ವೈ.ಎಸ್.ವಿ. ದತ್ತಾಗೆ “ಕೈ ಹಿಡಿದ” ಸಿದ್ದು “ಕೈ ಕೊಟ್ಟ” ಡಿಕೆಶಿ “ಬೆಳ್ಳಿ ತಟ್ಟೆ” ಯಲ್ಲಿ


ವೈ.ಎಸ್.ವಿ. ದತ್ತಾಗೆ
“ಕೈ ಹಿಡಿದ” ಸಿದ್ದು
“ಕೈ ಕೊಟ್ಟ” ಡಿಕೆಶಿ
“ಬೆಳ್ಳಿ ತಟ್ಟೆ” ಯಲ್ಲಿ
“ಬೆಳ್ಳಿಗೆ ಕೊಡುಗೆ*!

ರಾಜಕಾರಣದಲ್ಲಿ ಯಾರನ್ನು ಯಾರೋ ನಂಬಿಸಿ, ಮತ್ಯಾರೋ ಬೆನ್ನಿಗೆ ಚೂರಿ ಹಾಕುತ್ತಾರೆ ಎಂಬುದನ್ನು ಕರಾರುವಾಕ್ಕಾಗಿ ಹೇಳಲು ಬರುವುದಿಲ್ಲ. ಇದಕ್ಕೆ ಸದ್ಯದ ನಿದರ್ಶನ ಕಡೂರು ವಿಧಾನಭಾ ಕ್ಷೇತ್ರದ ಮಾಜಿ ಶಾಸಕ ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತಾ.

ರಾಜ್ಯ ರಾಜಕಾರಣದಲ್ಲಿ ಈ ಹೆಸರು ಚಿರಪರಿಚಿತ. ಸುಮಾರು ವರ್ಷಗಳ ಕಾಲ ಜೆಡಿಎಸ್ ಪಕ್ಷದಲ್ಲಿದ್ದು ಕೊಂಡು ದೇವೇಗೌಡರ ನೀಲಿ ಕಣ್ಣಿನ ಹುಡುಗ ಮತ್ತು ದತ್ತು ಪುತ್ರ ಎಂತಲೇ ಜನಜನಿತ.

ಕುಮಾರಸ್ವಾಮಿ ವೈ.ಎಸ್.ವಿ. ದತ್ತಾ ಮಾತ್ರ ಅಲ್ಲ ಅನೇಕ ಜೆಡಿಎಸ್ ನ ಹಿರಿಯ ನಾಯಕರ ಬಗ್ಗೆ ಲಘುವಾಗಿ ಮಾತನಾಡಿ, ದುರಹಂಕಾರದಿಂದ ವರ್ತಿಸಿ, ಇವರೆಲ್ಲಾ ಜೆಡಿಎಸ್ ಪಕ್ಷ ಬಿಟ್ಟು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಕ್ಕೆ ಹೋಗಲು ನೇರ ಕಾರಣರಾಗಿದ್ದಾರೆ. ಎಲ್ಲರನ್ನೂ ಸಂಭಾಳಿಸಿಕೊಂಡು ಹೋಗುವ ನಾಯಕತ್ವದ ಗುಣ ಇಲ್ಲದ ಕುಮಾರಸ್ವಾಮಿ ದುರ್ಬಲ ಜೆಡಿಎಸ್ ಪಕ್ಷದ ನಾಯಕ ಎಂದೇ ಕರೆಯಲ್ಪಡುತ್ತಿದ್ದಾರೆ.

ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಒಂದು ಬಾರಿ ಮಾತ್ರ ಜೆಡಿಎಸ್ ಗೆದ್ದಿದ್ದಕ್ಕೆ ಮುಖ್ಯ ಕಾರಣಕರ್ತ ವೈಎಸ್ ವಿ ದತ್ತಾ. ಈ ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿರುವ ವೈ ಎಸ್ ವಿ ದತ್ತಾ ಸಮಾಜದ ವೋಟು ಗಳು ಸಾವಿರ ದಾಟಲ್ಲ.

ಹೀಗಿರುವಾಗ ಅವರನ್ನು ಜೆಡಿಎಸ್ ಪಕ್ಷದಿಂದ ಗೆಲ್ಲಿಸಿದ್ದು ಪಕ್ಷ ನೋಡಿಯೂ ಅಲ್ಲ, ದೇವೇಗೌಡರ ಮುಖ ನೋಡಿಯೂ ಅಲ್ಲ, ಕುಮಾರ ಸ್ವಾಮಿ ಮುಖ ನೋಡಿಯೂ ಅಲ್ಲ. ದತ್ತಾ ಅವರ ವೈಯಕ್ತಿಕ ವರ್ಚಸ್ಸು ಅವರನ್ನು ಜೆಡಿಎಸ್ ಪಕ್ಷದಿಂದ ಗೆಲ್ಲಿಸಿ ಎಂ ಎಲ್ ಎ ಸ್ಥಾನಕ್ಕೆ ಕೂರಿಸಿತ್ತು.

