚಾರವಾಗಿ ಮಾತನಾಡುವುದಾದರೆ, ನಂದಿನಿ ಕರ್ನಾಟಕದ ಹೆಮ್ಮೆಯಾಗಿದ್ದು, ಸಹಕಾರಿ ಸಂಸ್ಥೆಯನ್ನುನಾಶ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಮೊದಲು 99 ಲಕ್ಷ ಲೀಟರ್ ಹಾಲು ರಾಜ್ಯದಲ್ಲಿ ಉತ್ಪಾದನೆ ಆಗುತ್ತಿತ್ತು. ಆದರೆ ಇಂದು 70 ಲಕ್ಷ ಲವೀಟರ್ ಮಾತ್ರ ಹಾಲು ಉತ್ಪಾದನೆಯಾಗುತ್ತಿದೆ. ಉದ್ದೇಶಪೂರ್ವಕವಾಗಿ ಹಾಲಿನಉತ್ಪಾದನೆ ಕಡಿಮೆ ಮಾಡಿದ್ದಾರೆ. ಗುಜರಾತಿನ ಸಹಕಾರಿ ಸಂಸ್ಥೆ ಅಮೂಲ ಅನ್ನು ರಾಜ್ಯಕ್ಕೆ ಪರಿಚಯಿಸುವ ಷಡ್ಯಂತ್ರರೂಪಿಸಿದ್ದಾರೆ. ನಿಮಗೆ ನೆನಪಿದ್ದರೆ, ಕಾಂಗ್ರೆಸ್ ಅವಧಿಯಲ್ಲಿ ಅತಿ ಹೆಚ್ಚಿನ ಹಾಲು ಉತ್ಪಾದನೆಯಾಗಿ ಶಾಲಾ ಮಕ್ಕಳಿಗೆಹಾಲು ನೀಡುವ ಕ್ಷೀರ ಭಾಗ್ಯ ಯೋಜನೆಯನ್ನು ಪರಿಚಯಿಸಲಾಯಿತು. ಕ್ಷೀರಧಾರೆ ಕಾರ್ಯಕ್ರಮದ ಮೂಲಕ ಹಾಲುಉತ್ಪಾದಕರಿಗೆ 5 ರೂ. ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಇದರಿಂದ ಹೆಚ್ಚಿನ ಹಾಲು ಉತ್ಪಾದನೆಯಾಗುತ್ತಿತ್ತು. ನಿಮ್ಮಹೆಮ್ಮೆಯ ಕರ್ನಾಟಕ ರಾಜ್ಯವನ್ನು ಬಿಜೆಪಿ ಯಾವ ರೀತಿ ಲೂಟಿ ಮಾಡಿದ್ದಾರೆ ಎಂದು ನಿಮಗೆ ಗೊತ್ತಿರಲಿ.

