ಸುಮಲತಾ ಸೋಲಿಸಲು ಕುಮಾರಣ್ಣ ದುಂಬಾಲು

ಸುಮಲತಾ ರಾಷ್ಟ್ರ ರಾಜಕಾರಣದಲ್ಲಿ ಪ್ರಸಿದ್ಧಿ ಹೊಂದಿದ್ದೆ… ಮುಖ್ಯಮಂತ್ರಿ ಮಗನನ್ನು ಸೋಲಿಸಿದ್ದಾಗ. ಅಂದರೆ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸುವ ಮೂಲಕ.

ಚಿತ್ರ ನಟ ಮತ್ತು ರಾಜಕಾರಣಿ ಅಂಬರೀಶ್ ಮದುವೆಯಾದ ಮೇಲೆ ಸುಮಲತಾ ಮಂಡ್ಯ ಗೌಡ್ತಿ ಆಗಿದ್ದು. ಆದರೂ ಸಹ ಮಂಡ್ಯದ ಗೌಡರು, ಯಾವುದೇ ಕಾರಣಕ್ಕೂ ಸುಮಲತಾಗೆ ವೋಟ್ ಹಾಕಬಾರದು ಎಂದು ಕುತಂತ್ರ ಗಾರಿಕೆ ಹೆಣೆದರು ಕುಮಾರಣ್ಣ. ಮಂಡ್ಯ ಜಿಲ್ಲೆಯ 7 ಜನ ಜೆಡಿಎಸ್ ಶಾಸಕರಿಗೆ ಕೊಟ್ಟ ಟಾಸ್ಕು ನಾನು ಮುಖ್ಯಮಂತ್ರಿ ಆಗಿದ್ದೇನೆ. ಎಸ್ಟೇ ಹಣ ಖರ್ಚಾದರೂ ಪರವಾಗಿಲ್ಲ, ನನ್ನ ಮಗ ಗೆಲ್ಲಲೇಬೇಕು. ಒಂದು ವೇಳೆ ಸೋತರೆ ಅದಕ್ಕಿಂತ ದೊಡ್ಡ ಅವಮಾನ ಬೇರಿಲ್ಲ ಎಂದು.

ಅದಕ್ಕಾಗಿ ಜಾತಿ ಅಸ್ತ್ರವನ್ನು ಒಳಗೊಂಡು ಸುಮಲತಾ ಗೆ ಡ್ಯಾಮೇಜ್ ಮಾಡುವಂಥ ಯಾವುದೇ ವಿಷಯ ಇದ್ದರೂ ಸಲ ಮುಲಾಜಿಲ್ಲದೆ ಮಂಡ್ಯ ಜಿಲ್ಲೆಯ ಜನರ ಮುಂದೆ ಎಕ್ಸ್ಪೋಸ್ ಮಾಡಬೇಕು ಎಂದು ಕುಮಾರಣ್ಣ ಹೇಳಿದ್ದೆ ತಡ..

ಒಬ್ಬೊಬ್ಬ ಜೆಡಿಎಸ್ ಶಾಸಕರು ಸುಮಲತಾ ಗೌಡ್ತಿ ಅಲ್ಲ, ಅಂಬರೀಶ್ ಸತ್ತಾಗ ಕುಮಾರಸ್ವಾಮಿ ಸಾಕಷ್ಟು ಸಹಾಯ ಮಾಡಿದ್ದಾರೆ, ಅಂಬರೀಶ್ ಬದುಕಿದ್ದಾಗ ಸುಮಲತಾ ಸರಿಯಾಗಿ ನೋಡಿಕೊಳ್ಳಲಿಲ್ಲ್ಲ. ಗೆದ್ದರೆ ಮಂಡ್ಯ ಕಡೆ ತಿರುಗಿ ನೋಡಲ್ಲ. ಬೆಂಗಳೂರು ಸೇರಿಕೊಂಡು ಬಿಡ್ತಾರೆ ಹೀಗೆ ಲಂಗು ಲೋಟಕು ಅಂತ ಬಾಯಿಗೆ ಬಂದಂತೆ ನಿಂದಿಸಿದ್ದು, ಟೀಕಿಸಿದ್ದು ಮಾಡಿದರು.

