ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 2 ನೇ ಬಾರಿ ಸೌಮ್ಯ ರೆಡ್ಡಿ

ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 2 ನೇ ಬಾರಿ ಸೌಮ್ಯ ರೆಡ್ಡಿ ರವರ ಗೆಲುವು ಖಚಿತ.

2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಈ ಸಂದರ್ಭದಲ್ಲಿ ಸೌಮ್ಯ ರೆಡ್ಡಿ ರವರು ಸಚಿವರಾಗುವುದು ಸಹ ನಿಶ್ಚಿತ ಎಂದು ಜಯನಗರ ವಿಧಾನಸಭಾ ಕ್ಷೇತ್ರದ ಶಾಕಾಂಬರಿ ನಗರ ವಾರ್ಡ್ ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರು ಹಾಗೂ ನಾಗರೀಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.
ಶ್ರೀಮತಿ.ಸೌಮ್ಯ ರೆಡ್ಡಿ ರವರು ಜಯನಗರದ ಅಭಿವೃದ್ಧಿಗೆ ಸಾಕಷ್ಟು ಶ್ರಮವಹಿಸಿ ದುಡಿಯುತ್ತಿದ್ದಾರೆ
ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಜನರೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡು ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ
ಅದರಲ್ಲೂ ವಿಶೇಷವಾಗಿ ಭ್ರಷ್ಟ ಮುಕ್ತ,ಗುಣಮಟ್ಟದ ಅಭಿವೃದ್ಧಿಗೆ. ಆದ್ಯತೆ ನೀಡುವಲ್ಲಿ ಅವರು ಅತ್ಯಂತ ಪ್ರಾಮುಖ್ಯತೆಯನ್ನು ನೀಡಿದ್ದಾರೆ
ಸರ್ಕಾರಿ ಆಸ್ಪತ್ರೆಗಳಲ್ಲಿ ಲಂಚಗುಳಿತನವನ್ನು ಕೊನೆಗಾಣಿಸಿ ಸಾರ್ವಜನಿಕರ ಸಂಕಷ್ಟಕ್ಕೆ ತಕ್ಷಣ ಹೊಂದಿಸಿದ್ದಾರೆ
ಜನರಿಗೆ ಸ್ಪಂದಿಸಬೇಕೆಂದು ಅನೇಕ ಬಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಸಂಬಂಧಪಟ್ಟ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ
ನಿರ್ಲಕ್ಷ ವಹಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿಧಾನಸಭೆಯಲ್ಲೂ ಸಹ ಧ್ವನಿ ಎತ್ತಿದ ಏಕೈಕ ಮಹಿಳ ಶಾಸಕಿ ಎಂದರೆ ಅದು ಶ್ರೀಮತಿ.ಸೌಮ್ಯ ರೆಡ್ಡಿ ಎಂದು ಅವರ ನಿಷ್ಪಕ್ಷಪಾತ ಸೇವೆಯನ್ನ ಮೆಚ್ಚಿಕೊಂಡರು.
ಜಯನಗರದ ಶಾಕಂಬರಿ ನಗರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ಆಯೋಜಕರಾದ ಬೆಂಗಳೂರು ನಗರ ದಕ್ಷಿಣ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಮದನ್ ಮುರಳಿ ರವರು ಶಾಸಕಿ ಹಾಗೂ ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀಮತಿ ಸೌಮ್ಯ ರೆಡ್ಡಿ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿದ್ದರು.
ಜಯನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀಮತಿ ಸೌಮ್ಯ ರೆಡ್ಡಿ ರವರು ಮಾತನಾಡಿ ಜನರ ಸೇವೆಗೆ ನಾನು ಸದಾ ಸಿದ್ಧ ನಿಮ್ಮ ಸೇವೆಯೇ ನನ್ನ ಮೊದಲ ಆದ್ಯತೆ ಎಂದು ತಿಳಿಸಿ ನಿಮ್ಮ ಸೇವೆಗೆ ಕಟ್ಟಿ ಬದ್ಧ ಎಂದೆಂದಿಗೂ ಜಯನಗರದ ಅಭಿವೃದ್ಧಿಗೆ ನಾನು ಹೋರಾಡುತ್ತೇನೆ ಎಂದು ತಿಳಿಸಿದರು.
ಕೆಪಿಸಿಸಿ ಕಾರ್ಯಧ್ಯಕ್ಷರು ಹಾಗೂ ಶಾಸಕರಾದ ಶ್ರೀ ರಾಮಲಿಂಗಾ ರೆಡ್ಡಿ ರವರು ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಮನೋಹರ್, ಕೃಷ್ಣoರಾಜು, ಉದಯಶಂಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರುಣ್ ಕುಮಾರ್. ಹೆಗಡೆ. ಚಂದ್ರಶೇಖರ್ ರಾಜು, ಹಾಗೂ ಮಹಿಳಾ ಕಾಂಗ್ರೆಸ್ ಮುಖಂಡರಾದ ಜಯಶ್ರೀ ಗೌಡ, ಹಾಗೂ ಯುವನಾಯಕರಾದ ರಂಜಿತ್ ಕುಮಾರ್, ಪ್ರಭಾಕರ್ ಅಪ್ಪು, ಸಾಗರ್ ಬುಜ್ಜಿ, ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

kanews

kanews

Leave a Reply

Your email address will not be published. Required fields are marked *