ಕೆಲವು ಸರ್ಕಾರ ನಿಮ್ಮ ಹಿತಕ್ಕಾಗಿ ಕೆಲಸ ಮಾಡುತ್ತವೆ. ನಿಮ್ಮ ಸಮುದಾಯ, ಸಂಸ್ಕೃತಿಯನ್ನು ಗೌರವಿಸುತ್ತವೆ. ಆದರೆ ಸರ್ಕಾರ ಬಸವಣ್ಣ, ನಾರಾಯಣಗುರುಗಳಂತಹ ಮಹನೀಯರಿಗೆ ಅಪಮಾನ ಮಾಡಿದೆ. ಕನ್ನಡಿಗರು ತಮ್ಮಪರಿಶ್ರಮದಿಂದ ದುಡಿದು ಬೆಳೆದಿದ್ದು, ಬಿಜೆಪಿ ನಾಯಕರು ಚುನಾವಣೆ ವೇದಿಕೆ ಮೇಲೆ ನಿಂತು ನೀವು ಮೋದಿ ಅವರಿಗೆಮತ ಹಾಕದಿದ್ದರೆ, ಮೋದಿ ಅವರ ಆಶೀರ್ವಾದ ಸಿಗುವುದಿಲ್ಲ ಎಂಬ ಧಮಕಿ ಹಾಕುತ್ತಾರೆ. ಬಸವಣ್ಣ, ನಾರಾಯಣಗುರು, ಕುವೆಂಪು ಅವರು ಆಶೀರ್ವಾದ ನೀಡಿದ್ದಾರೆ, ಅಂತಹ ಜನರಿಗೆ ಈಗಿನ ಯಾವುದೇ ರಾಜಕೀಯ ನಾಯಕರಆಶೀರ್ವಾದ ಬೇಕಿಲ್ಲ. ಮೋದಿ ಅವರ ಆಶೀರ್ವಾದ ಬೇಕು ಎಂದು ಹೇಳಿರುವುದು ರಾಜ್ಯಕ್ಕೆ ಮಾಡಿರುವ ದೊಡ್ಡಅಪಮಾನ.  ನಿಮ್ಮ ಆಲೋಚನೆ, ಪರಿಶ್ರಮದಿಂದ ರಾಜ್ಯ ನಿರ್ಮಾಣವಾಗಿದೆ. ನೀವು ಅದೆಷ್ಟು ಬಾರಿಅಸಾಧ್ಯವಾದುದನ್ನು ಸಾಧ್ಯ ಮಾಡಿದ್ದೇವೆ.

ರಾಜ್ಯದಲ್ಲಿ 2.50 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದರೂ ಅದನ್ನು ತುಂಬುತ್ತಿಲ್ಲ, ಭಾಗದ ಯುವಕರುನಿರುದ್ಯೋಗಿಗಳಾಗಿರುವುದನ್ನು ಕೇಳಿದರೆ ಮನಸ್ಸಿಗೆ ನೋವುಂಟಾಗುತ್ತದೆ. ಹುದ್ದೆಗಳು ದರ ನೀಗದಿಯಾಗಿದೆಎಂದು ಗೊತ್ತಾದರೆ ನಮ್ಮ ಮನಸ್ಸು ಛಿದ್ರವಾಗುತ್ತದೆ. ಸಹಾಯಕ ಪ್ರಾದ್ಯಾಪಕ, ಕಿರಿಯ ಇಂಜಿನಿಯರ್ ಹುದ್ದೆಗಳಿಗೆ30-30 ಲಕ್ಷ ನಿಗದಿ ಮಾಡಲಾಗಿದೆ.