ಹೆಚ್.ಡಿ.ಕೆ. ಮತ್ತು ಡಿ.ಕೆ ಶಿವಕುಮಾರ್ ಇವರಿಬ್ಬರು ನಾವು ಜೋಡೆತ್ತು ಗಳು, ನಾವು ಚಿಕ್ಕಂದಿನಿಂದ ನೇಗಿಲು ನೊಗಕ್ಕೆ ಹೆಗಲು ಕೊಟ್ಟು ಹೊಲದಲ್ಲಿ ದುಡಿದು ವ್ಯವಸಾಯ ದಿಂದ ಇವತ್ತು ಕೋಟಿ ಕೋಟಿ ಸಂಪಾದಿಸಿದ್ದೇವೆ.

ಆದ್ದರಿಂದ ರೈತರ ಕಷ್ಟ ಏನು ಅಂತ ಗೊತ್ತು. ಆದ್ದರಿಂದ ನಿಖಿಲ್ ಕುಮಾರ್ ಸ್ವಾಮಿ ಯನ್ನು ಗೆಲ್ಲಿಸಿದರೆ ರೈತರ ಕಷ್ಟಗಳಿಗೆ ಸ್ಪಂದಿಸಿ ರೈತರ ಜೊತೆ ಸೇರಿ ವ್ಯವಸಾಯ ಮಾಡಿಕೊಂಡು ಇರುತ್ತಾರೆ ಎಂಬ ರೀತಿ ಮಾತನಾಡಿದ್ದೆ ಮಾತನಾಡಿದ್ದು

ಆದ್ರೆ ಅದೇ ಸುಮಲತಾ ಪರ ನಿಂತ ದರ್ಶನ್, ಯಶ್, ಮುಂತಾದ ಚಲನಚಿತ್ರ ನಟರನ್ನು ಬಣ್ಣ ಹಚ್ಚಿಕೊಂಡು ನಟನೆ ಮಾಡೋರಿಗೆ ಜನರ ಕಷ್ಟ ಏನು ಗೊತ್ತು ಎಂದು ಹಿಯಾಳಿಸಿದ್ದರು. ಈ ಮಾತಿನ ಭರದಲ್ಲಿ ತಮ್ಮ ಮಗನು ಬಣ್ಣ ಹಚ್ಚಿ ಕೊಂಡು ನಟನೆ ಮಾಡಿದ್ದು ಮರೆತು ಬಿಟ್ರು.

ಚುನಾವಣೆ ಮುಗಿದ ನಾಳೆ ಮಗನ ಲೋಕಸಭಾ ಚುನಾವಣೆಯ ಫಲಿತಾಂಶ ಬರಬೇಕು. ಮಾಧ್ಯಮ ದವರು ನಿಮ್ಮ ಪಕ್ಷ ಮತ್ತು ಮಗ ಗೆಲ್ಲುತ್ತಾರಾ? ಸರ್ ಎಂದು ಕೇಳಿದರೆ.. ನಾಳೆ ರಿಸಲ್ಟ್ ನೋಡಿ. ನೀವು ಮಾದ್ಯಮದವರು ಏನೆಲ್ಲಾ ನಮ್ಮ ಪಕ್ಷ ಸೋಲುತ್ತೆ ಅಂತ ಹೇಳಿದ್ದಿರಿ ನಾಳೆ ನಮ್ಮ ಒಕ್ಕಲಿಗ ಜಾತಿ ಜನ ನಮ್ಮ ನ್ನು ಮತ್ತು ಜೆಡಿಎಸ್ ಪಕ್ಷವನ್ನು ಯಾವತ್ತೂ ಕೈಬಿಡುವುದಿಲ್ಲ ನಾಳೆ ಕಾಯಿರಿ ಬ್ರದರ್. ಆಗ ನಿಮಗೆ ಸರಿಯಾಗಿ ಉತ್ತರ ಕೊಡುತ್ತೇನೆ ಎಂದಿದ್ದರು.

