ಒಬ್ಬ ಮನೆಯ ಯಜಮಾನ ತನ್ನ ಕುಟುಂಬದ ಸದಸ್ಯರಿಗೆ ಮನೆ ಕಟ್ಟಿಸಿ ನೆಲೆ ನಿಲ್ಲಲು, ಉಣ್ಣಲು ಅವಕಾಶ ಕೊಡುತ್ತಾನೆ. ಕೊನೆಗೆ ಇವರಲ್ಲಿ ತಮಗೆ ನೆಲೆ ನಿಲ್ಲಲು ಮನೆ ಮಾಡಿಕೊಟ್ಟ ಯಜಮಾನನ ವಿರುದ್ಧವೇ ತಿರುಗಿ ಬಿದ್ದು , ಈ ಯಜಮಾನನನ್ನು ಮನೆಯಿಂದ ಹೊರ ಹಾಕದಿದ್ದರೆ ಈ ಮನೆಯ ಯಜಮಾನಿಕೆ ತಮಗೆ ಸಿಗಲ್ಲ ಎಂದು ಸಮಯ ಸಿಕ್ಕಾಗಲೆಲ್ಲಾ ಈ ಯಜಮಾನ ಮತ್ತು ಈತನ ವಿರುದ್ಧ ತಿರುಗಿ ಬೀಳದೆ ನಿಯತ್ತಾಗಿರುವವರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಲೇ ಇರುತ್ತಾರೆ. ಇಂಥವರ ಸಾಲಿನಲ್ಲಿ ಬಿಜೆಪಿ ಎಂಬ ಮನೆ ಕಟ್ಟಿದ ಯಡಿಯೂರಪ್ಪರ ಬಗ್ಗೆ ನಿಯತ್ತಿನಿಂದ ಇರುವವರಿಗೆ ವಿಧಾನಸಭೆ ಗೆ ಟಿಕೆಟ್ ಕೊಟ್ಟರೆ ತಾವು ಬಯಸಿದಂತೆ ಬಿಜೆಪಿ ಎಂಬ ಮನೆಯ ಯಜಮಾನಿಕೆ ನಮಗೆ ಸಿಗೋದಿಲ್ಲ ಎಂದು ಬೀ ಎಸ್ ವೈ ಆಪ್ತರಿಗೆ ಟಿಕೆಟ್ ತಪ್ಪಿಸುವ ಹುನ್ನಾರಕ್ಕೆ ಕೈ ಹಾಕಿದ್ದಾರೆ. ಇವರ ಈ ಕುತಂತ್ರಕ್ಕೆ ಬಲಿಯಾಗುತ್ತಿರುವವರಲ್ಲಿ ಶಿವಮೊಗ್ಗ ಜಿಲ್ಲೆಯ ಯಡಿಯೂರಪ್ಪ ಆಪ್ತರಾದ ಆಯನೂರು ಮಂಜುಾಥ ಸಹ ಒಬ್ಬರು.
ಯಡಿಯೂರಪ್ಪ ವಿರೋಧಿ ಪಾಳೆಯದಲ್ಲಿ ಗುರುತಿಸಿಕೊಂಡಿರುವ ಬಿ.ಎಲ್. ಸಂತೋಷ್, ಪ್ರಹ್ಲಾದ್ ಜೋಷಿ, ಸಿ.ಟಿ. ರವಿ, ಮಾಧು ಸ್ವಾಮಿ, ಬಸನಗೌಡ ಪಾಟೀಲ್ ಯತ್ನಾಳ್ ಮುಂತಾದ ಕೆಲವರ ಸಾಲಿನಲ್ಲಿ ಶಿವಮೊಗ್ಗದ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಕೂಡ ಒಬ್ಬರು.
ಈ ಈಶ್ವರಪ್ಪ ಬಿ ಎಸ್ ವೈ ವಿರೋಧಿಗಳ ಜೊತೆ ಸೇರಿಕೊಂಡು ಶಿವಮೊಗ್ಗ ಜಿಲ್ಲೆಯ ಯಡಿಯೂರಪ್ಪ ಅತ್ಯಾಪ್ತರಾದ ಆಯನೂರು ಮಂಜನಾಥ್ ಅವರಿಗೆ ಬರುವ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡಬಾರದೆಂದು ಹೈ ಕಮಾಂಡ್ ಕಿವಿ ಕಚ್ಚಿದ್ದಾರೆ.
ಇವರು ಮಾತ್ರ ಅಲ್ಲ ಸಾಧ್ಯ ವಾದಷ್ಟು ಮಟ್ಟಿಗೆ ಯಡಿಯೂರಪ್ಪ ಜೊತೆ ಗುರುತಿಸಿಕೊಂಡಿರುವ ಅನೇಕರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೂಡಲೇ ಬಾರದೆಂದು ಹಠಕ್ಕೆ ಬಿದ್ದಿದ್ದಾರೆ.