ಮೋದಿ ಅವರ ಆತ್ಮೀಯ ಸ್ನೇಹಿತರಾದ ಅಧಾನಿ, ಅಂಬಾನಿ ಅವರು ಸಾವಿರಾರು ಕೋಟಿ ಹಣವನ್ನುಸಂಪಾದಿಸುತ್ತಿದ್ದು, ಜಮೀನಿನಲ್ಲಿ ಬೆವರು ಸುರಿಸಿ ದುಡಿಯುವ ರೈತರಿಗೆ ಸೂಕ್ತವಾಗಿ ಹಣ ಸೀಗುತ್ತಿಲ್ಲ. ದೊಡ್ಡಉದ್ಯೋಗಪತಿಗಳಿಗೆ ಬ್ಯಾಂಕುಗಳಿಂದ ಸುಲಭ ಸಾಲ ಸಿಗುತ್ತವೆ. ಅವರಿಂದ ಜಿಎಸ್ ಟಿ ಕೂಡ ಸಂಗ್ರಹಿಸುವುದಿಲ್ಲ. ಆದರೆ ಜನಸಾಮಾನ್ಯರಿಂದ ಜಿಎಸ್ ಟಿ ಸುಲಿಗೆ ಮಾಡುತ್ತಾರೆ. ಅಡುಗೆ ಅನಿಲಕ್ಕೆ 1100 ರೂ ನೀಡಬೇಕಾದ ಪರಿಸ್ಥಿತಿಬಂದಿದೆ. ಅಡುಗೆ ಎಣ್ಣೆ, ಬೇಳೆ ಕಾಳುಗಳ ಬೆಲೆ ಗಗನಕ್ಕೇರಿದೆ. ನಿಮ್ಮಿಂದ ಸುಲಿಗೆ ಮಾಡಿದ ಹಣವನ್ನು ತಮ್ಮ ಉದ್ಯಮಿಸ್ನೇಹಿತರಿಗೆ ನೀಡಲಾಗುತ್ತಿದೆ. ನಿಮ್ಮ ಸಹಾಯಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ನೀವು ಬಡತನದಲ್ಲಿ ಸಿಲುಕಿದ್ದು, ನಿಮ್ಮನ್ನು ಬಡತನದಿಂದ ಮೇಲೆತ್ತಲು ಅವರಿಗೆ ಇಷ್ಟವಿಲ್ಲ. ನಿಮ್ಮನ್ನು ಬಡತನದಿಂದ ಮೇಲೆತ್ತಿದರೆ, ನೀವು ಅವರವಿರುದ್ಧ ನಿಂತು ಪ್ರಶ್ನಿಸುತ್ತೀರಿ ಎಂದು ಅವರು ನಿಮ್ಮನ್ನು ಮೇಲೆತ್ತಲು ಬಯಸುವುದಿಲ್ಲ. ಹೀಗಾಗಿ ನಿಮ್ಮನ್ನು ತುಳಿದುಹಾಕುತ್ತಾರೆ.

ಕಾಂಗ್ರೆಸ್ ಸರ್ಕಾರ ಇದ್ದಾಗ ಅನ್ನಭಾಗ್ಯ, ಕ್ಷೀರಭಾಗ್ಯ, ಪಶುಭಾಗ್ಯ, ಕೃಷಿ ಭಾಗ್ಯ, ವಿದ್ಯಾ ಸಿರಿ, ಇಂದಿರಾ ಕ್ಯಾಂಟೀನ್ಯೋಜನೆಗಳನ್ನು ಜಾರಿಗೆ ತಂದಿತ್ತು. ಎಲ್ಲ ಯೋಜನೆಗಳು ಜನಸಾಮಾನ್ಯರ ಅನುಕೂಲಕ್ಕಾಗಿ ಮಾಡಲಾಗಿತ್ತು. ನೆರೆ, ಬರ ಬಂದು ಬೆಳೆಗಳು ನಾಶವಾದರೂ ಬಿಜೆಪಿ ಸರ್ಕಾರ ನಿಮ್ಮ ನೆರವಿಗೆ ಬರುವುದಿಲ್ಲ. ಇಲ್ಲಿನ ಆಣೆಕಟ್ಟು, ನೀರಾವರಿಯೋಜನೆ ಜಾರಿಗೆ ತಂದಿದ್ದು, ಕಾಂಗ್ರೆಸ್ ಸರ್ಕಾರ. ನಾವು ಕೊಟ್ಟ ಮಾತಿನಂತೆ ನಡೆಯುತ್ತೇವೆ. ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ನಮ್ಮ ಸರ್ಕಾರ ಬಂದ ನಂತರ ರೈತರ ಸಾಲ ಮನ್ನಾ ಮಾಡಲಾಗಿತ್ತು. ಛತ್ತೀಸಘಡದಲ್ಲಿ ಅಥಿ ಹೆಚ್ಚುಬೆಂಬಲ ಬೆಲೆ ನೀಡಲಾಗಿದೆ. ಹಿಮಾಚಲದಲ್ಲಿ ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ತರುತ್ತೇವೆ ಎಂದು ಹೇಳಿದ್ದು, ಅದನ್ನುಜಾರಿಗೊಳಿಸುತ್ತಿದ್ದೇವೆ. ಕರ್ನಾಟಕದಲ್ಲಿ ನಾವು ಕೇವಲ ಮಾತು ನೀಡುತ್ತಿಲ್ಲ. ಗ್ಯಾರಂಟಿ ನೀಡುತ್ತಿದ್ದೇವೆ. ನಾವು ಇಲ್ಲಿಶೇ.100 ರಷ್ಟು ಅಭಿವೃದ್ಧಿ ತರುವ ಗ್ಯಾರಂಟಿ ನೀಡುತ್ತಿದ್ದೇವೆ. 2.50 ಲಕ್ಷ ಹುದ್ದೆಗಳ ಭರ್ತಿ ಮಾಡುತ್ತೇವೆ. 200 ಯುನಿಟ್ವಿದ್ಯುತ್ ಉಚಿತವಾಗಿ ನೀಡುತ್ತೇವೆ. ಬಡವರಿಗೆ 10 ಕೆ.ಜಿ ಅಖ್ಕಿ ಉಚಿತವಾಗಿ ನೀಡುತ್ತೇವೆ. ನಿರುದ್ಯೋಗಿಪದವೀಧರರಿಗೆ ಪ್ರತಿ ತಿಂಗಳು 3 ಸಾವಿರ, ಡಿಪ್ಲೋಮಾ ಪದವೀಧರರಿಗೆ 1500 ರೂ ನಿರುದ್ಯೋಗ ಭತ್ಯೆನೀಡಲಾಗುವುದು. ಮನೆಯೊಡತಿಯರಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು. ನಂದಿನಿಸಂಸ್ಥೆಯನ್ನು ಸಧೃಡಗೊಳಿಸುತ್ತೇವೆ. ಬೇರೆ ಸಹಕಾರಿ ಸಂಸ್ಥೆಗಳ ದಾಳಿಯಿಂದ ರಕ್ಷಣೆ ಮಾಡುತ್ತೇವೆ.