ಮರುದಿನ ರಿಸಲ್ಟ್ ಬಂದು ಜೆಡಿಎಸ್ ಮತ್ತು ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ ಸುಮಲತಾ ವಿರುದ್ಧ ಸೋತಿದ್ದ.

ಆಗ ಮಾಧ್ಯಮದವರು ಕುಮಾರಣ್ಣ ನಿಮ್ಮ ಪಕ್ಷ ಯಾಕೆ ಸೋತು ಸುಣ್ಣಾವಾಯಿತು ಹೇಳಿ ಬನ್ನಿ ಮಾಧ್ಯಮದ ಮುಂದೆ ಎಂದಾಗ… ಕಾಂಗ್ರೆಸ್ ನವರ ಜೊತೆ ಒಂದು ಮೂಲೆಯಲ್ಲಿ ಕೂತಿದ್ದ ಕುಮಾರಣ್ಣ ಅಲ್ಲಿಂದಲೇ ಮಾಧ್ಯದವರಿಗೆ ಕೈ ಮುಗಿದು, ನಾನು ಮಾಧ್ಯಮದ ಮುಂದೆ ಬರಲ್ಲ ಅಂತ ಹಠ ಹಿಡಿದ ಬಾಯಿ ಮೇಲೆ ಬೆರಳು ಇಟ್ಟುಕೊಂಡು ಮೂಲೆಯಲ್ಲಿ ಕೂತಿದ್ದರು. ಅಂದು ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಮಾಧ್ಯಮದ ಮುಂದೆ ಬರಲೇ ಎಲ್.

ಈಗ ಸುಮಲತಾ ಸಂಸದೆಯಾಗಿ ಆಯ್ಕೆಯಾದ ನಾಲ್ಕು ವರ್ಷಗಳ ಬಳಿಕ ಬಿಜೆಪಿ ಪಕ್ಷಕ್ಕೆ ಬೆಂಬಲಿಸಿದ್ದಾರೆ. ಇದರಿಂದ ಬಿಜೆಪಿ ಪಕ್ಷಕ್ಕೇನೋ ಲಾಭವಾಗಿದೆ. ಆದರೆ ಸುಮಲತಾ ಈಗ ಸಂಕಟದಲ್ಲಿ ಇರುವಂತೆ ಮೇಲ್ನೋಟಕ್ಕೆ ಕಾಣುತ್ತೆ. ಏಕೆಂದರೆ. ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಸುಮಲತಾ ಮೇಡಂ ಅವರನ್ನು ಗೆಲ್ಲಿಸಲು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ಕೆಲವರು ನಿರ್ಧಾರ ಮಾಡಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ನಿಂತಿದ್ದ ಸುಮಲತಾ ಅವರನ್ನು ಗೆಲ್ಲಿಸಿದ್ದರು.

ಈಗ ಬಿಜೆಪಿ ಪಕ್ಷಕ್ಕೆ ಬೆಂಬಲಿಸಿದ್ದ ರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಕೆಲವರು ಅಸಮಾಧಾನಗೊಂಡು ಒಂದು ವೇಳೆ ಸುಮಲತಾ ಮಂಡ್ಯ ಜಿಲ್ಲೆಯಲ್ಲಿ ಎಲ್ಲೆ ಬಿಜೆಪಿ ಪಕ್ಷದಿಂದ ನಿಂತರೆ ಬೆಂಬಲಿಸುವುದಿಲ್ಲ ಎನ್ನುತ್ತಿದ್ದಾರೆ.