ದೇವೇಗೌಡರ ಮುಖ ನೋಡಿಕೊಂಡು ಇಷ್ಟು ವರ್ಷ ಜೆಡಿಎಸ್ ನಲ್ಲಿ ಇದ್ದ ವೈ ಎಸ್ ವಿ ದತ್ತಾ ಕೊನೆಗೂ ಕುಮಾರಸ್ವಾಮಿಯ ದುರ್ವರ್ತನೆ, ದುರಹಂಕಾರದ ಮಾತುಗಳನ್ನು ಸಹಿಸಿಕೊಳ್ಳಲಾರದೆ ಈ ಪಕ್ಷವನ್ನು ಯಾವಾಗ ಬಿಡುತ್ತೇನೋ ಎಂದು ಬೇಸತ್ತು ಹೋಗಿದ್ದರು.

ಸಮಯ ಬರಲಿ ಅಂತ ಕಾಯುತ್ತಿದ್ದರು. ಯಾವಾಗ ಅರಸೀಕೆರೆ ಜೆಡಿಎಸ್ ಶಾಸಕ ಶಿವ ಲಿಂಗೆ ಗೌಡ, ಅರಕಲು ಗೂಡು ಶಾಸಕ ಎ. ಟಿ. ರಾಮಸ್ವಾಮಿ, ಗುಬ್ಬಿ ಶಾಸಕ ಶ್ರೀನಿವಾಸ್ ಅವರಿಗೂ ದತ್ತಾ ಅವರಿಗೆ ಕೊಟ್ಟಂತೆ ಕುಮಾರಸ್ವಾಮಿ ಕಿರುಕುಳ ಕೊಟ್ಟರೋ ಅವರೆಲ್ಲ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಮತ್ತು ಬಿಜೆಪಿ ಸೇರಿಬಿಟ್ಟರು.

ಈ ಹಿಂದೆ ಸಿದ್ದರಾಮಯ್ಯಗೆ ಕಿರುಕುಳ ಕೊಟ್ಟು ಜೆಡಿಎಸ್ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದ್ದ ಸಿದ್ದರಾಮಯ್ಯ, ಜೆಡಿಎಸ್ ನಿಂದ ತಮ್ಮಂತೆ ನೊಂದ ಕೆಲವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡ ರು. ಅವರ ಪೈಕಿ ವೈ ಎಸ್. ವಿ ದತ್ತಾ ಒಬ್ಬರು.

ಸಿದ್ದರಾಮಯ್ಯ ವೈ ಎಸ್ ವಿ. ದತ್ತಾ ಅವರನ್ನು ಈ ಬಾರಿ ವಿಧಾನಸಭೆ ಗೆ ಕಡೂರು ಕ್ಷೇತ್ರದಿಂದ ಟಿಕೆಟ್ ಕೊಡಿಸುತ್ತೇನೆ ಎಂದು ಕಾಂಗ್ರೆಸ್ ಗೆ ಕರೆದುಕೊಂಡು ಬಂದು ಡಿ ಕೆ. ಶಿವಕುಮಾರ್ ಸಮ್ಮುಖದಲ್ಲೇ ಭರ್ಜರಿ ಕಾರ್ಯಕ್ರಮದ ಮೂಲಕ ಕಾಂಗ್ರೆಸ್ ಬಾವುಟ ಕೊಟ್ಟು ಸೇರಿಸಿಕೊಂಡರು. ಆಗಲೇ ಇವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಗ್ಯಾರಂಟಿ ಎಂಬ ಮಾತು ಕ್ಷೇತ್ರದ ಜನರಿಂದ ಕೇಳಿಬಂದಿತ್ತು.