ಬಿಜೆಪಿ ನಾಯಕರು ಇಲ್ಲಿಗೆ ಬಂದು ವಿಚಿತ್ರವಾಗಿ ಮಾತನಾಡುತ್ತಿದ್ದಾರೆ, ಪ್ರಧಾನಿಗಳು ಬಂದು ವಿರೋಧ ಪಕ್ಷಗಳು ನನ್ನಸಮಾಧಿ ತೋಡಲು ಬಯಸುತ್ತಿವೆ ಎಂದು ಹೇಳಿದ್ದಾರೆ. ಇದು ಎಂತಹ ಮಾತುಗಳು. ಈದೇಶದಲ್ಲಿ ಯಾರೊಬ್ಬರೂ ರೀತಿ ಆಲೋಚನೆ ಮಾಡುವುದಿಲ್ಲ. ನಮ್ಮ ಪ್ರಧಾನಿಗಳ ಆರೋಗ್ಯ ಉತ್ತಮವಾಗಿರಲಿ ಎಂದು ನಾವು ಆಶೀಸುತ್ತೇವೆ. ಆದರೆ ಇದು ಚುನಾವಣೆಯ ವಿಚಾರವೇ? ಇಂತಹ ವಿಚಿತ್ರ ವಿಚಾರಗಳ ಬಗ್ಗೆ ಚರ್ಚೆ ಮಾಡುವ ಬದಲು, ನಿರುದ್ಯೋಗ, ಬೆಲೆ ಏರಿಕೆಯಂತಹ ಪ್ರಮುಖ ವಿಚಾರಗಳ ಬಗ್ಗೆ ಯಾಕೆ ಮಾತನಾಡುವುದಿಲ್ಲ? ಈಚುನಾವಣೆಯಲ್ಲಿ ನಿಮ್ಮಸಾಧನೆಗಳ ವಿಚಾರಗಳ ಮೇಲೆ ನೀವು ಹೆಚ್ಚು ಮಾತನಾಡಬೇಕು. ಇದು ನಿಮ್ಮ ಜವಾಬ್ದಾರಿ. ಚುನಾವಮೆಮೋದಿಯವರ ಬಗ್ಗೆ ಅಲ್ಲ, ಇದು ಯಾವುದೇ ರಾಜಕೀಯ ನಾಯಕರ ಬಗ್ಗೆ ಅಲ್ಲ. ಚುನಾವಣೆ ಕರ್ನಾಟಕ ರಾಜ್ಯದವಿಚಾರವಾಗಿದೆ. ಕನ್ನಡಿಗರ ಅಸ್ಮಿತೆ, ಭವಿಷ್ಯದ ಬಗ್ಗೆ ಚುನಾವಣೆ ನಡೆಯುತ್ತಿದೆ. ನಿಮಗೆ ಎಲ್ಲಾ ರೀತಿಯ ಸಹಾಯಮಾಡಬೇಕಿದ್ದ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿವೆ.