ಅದರಲ್ಲೂ ಮುಖ್ಯವಾಗಿ ರೈತ ಸಂಘದ ಪುಟ್ಟಣ್ಣಯ್ಯ ಸುಮಲತಾ ಅವರನ್ನು ಎಂ. ಪಿ. ಚುನಾವಣೆಯಲ್ಲಿ ಬೆಂಬಲಿಸಿದ್ದರು. ಈಗ ಮೇಲುಕೋಟೆ ಕ್ಷೇತ್ರದಿಂದ ದರ್ಶನ್ ಪುಟ್ಟಣ್ಣಯ್ಯ ನಿಲ್ಲುತ್ತಿರುವುದರಿಂದ ಬಿಜೆಪಿ ಪಕ್ಷದ ಪರವಾಗಿ ಈ ಕ್ಷೇತ್ರದಲ್ಲಿ ಮಾತ್ರ ವೋಟು ಕೇಳುವುದಕ್ಕೆ ಸಂಕಟವಾಗು ತ್ತಿದೆ.

ಈಗಾಗಲೇ ಕಾಂಗ್ರೆಸ್ ಪಕ್ಷ ದರ್ಶನ್ ಪುಟ್ಟಣ್ಣಯ್ಯ ಅವರ ವಿರುದ್ಧ ಅಭ್ಯರ್ಥಿಯನ್ನು ನಿಲ್ಲಿಸುತ್ತಿಲ್ಲ್ಲ. ಅದೇ ರೀತಿ ಬಿಜೆಪಿ ಸಹ ನಿಲ್ಲಿಸಬಾರದು ಎಂಬುದು ಸುಮಲತಾ ಬಯಕೆಯಂತೆ. ಆದರೆ ಬಿಜೆಪಿ ಹೈ ಕಮಾಂಡ್ ಮಾತ್ರ ದರ್ಶನ್ ಪುಟ್ಟಣ್ಣಯ್ಯ ವಿರುದ್ದ ಅಭ್ಯರ್ಥಿಯನ್ನು ನಿಲ್ಲಿಸಿಯೆ ನಿಲ್ಲಿಸುತ್ತೇವೆ ಎಂದು ಖಡಕ್ಕಾಗಿ ಹೇಳಿಬಿಟ್ಟೆದೆ.

ಆದ್ದರಿಂದ ಸುಮಲತಾ ಅಂಬರೀಶ್ ದರ್ಶನ್ ಪುಟ್ಟಣ್ಣಯ್ಯ ವಿರುದ್ಧ ಪ್ರಚಾರ ಮಾಡಲೇಬೇಕೆಂದು ಬಿಜೆಪಿ ಹೈ ಕಮಾಂಡ್ ಹೇಳಿದರೆ..ಸುಮಲತಾ ಮೇಡಂ ಯಾವ ನಿಲುವು ತೆಗೆದುಕೊಳ್ಳುತ್ತಾರೆ ಎಂಬುದೇ ಈಗಿರುವ ಕುತೂಹಲ.

ಒಟ್ಟಿನಲ್ಲಿ ನಾನು ಮುಖ್ಯಮಂತ್ರಿ ಆಗಿದ್ದರು ಸಹ ನನ್ನ ಮಗ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿ ನನಗೆ ಮಾತ್ರ ಅಲ್ಲ, ನಮ್ಮ ಪಕ್ಷಕ್ಕೆ ಮುಖಭಂಗ ಮಾಡಿರುವ ಸುಮಲತಾ ಅವರನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಈ ಬಾರಿ ಚುನಾವಣೆಯಲ್ಲಿ ನಿಂತರೆ ಸೋಲಿಸಿ ಎಂದು ಕುಮಾರಸ್ವಾಮಿ ದುಂಬಾಲು ಬೀಳುತ್ತಿರುವುದು ಮಾತ್ರ ಸುಳ್ಳಲ್ಲ.

kanews

kanews

Leave a Reply

Your email address will not be published. Required fields are marked *