ಇದರ ಸುಳಿವನ್ನು ಸೂಕ್ಷ್ಮವಾಗಿ ಅರಿತಿರುವ ಯಡಿಯೂರಪ್ಪ ಪಾಳೆಯದಲ್ಲಿ ಗುರುತಿಸಿಕೊಂಡಿರುವ ಬೇವಿನ ಮರದ, ವೈ ಎ. ಗೋಪಾಲಕೃಷ್ಣ,ಭಗವಂತ ಖೂಬಾ ಮುಂತಾದವರು ಬಿಜೆಪಿ ಯಲ್ಲಿ ಟಿಕೆಟ್ ಅನ್ನು ಬಿ ಎಸ್ ವೈ ವಿರೋಧಿಗಳು ತಪ್ಪಿಸುತ್ತಾರೆ ಎಂಬ ಕಾರಣಕ್ಕೆ ಬಿಜೆಪಿ ಬಿಟ್ಟು ಈಗಾಗಲೇ ಬೇರೆ ಬೇರೆ ಪಕ್ಷಗಳತ್ತ ಗುಳೇ ಹೋಗಿದ್ದು.
ಈಗ ಇವರ ಸಾಲಿಗೆ ಯಡಿಯೂರಪ್ಪ ಆಪ್ತರಾದ ಆಯನೂರು ಮಂಜುನಾ್ ಅವರಿಗೆ ಟಿಕೆಟ್ ಕೊಡಬಾರದು ಎಂದು ಕೆ.ಎಸ್. ಈಶ್ವರಪ್ಪ ಹಠಕ್ಕೆ ಬಿದ್ದಿದ್ದಾರೆ. ಕಾರಣ ಈ ಹಿಂದೆ ಈಶ್ವರಪ್ಪ ಸಹಿತ ಬಿ ಎಸ್ ವೈ. ವಿರೋಧಿಗಳು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಬೇಕೆಂದು ಹೊರಟಾಗ ಯಡಿಯೂರಪ್ಪ ಪರವಾಗಿ ಭದ್ರವಾಗಿ ನಿಂತವರ ಪೈಕಿ ಆಯನೂರು ಮಂಜುನಾ್ ಸಹ ಒಬ್ಬರು.
ಆದ್ದರಿಂದ ಬಿ ಎಸ್ ವೈ ಪರವಾಗಿ ನಿಂತಿರುವ ಇಂಥವರನ್ನು ಟಿಕೆಟ್ ಕೊಡಿಸದೆ ಬಿಜೆಪಿ ಪಕ್ಷದಿಂದಲೇ ಹೊರ ಹೋಗುವಂತೆ ಮಾಡಿಬಿಟ್ಟರೆ ಭವಿಷ್ಯದಲ್ಲಿ ನಮ್ಮನ್ನು ವಿರೋಧಿಸುವ, ಯಡಿಯೂರಪ್ಪ ಅವರನ್ನು ಓಲೈಸುವ ಇಂಥವರ ಅನುಪಸ್ಥಿತಿಯಲ್ಲಿ ಮುಖ್ಯಮಂತ್ರಿ ಆಗುವ ಕನಸು ಮತ್ತು ಇಡೀ ಬಿಜೆಪಿ ಪಕ್ಷದಲ್ಲಿ ನಾವು ಹೇಳಿದ್ದೆ ವೇದ ವಾಕ್ಯ ಆಗುತ್ತದೆ ಎಂದು ಈ ರೀತಿ ಬಿ ಎಸ್ ವೈ ವಿರೋಧಿಗಳು ಕುತಂತ್ರಗಾರಿಕೆ ಮಾಡುತ್ತಿದ್ದಾರೆ.
ಒಂದು ವೇಳೆ ಬಿಜೆಪಿ ಹೈ ಕಮಾಂಡ್ ಯಡಿಯೂರಪ್ಪ ವಿರೋಧಿಗಳಾದ ಈಶ್ವರಪ್ಪ ಮತ್ತಿತರ ಮಾತಿಗೆ ಹಿತ್ತಾಳೆ ಕಿವಿ ಕೊಟ್ಟು ಬಿ ಎಸ್ ವೈ ವಿರೋಧಿಗಳು ಟಿಕೆಟ್ ತಪ್ಪಿಸಿದರೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುತ್ತೇನೆ ಎಂಬ ನಿರ್ಧಾರಕ್ಕೆ ಬಂದಿರುವಂತೆ ಅವರ ನಡೆ ಮತ್ತು ನುಡಿಗಳು ವ್ಯಕ್ತಪಡಿಸುತ್ತಿವೆ. ಈ ಮೂಲಕ ಈಶ್ವರಪ್ಪ ಆಗಲಿ ಅವರ ಮಗ ಆಗಲಿ ಶಿವಮೊಗ್ಗದಿಂದ ಟಿಕೆಟ್ ಪಡೆದು ಬಿಜೆಪಿ ಪಕ್ಷದಿಂದ ನಿಂತಿದ್ದೆ ಆದಲ್ಲಿ ಇವರನ್ನು ನಾನು ಖಂಡಿತಾ ಸೋಲಿಸಿವುದಕ್ಕೆ ಏನೆಲ್ಲಾ ಮಾಡಬೇಕೋ ಅದನ್ನೆಲ್ಲ ಮಾಡಲು ಸಿದ್ಧ ಎಂದು ಶಪಥ ಮಾಡಿರುವಂತೆ ಕಾಣುತ್ತಿದೆ.
ಅಲ್ಲಿಗೆ ಬಿಜೆಪಿ ಏನಾದರೂ ಈ ಬಾರಿ ಮೂರಂಕಿ ಮುಟ್ಟದಿದ್ದರೆ ಅದಕ್ಕೆ ಮುಖ್ಯ ಕಾರಣ ಕರ್ತರು ಯಡಿಯೂರಪ್ಪ ವಿರೋಧಿಗಳೇ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.