ಚುನಾವಮೆ ನಿಮ್ಮ ಚುನಾವಣೆ, ನಿಮ್ಮ ಮಕ್ಕಳ ಭವಿಷ್ಯ, ನಿಮ್ಮ ಪ್ರದೇಶ ಹಾಗೂ ಸಂಸ್ಕೃತಿಯ ರಕ್ಷಣೆಯಚುನಾವಣೆ ಎಂದು ನೀವು ಅರ್ಥಮಾಡಿಕೊಳ್ಳದಿದ್ದರೆ ದೊಡ್ಡ ಪ್ರಮಾದವೇ ಆಗುತ್ತದೆ. ನಾನು ನಿಮ್ಮ ಪರಿಸ್ಥಿತಿ ಬಗ್ಗೆಹೇಳಿದ್ದನ್ನು ನಂಬದಿದ್ದರೆ, ನಿಮ್ಮ ಅನುಭವದ ಆಧಾರದ ಮೇಲೆ ನೀವು ಆಲೋಚನೆ ಮಾಡಿ. ಸರ್ಕಾರ ಬಂದನಂತರ ನಿಮ್ಮ ಜೀವನದಲ್ಲಿ ಬದಲಾವಣೆಯಾಗಿದೆಯೇ ಇಲ್ಲವೇ ಎಂದು ಆಲೋಚಿಸಿ. ನಿಮ್ಮ ಜೀವನದಲ್ಲಿ ಸುಧಾರಣೆಬಂದಿದೆಯಾ? ಬೆಲೆ ಏರಿಕೆಯಾಗಿದೆಯೋ ಇಲ್ಲವೋ? ಬದುಕಿನಲ್ಲಿ ಕಷ್ಟಗಳು ಹೆಚ್ಚಾಗಿವೆಯೋ ಇಲ್ಲವೋ? ನಿಮ್ಮ ಅನುಭವಗಳ ಆಧಾರದ ಮೇಲೆ ಆಲೋಚಿಸಿ ಮತ ಚಲಾಯಿಸಿ. ಲೂಟಿ ಮಾಡುವ ಸರ್ಕಾರ ಕಿತ್ತೊಗೆಯಿರಿ. ನಿಮ್ಮ ಹಿತಕಾಯುವ ಸರ್ಕಾರ ಆಧಿಕಾರಕ್ಕೆ ತನ್ನಿ. ಕರ್ನಾಟಕದ ಸಂಸ್ಕೃತಿ ಅರ್ಥಮಾಡಿಕೊಂಡು ನಿಮ್ಮ ಹೆಮ್ಮೆ ಹೆಚ್ಚಿಸುವ ಸರ್ಕಾರತನ್ನಿ.

ನೀವೆಲ್ಲರೂ ಸೇರಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದು ನಿಮ್ಮ ಬದುಕಿನಲ್ಲಿಬದಲಾವಣೆ ತರುವ ವಿಶ್ವಾಸವಿದೆ.

kanews

kanews

Leave a Reply

Your email address will not be published. Required fields are marked *