ಆದರೆ ಈಗ ಎರಡನೇ ಪಟ್ಟಿ ಬಿಡುಗಡೆಯಾದಾಗ ಕಡೂರು ಕ್ಷೇತ್ರದಿಂದ ವೈ ಎಸ್ ವಿ ದತ್ತಾ ಬದಲು ಆನಂದ್ ಕೆ ಎಸ್. ಅವರಿಗೆ ನೀಡಲಾಗಿದೆ. ಇದಕ್ಕೆ ಕಾರಣ ವೈ ಎಸ್ ವಿ ದತ್ತಾ, “ಡಿ.ಕೆ. ಶಿವಕುಮಾರ್ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ ಆದ್ದರಿಂದ ಅವರು ಮುಖ್ಯಮಂತ್ರಿ ಆಗಲ್ಲ. ಕಾಂಗ್ರೆಸ್ ಏನಾದರೂ ಅಧಿಕಾರಕ್ಕೆ ಬಂದರೆ ನಾನು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲು ಬೆಂಬಲಿಸುತ್ತೇನೆ’ ಎಂದು ಹೇಳಿದ್ದ ವಿಡಿಯೋ ಖಾಸಗಿ ಟಿವಿ ವಾಹಿನಿಯೊಂದರ ಮೂಲಕ ಬಿಡುಗಡೆಯಾಗಿದ್ದು . ಇದು ಡಿ.ಕೆ. ಕೆಂಗಣ್ಣಿಗೆ ಗುರಿಯಾಗಿ, ದತ್ತಾ ಬದಲು ಸಿದ್ದು ಜಾತಿಯವರೇ ಆದ ಕುರುಬ ಜನಾಂಗದ. ಆನಂದ್ ಅವರಿಗೆ ನೀಡಲಾಗಿದೆ.

ಇದರಿಂದಾಗಿ ಸಿದ್ದು ತಮ್ಮ ಜಾತಿಯವರಿಗೆ ಟಿಕೆಟ್ ನೀಡಿದ್ದು ಅಸಮಾಧಾನ ವಿಲ್ಲ ಎಂದು ಒಳಗೊಳಗೇ ಸಂತೋಷ ಪಟ್ಟು ಕೊಂಡಿದ್ದಾರೆ. ಅಲ್ಲದೆ ವೈ ಎಸ್ ವಿ ದತ್ತಾ ಗೆ ನಾನು ನಿಮ್ಮ ಪರವಾಗಿ ಇದ್ದೆ, ಡಿಕೆಶಿ ನಿಮಗೆ ಟಿಕೆಟ್ ಕೊಡಲು ಒಪ್ಪಲಿಲ್ಲ. ಆದ್ದರಿಂದ ನಿಮಗೆ ಕೊಟ್ಟ ಮಾತು ಉಳಿಸಿಕೊಳ್ಳಲಾಗಿಲ್ಲಾ..ಆದರೂ ಚಿಂತೆ ಮಾಡಬೇಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮನ್ನು ಎಂ ಎಲ್ ಸಿ ಮಾಡಿ ಮಂತ್ರಿ ಮಾಡುವುದು ಗ್ಯಾರಂಟಿ ಎಂದಿದ್ದಾರೆ.

ಆದರೆ ಕಡೂರು ಕ್ಷೇತ್ರದ ದತ್ತಾ ಬೆಂಬಲಿಗರು ಮಾತ್ರ ನಿಮಗೆ ಆಸೆ ತೋರಿಸಿ ಮೋಸ ಮಾಡಿರುವ ಕಾಂಗ್ರೆಸ್ ಗೆ ನಿಮ್ಮ ಶಕ್ತಿ ಏನೆಂಬುದನ್ನು ತೋರಿಸಲೆಬೇಕು. ಅದಕ್ಕಾಗಿ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಿ ನಾವು ಗೆಲ್ಲಿಸುತ್ತೆವೆ. ಇಲ್ಲ ನಿಮಗೆ ಮೋಸ ಮಾಡಿದ ಕಾಂಗ್ರೆಸ್ ಸೋಲಿಸು ತ್ತೇವೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂಬುದೇ ಲೇಟೆಸ್ಟ್ ಸುದ್ದಿ.

ಆದರೆ ದತ್ತಾ ಪಕ್ಷೇತ್ರವಾಗಿ ನಿಲ್ಲಲಿ, ನಿಲ್ಲದೆ ಇರಲಿ ಈ ಬಾರಿ ಸುಲಭವಾಗಿ ಗೆಲ್ಲಬಹುದಾದ ಕಡೂರು ಕ್ಷೇತ್ರವನ್ನು ಈ ಬಾರಿಯೂ “ಬೆಳ್ಳಿ ತಟ್ಟೆ”ಯಲ್ಲಿ ಇಟ್ಟು ಶಾಸಕ *ಬೆಳ್ಳಿ ಪ್ರಕಾಶ್” ಗೆ ಕೊಟ್ಟಂತಾಗಿದೆ ಎಂದು ಕಡೂರು ಕ್ಷೇತ್ರದಾದ್ಯಂತ ಕೇಳಿ ಬರುತ್ತಿರುವ ಮಾತುಗಳು ಮಾತ್ರ ಸುಳ್ಳಲ್ಲ.

kanews

kanews

Leave a Reply

Your email address will not be published. Required fields are marked *